ದಿನ ಭವಿಷ್ಯ
13-06-2025

ದಿನ ಭವಿಷ್ಯ
ಅದೃಷ್ಟ ಸಂಖ್ಯೆ 4
ಜ್ಯೋತಿರ್ಮಯ
೧.ಮೇಷ:
ವೃತ್ತಿರಂಗದಲ್ಲಿ ಹಿರಿತನದ ಹೊಣೆಕೆ. ಪೂರಕ ಆದಾಯ ಗಳಿಕೆ ಪ್ರಯತ್ನದಲ್ಲಿ ಮುನ್ನಡೆ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಪತ್ನಿಯ ಕಡೆಯ ಬಂಧುಗಳ ಮನೆಗೆ ಭೇಟಿ. ಕುಟುಂಬದ ವ್ಯಕ್ತಿಯೊಬ್ಬರಿಗೆ ಗೌರವದ ಪ್ರಶಸ್ತಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಸ್ತೋತ್ರ ಓದಿ.
೨.ವೃಷಭ:
ಉದ್ಯೋಗಸ್ಥರಿಗೆ ಸಾಮಾನ್ಯ ನೆಮ್ಮದಿ. ಬಂಧುಗಳ ಕಡೆಯಿಂದ ಶುಭ ವಾರ್ತೆ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ. ಕೇಟರಿಂಗ್ ವ್ಯವಹಾರಸ್ಥರಿಗೆ ಉತ್ತಮ ಲಾಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
೩ಮಿಥುನ:
ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿಕೆ. ಉದ್ಯೋಗಸ್ಥರಿಗೆ , ಸಮಾಧಾನದ ಅನುಭವ. ಉದ್ಯಮಿಗಳಿಗೆ ಸಮಸ್ಯೆಗಳಿಂದ ಬಿಡುಗಡೆ. ರಾಜಿ ಪಂಚಾತಿಕೆಯಿಂದ ದಾಯಾದಿ ಕಲಹ ಪರಿಹಾರ. ಕುಟುಂಬದ ಹಿರಿಯ ಮನೆಯಲ್ಲಿ ದೇವತಾರಾಧನೆ. ಗಣಪತಿ ಅಥರ್ವಶೀರ್ಷ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೪. ಕರ್ಕಾಟಕ:
ಉದ್ಯೋಗದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಉದ್ಯಮಗಳು ಕ್ಷಿಪ್ರ ಗತಿಯಲ್ಲಿ ಮುನ್ನಡೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ. ಸ್ವಪ್ರಯತ್ನದಿಂದ ಆರೋಗ್ಯವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಮನೆಯಲ್ಲಿ ದೇವತಾ ಕಾರ್ಯ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೫.ಸಿಂಹ:
ಉದ್ಯೋಗ ವಲಯದಲ್ಲಿ ವಿಶೇಷ ಮನ್ನಣೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ವಿವಾಹ ಸಮಸ್ಯೆ ನಿವಾರಣೆಗೆ ಸಮಗ್ರ ಯೋಜನೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ. ಗಣೇಶ ಕವಚ, ನರಸಿಂಹ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
೬.ಕನ್ಯಾ:
ಉದ್ಯೋಗಸ್ಥರಿಗೆ ಉಳಿತಾಯದ ಆಕರ್ಷಣೆ.ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಿಂದ ದೂರವಿದ್ದರೆ ಕ್ಷೇಮ..ದುಷ್ಟರೊಂದಿಗೆ ವಾಗ್ವಾದ ಬೇಡ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.ಗಣೇಶ ಪಂಚರತ್ನ ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭. ತುಲಾ:
ಉದ್ಯೋಗಸ್ಥರ ಪ್ರತಿಭೆ ಅನಾವರಣ .ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಕ್ಕಳಿಗೆ ಸಂಗೀತ, ನೃತ್ಯದಲ್ಲಿ ಆಸಕ್ತಿ. ಬಂಗಾರದ ಅಂಗಡಿಗೆ ಭೇಟಿ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಉತ್ಕರ್ಷದ ಕಾಲ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೮.ವೃಶ್ಚಿಕ:
ಕವಿದಿದ್ದ ಆಲಸ್ಯ ತೊಲಗಿ ಕಾರ್ಯೋತ್ಸಾಹ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಆತಂಕ. ವಾಹನ ಬಿಡಿಭಾಗ ವ್ಯಾಪಾರಿಗಳಿಗೆ ಸುಯೋಗ. ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ.ಗಣೇಶ ಕವಚ, ವಿಷ್ಣು ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
೯.ಧನು:
ನೆರಯವರ ಸಮಸ್ಯೆಗಳಿಗೆ ಸ್ಪಂದಿಸಿ ಜನಾದರಣೆ ಪ್ರಾಪ್ತಿ. ಸ್ವಂತ ಉದ್ಯಮದ ಬೆಳವಣಿಗೆ ಮುಂದುವರಿಕೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಅವಕಾಶಗಳು ಗೋಚರ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ಮಹಿಷಮರ್ದಿನಿ ಸ್ತೋತ್ರ, ಆಂಜನೇಯ ಸ್ತೋತ್ರ ಓದಿ.
೧೦.ಮಕರ:
ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿಯೋಜನೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಆಪ್ತರ ಸಲಹೆ ಪಾಲನೆಯಿಂದ ಶುಭ. ಹಿತಶತ್ರುಗಳ ಕುತಂತ್ರ ವಿಫಲ. ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.
೧೧. ಕುಂಭ:
ಉದ್ಯೋಗದಲ್ಲಿ ಕಡಿಮೆಯಾದ ಜವಾಬ್ದಾರಿಗಳು. ಗ್ರಾಹಕರ ಬೇಡಿಕೆಗೆ ಶೀಘ್ರ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಹೊಸ ಅವಕಾಶಗಳು. ಕುಶಲಕರ್ಮಿಗಳ ಕೀರ್ತಿ ವರ್ಧನೆ. ಕುಟುಂಬದಲ್ಲಿ ಶಿಶು ಜನನ. ಗಣೇಶ ಪಂಚರತ್ನ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗದಲ್ಲಿ ಸಂತೃಪ್ತಿ. ಪರಿಚಿತ ವ್ಯಕ್ತಿಗಳಿಂದ. ಸಕಾಲದಲ್ಲಿ ಸಹಾಯ. ಸರಕಾರಿ ಕಾರ್ಯಾಲಯಗಳಲ್ಲಿ ಸಕಾರಾತ್ಮಕ ಸ್ಪಂದನ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.