Vivo S2: ಹೊಸ 'ವಿವೋ ಎಸ್2' ಫೋನ್ ಬಿಡುಗಡೆ.. ಬೆಲೆ ಎಷ್ಟು?
Vivo S2: ಬಹುನೀರಿಕ್ಷಿತ ವಿವೋ ಎಸ್2 ಸ್ಮಾರ್ಟ್‌ಫೋನ್ ಗುರುವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ.
ಬಹುನೀರಿಕ್ಷಿತ ವಿವೋ ಎಸ್2 (Vivo S2) ಸ್ಮಾರ್ಟ್‌ಫೋನ್ ಗುರುವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಆಗಸ್ಟ್ 11 ರಿಂದ ವಿವೋ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ಖರೀದಿಗೆ ಲಭ್ಯವಿದೆ.
ಇದು 8GB RAM + 128GB ಹಾಗೂ 8GB RAM + 256GB ಇಂಟರ್ನಲ್ ಸ್ಟೋರೇಜ್‌ನ್ನು ಹೊಂದಿದೆ. ಕ್ರಮವಾಗಿ 39,999 ರಿಂದ ರೂ.44,999 ದರವನ್ನು ಪಡೆದಿದೆ. ಸಿಲ್ಕ್ ವೈಟ್, ಸಫೈರ್ ಬ್ಲೂ & ರೀಗಲ್ ಬ್ರಾನ್ಜ್ ಎಂಬ ಆಕರ್ಷಕವಾದ ಬಣ್ಣಗಳೊಂದಿಗೂ ಸಿಗುತ್ತದೆ.
6.83 ಇಂಚಿನ ಕರ್ವ್ಡ್ AMOLED ಡಿಸ್‌ಪ್ಲೇ ಇದ್ದು, 1.5K ಅಲ್ಟ್ರಾ ಹೆಚ್‌ಡಿ ರೆಸಲ್ಯೂಶನ್ ಹಾಗೂ 120 Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಡ್ಯುಯಲ್ ಸ್ಪೀಕರ್‌ಗಳಿದ್ದು, ಫಿಲಂ, ಮ್ಯೂಸಿಕ್, ಗೇಮಿಂಗ್ ಹಾಗೂ ವಿಡಿಯೋ ಕಾಲ್ ಸಂದರ್ಭದಲ್ಲಿ ಅತ್ಯುತ್ತಮವಾದ ಗುಣಮಟ್ಟದ ಆಡಿಯೋ ಕೇಳಿಸುತ್ತದೆ.
ಈ ಫೋನ್ ಶಕ್ತಿಶಾಲಿಯಾದ 7,050mAh ಬ್ಲೂವೋಲ್ಟ್ ಬ್ಯಾಟರಿಯನ್ನು ಪಡೆದಿದ್ದು, 33 ಗಂಟೆಗಳ ಕಾಲ ವಿಡಿಯೋವನ್ನು ವೀಕ್ಷಿಸಬಹುದು. 44W ಫ್ಲ್ಯಾಶ್‌ಚಾರ್ಜ್ ಆಯ್ಕೆಯನ್ನು ಬೆಂಬಲಿಸಿಸುತ್ತದೆ.
50MP ಸೋನಿ ಮೇನ್ ಸೆನ್ಸರ್ ಕ್ಯಾಮೆರಾ ಮತ್ತು 32 MP ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದು, ಫೋಟೋ ಕ್ವಾಲಿಟಿ ಸಹ ಚೆನ್ನಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7360-ಟರ್ಬೊ ಪ್ರೊಸೆಸರ್‌ನ್ನು ಒಳಗೊಂಡಿದೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.