Excellent PU College: ಮೂಡುಬಿದಿರೆ ಎಕ್ಸಲೆಂಟ್‌ ಪಿಯು ಕಾಲೇಜಿಗೆ ಭರ್ಜರಿ ಫಲಿತಾಂಶ

Moodbidri Excellent PU College: ಮೂಡುಬಿದಿರೆಯ ಎಕ್ಸಲೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು, ನೀಟ್ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

Jul 18, 2026 - 12:32
Jul 18, 2026 - 12:43
Excellent PU College: ಮೂಡುಬಿದಿರೆ ಎಕ್ಸಲೆಂಟ್‌ ಪಿಯು ಕಾಲೇಜಿಗೆ ಭರ್ಜರಿ ಫಲಿತಾಂಶ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ಪಿಯು ಕಾಲೇಜು (Moodbidri Excellent PU College) ವಿದ್ಯಾರ್ಥಿಗಳು, ನೀಟ್ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಎಸ್.ಎಸ್ 650 ಅಂಕ ಗಳಿಸಿದ್ದಾರೆ.

ತನ್ಮಯಿ ಎ ಕೋಟಿ 647, ಚಿನ್ಮಯಿ ಬೆಳ್ತೂರು 629, ಹೇಮಾ ಯು. 624, ಶ್ಲೋಕ್ ರಾಘವೇಂದ್ರ ರಾವ್ 615, ಈಶ್ವರ ಪುಂಡಲೀಕಪ್ಪ ಕೊಪ್ಪಳ್ 612 ಮತ್ತು ಮೋಹಿತ್ ವೈ.ಪಿ 611 ಅಂಕಗಳನ್ನು ಪಡೆದಿದ್ದಾರೆ. 

ಬರೋಬ್ಬರಿ 600ಕ್ಕೂ ಅಧಿಕ ಅಂಕಗಳನ್ನು 7 ವಿದ್ಯಾರ್ಥಿಗಳು, 550ಕ್ಕೂ ಹೆಚ್ಚು ಅಂಕಗಳನ್ನು 32 ವಿದ್ಯಾರ್ಥಿಗಳು, 500ಕ್ಕೂ ಅಧಿಕ ಅಂಕಗಳನ್ನು 70 ವಿದ್ಯಾರ್ಥಿಗಳು ಹಾಗೂ 450ಕ್ಕೂ ಅಧಿಕ ಅಂಕಗಳನ್ನು 124 ವಿದ್ಯಾರ್ಥಿಗಳು ಗಳಿಸಿದ್ದಾರೆ. 

216 ವಿದ್ಯಾರ್ಥಿಗಳು 400 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಯುವರಾಜ್ ಜೈನ್, ರಶ್ಮಿತಾ ಜೈನ್, ಪ್ರಶಾಂತ್ ಹೆಗ್ಡೆ, ರಾಮಮೂರ್ತಿ, ಪುಷ್ಪರಾಜ್, ಸಂಪತ್ ಕುಮಾರ್ ಡಿ.ಪಿ, ದಯಾನಂದ್, ಸುನಾದ್ ರಾಜ್ & ತೇಜಸ್ವಿ ಭಟ್ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ಅಭಿನಂದಿಸಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.