Taluk Level Khokho Tournament: ವಿವೇಕಾನಂದ ಪಿಯು ಕಾಲೇಜಿನ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ
Vivekananda PU College: ತಾಲೂಕು ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿವೇಕಾನಂದ ಪಿಯು ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ ಪಡೆದಿದ್ದು, ಇದರೊಂದಿಗೆ ಜಿಲ್ಲಾ ಮಟ್ಟಕ್ಕೂ ಆಯ್ಕೆಯಾಗಿದೆ.
ಪುತ್ತೂರು: ತೆಂಕಿಲ ಕ್ರೀಡಾಂಗಣದಲ್ಲಿ ನರೇಂದ್ರ ಪದವಿಪೂರ್ವ ಕಾಲೇಜು ಸಹದೊಂದಿಗೆ, 'ಶಾಲಾ ಶಿಕ್ಷಣ ಇಲಾಖೆ' ಪದವಿಪೂರ್ವ ವಿಭಾಗದ ವತಿಯಿಂದ ಈಚೆಗೆ ನಡೆದ ತಾಲೂಕು ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ವಿವೇಕಾನಂದ ಪಿಯು ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನವನ್ನು ಪಡೆದಿದೆ. ಈ ಮೂಲಕ ಜಿಲ್ಲಾ ಮಟ್ಟಕ್ಕೂ ಆಯ್ಕೆಯಾಗಿದೆ.
ಬಾಲಕರ ತಂಡದ ಪರವಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಶಶಾಂಕ್, ಚಂದನ್, ದಿಶಾಲ್ ಎ, ಉದಯ್ ಎಸ್, ಥುಷನ್ ಎ, ತರುಣ್ ಎ ರೈ, ಪ್ರದ್ವಿತ್ ರೈ ಎಂ, ಯಶ್ವಿನ್ ಬ, ಜೀವಿತ್, ಎಸ್.ಡಿ ಮಸಲಿ, ಪೃಥ್ವಿರಾಜ್ ಜಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ತರುಣ್ ಕುಮಾರ್ ಬಿ.ಆರ್, ದೇಶ್ಚಿತ್ ಎಸ್, ಘನಶ್ಯಾಮ್, ಲಿಖಿತ್, ಕೀರ್ತನ್, ಸತ್ವಿಕ್, ಮಾನ್ವಿತ್ ಭಾಗವಹಿಸಿದ್ದರು.

ಹಾಗೆಯೇ ಇದೇ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ.
ಬಾಲಕಿಯರ ತಂಡದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ಸಂಗೀತ ಎಸ್. ಎಂ, ವಿನ್ಯಾ ರೈ, ಶ್ವೇತಶ್ರೀ, ಭೂಮಿಕಾ, ವೃಷ್ಟಿ ರೈ, ನಿದೀಕ್ಷ ಎ, ಪ್ರಣಿತಾ ಕೆ, ಹರ್ಷಿಣಿ, ವಿದ್ಯಾ ಎಂ, ಹೆಚ್.ಡಿ ಹೇಮಾದ್ರಿ , ಸಾನ್ವಿ ಅಂಚನ ವೈ.ವೈ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ವಿಂದ್ಯಾ ಎಂ.ಆರ್, ನಳಿನ ಎ.ಬಿ, ಅನನ್ಯ ಗೌಡ ಸ್ಥಾನ ಗಿಟ್ಟಿಸಿಕೊಂಡಿದ್ದರು.
ವೈಯಕ್ತಿಕ ಪ್ರಶಸ್ತಿಗಳು:
* ದ್ವಿತೀಯ ವಾಣಿಜ್ಯ ವಿಭಾಗದ ದೇಶ್ಚಿತ್ ಎಸ್ - ಬೆಸ್ಟ್ ಡಿಫೆಂಡರ್
* ಲಿಖಿತ್ - ಬೆಸ್ಟ್ ಆಲ್ ರೌಂಡರ್
* ಪ್ರಥಮ ವಿಜ್ಞಾನ ವಿಭಾಗದ ವೃಷ್ಟಿ ರೈ - ಬೆಸ್ಟ್ ಡಿಫೆಂಡರ್
ಇವರುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್, ಡಾ.ಜ್ಯೋತಿ ಹಾಗೂ ಯತೀಶ್ ಅವರು ತರಬೇತಿಯನ್ನು ನೀಡಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.