Hydrogen Train: ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

Hydrogen Train: ದೇಶದ ಮೊಟ್ಟ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿಶಾನೆ ತೋರಿದರು.

Jul 17, 2026 - 15:46
Jul 17, 2026 - 15:46
Hydrogen Train: ದೇಶದ ಮೊದಲ ಹೈಡ್ರೋಜನ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಹರಿಯಾಣ: ಇಲ್ಲಿನ ಜಿಂದ್ ಜಂಕ್ಷನ್‌ನಲ್ಲಿ ಶುಕ್ರವಾರ ದೇಶದ ಮೊಟ್ಟ ಮೊದಲ ಹೈಡ್ರೋಜನ್ ರೈಲಿಗೆ (Hydrogen Train) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿಶಾನೆ ತೋರಿದರು. ಕೇಂದ್ರ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಹಾಗೂ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸಾಥ್ ನೀಡಿದರು.

ಇದು 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ತಯಾರಿಸಲಾದ ರೈಲಾಗಿದೆ. ಜೊತೆಗೆ ವಿಶ್ವದ ಅತಿ ಉದ್ದದ ಹೈಡ್ರೋಜನ್-ಚಾಲಿತ ಪ್ಯಾಸೆಂಜರ್ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಒಟ್ಟು 10 ಕೋಚ್‌ಗಳನ್ನು ಒಳಗೊಂಡಿದ್ದು, 2,600 ಪ್ರಯಾಣಿಕರು ಸಂಚಾರ ಮಾಡಬಹುದು. ಪರಿಸರ ಸ್ನೇಹಿ ರೈಲಾಗಿದ್ದು, ಯಾವುದೇ ಹೊಗೆ ಅಥವಾ ವಿಷಕಾರಿ ಅನಿಲಗಳನ್ನು ಹೊರಸೂಸುವುದಿಲ್ಲ. ಬದಲಿಗೆ ಕೇವಲ ನೀರಿನ ಆವಿ ಮತ್ತು ಶಾಖವನ್ನು ಬಿಡುಗಡೆಗೊಳಿಸುತ್ತದೆ.

ಈ ರೈಲು (74009/ 74010) ಪ್ರತಿದಿನ ಬೆಳಗ್ಗೆ 7:40ಕ್ಕೆ ಜಿಂದ್‌ನಿಂದ ಹೊರಟು 9:40ಕ್ಕೆ ಸೋನೆಪತ್‌ನ್ನು ತಲುಪುತ್ತದೆ. ಅಲ್ಲಿಂದ 10:40ಕ್ಕೆ ಸಂಚಾರವನ್ನು ಆರಂಭಿಸಿ, ಮಧ್ಯಾಹ್ನ 1 ಗಂಟೆಗೆ ಜಿಂದ್‌ಗೆ ಹಿಂದಿರುಗುತ್ತದೆ.  89 ಕಿ.ಮೀ ಉದ್ದದ ಈ ಮಾರ್ಗವನ್ನು ಎರಡು ಗಂಟೆಗಳಲ್ಲಿ ಕ್ರಮಿಸುತ್ತದೆ. ಗಂಟೆಗೆ 75 ಕಿ.ಮೀ ವೇಗದಲ್ಲಿ ಕಾರ್ಯಾಚರಿಸಲಿದೆ.   

ಜಿಂದ್, ಪಾಂಡು ಪಿಂಡಾರ, ಲಲಿತ್ ಖೇರಾ, ಭಂಬೆವಾ, ಈಶಾಪುರ ಖೇರಿ, ಬುಟಾನಾ, ಖಂಡ್ರೈ, ಗೋಹಾನಾ, ರಬ್ರಾ, ಲಾಥ್, ಮೋಹನಾ ಹಾಗೂ ಬರ್ವಾಸ್ನಿ ನಿಲ್ದಾಣಗಳಲ್ಲಿ ನಿಲುಗಡೆಯಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.