Today Gold Price: ಆಭರಣದ ಬೆಲೆ ಹೆಚ್ಚಳ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ ಹಾಗೂ ಪ್ಲಾಟಿನಂ ಬೆಲೆಯು ಹೆಚ್ಚಳವಾಗಿದೆ. ಆದಾಗ್ಯೂ ಬೆಳ್ಳಿ ದರ ಮಾತ್ರ ಎಂದಿನಂತೆ ಸ್ಥಿರವಾಗಿದೆ.

Jul 31, 2026 - 11:53
Today Gold Price: ಆಭರಣದ ಬೆಲೆ ಹೆಚ್ಚಳ

ಬೆಂಗಳೂರು: ಆಷಾಢ ಮಾಸವಾಗಿದ್ದರೂ ದಿನದಿಂದ ದಿನಕ್ಕೆ ಆಭರಣದ ಬೆಲೆ ಸ್ವಲ್ಪ - ಸ್ವಲ್ಪವೇ ಏರಿಕೆಯಾಗುತ್ತಿದೆ. ಇದರಿಂದ ಖರೀದಿದಾರರ ಜೇಬಿಗೆ ಕತ್ತರಿ ಬೀಳುತ್ತಿದೆ. 

ಚಿನಿವಾರ ಪೇಟೆಯಲ್ಲಿ ಇಂದು (ಶುಕ್ರವಾರ) ಚಿನ್ನ ಹಾಗೂ ಪ್ಲಾಟಿನಂ ದರವು ಹೆಚ್ಚಳವಾಗಿದೆ. ಆದಾಗ್ಯೂ ಬೆಳ್ಳಿ ಬೆಲೆ ಮಾತ್ರ ಎಂದಿನಂತೆ ಸ್ಥಿರವಾಗಿದೆ. 

ರಾಜ್ಯದಲ್ಲಿ 24 ಕ್ಯಾ. 10 ಗ್ರಾಂ ಚಿನ್ನದ ದರ ರೂ.270 ಏರಿಕೆಯಾಗಿ ರೂ.1,44,600 ಆಗಿದೆ. 22 ಕ್ಯಾ. 10 ಗ್ರಾಂ ಚಿನ್ನದ ಬೆಲೆ ರೂ.250 ಹೆಚ್ಚಳವಾಗಿ ರೂ.1,32,550ಕ್ಕೆ ತಲುಪಿದೆ. 18 ಕ್ಯಾ. 10 ಗ್ರಾಂ ಚಿನ್ನದ ದರ ರೂ.200 ಏರಿಕೆಯಾಗಿ ರೂ.1,08,450 ಆಗಿದೆ. 

ಅದೇ ರೀತಿಯಲ್ಲಿ 10 ಗ್ರಾಂ ಪ್ಲಾಟಿನಂ ಬೆಲೆ ರೂ.1,080 ಹೆಚ್ಚಳವಾಗಿ ರೂ.49,920ಕ್ಕೆ ಬಂದಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ. 

ಷೇರಪೇಟೆ ಸಕಾರತ್ಮಕ ವಹಿವಾಟು:

ಇಂದು ಷೇರುಪೇಟೆ ಆರಂಭಿಕ ವಹಿವಾಟು ಸಕಾರತ್ಮಕವಾಗಿದೆ. ಸೆನ್ಸೆಕ್ಸ್ 41.90 ಅಂಕಗಳು ಏರಿಕೆಯಾಗಿ 77,970.05 ಅಂಕಗಳಿಗೆ ತಲುಪಿದೆ. ನಿಫ್ಟಿ 34.25 ಅಂಕಗಳು ಹೆಚ್ಚಳವಾಗಿ 24,351.40 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. 

ಬಜಾಜ್ ಫಿನ್‌ಸರ್ವ್, ಮಹೀಂದ್ರಾ & ಮಹೀಂದ್ರಾ, ಬಿಇಎಲ್, ಆಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ ಮತ್ತು ಎಸ್‌ಬಿಐ ಷೇರುಗಳು ಲಾಭದಲ್ಲಿವೆ. ಐಟಿ ವಲಯದ ಇನ್ಫೋಸಿಸ್, ಟಿಸಿಎಸ್, ಹೆಚ್‌ಸಿಎಲ್ ಹಾಗೂ ಟೆಕ್ ಮಹೀಂದ್ರಾ ಷೇರುಗಳು ನಷ್ಟದಲ್ಲಿವೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.