ದಿನ ಭವಿಷ್ಯ   

02-09-2025

Sep 2, 2025 - 16:16
ದಿನ ಭವಿಷ್ಯ   

           

 ಜ್ಯೋತಿರ್ಮಯ

           ಅದೃಷ್ಟ ಸಂಖ್ಯೆ  2
                    

೧.ಮೇಷ:

 ಹೊಸ ಮಾಸ ಹಾಗೂ ಸಪ್ತಾಹದ  ಎರಡನೆಯ ದಿನ  ಮಂದಗತಿಯಲ್ಲಿ ಆರಂಭ. ಉದ್ಯೋಗ ಸ್ಥಾನದಲ್ಲಿ ಮತ್ತಷ್ಟು ಕೆಲಸದ ಹೊರೆ. ಸ್ಥಗಿತವಾಗಿದ್ದ ಉತ್ಪಾದನಾ ಚಟುವಟಿಕೆಗಳಿಗೆ ಚಾಲನೆ. ಬಂಧುವರ್ಗದಲ್ಲಿ ವಿವಾಹದ ಸಿದ್ಧತೆ.  ಮಕ್ಕಳ ಅಧ್ಯಯನಾಸಕ್ತಿ ಪೋಷಣೆಗೆ ಸಹಾಯ. ಗಣಢಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

೨.ವೃಷಭ:

 ಹೊಸ ಬಗೆಯ ಸಂಪಾದನಾ ಮಾರ್ಗಗಳ ಅನ್ವೇಷಣೆ. ಉದ್ಯೋಗ ಸ್ಥಾನದಲ್ಲಿ ಸಹಕಾರ ವೃದ್ಧಿ. ಗೃಹೋದ್ಯಮದ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ. ಉದ್ಯೋಗಾಸಕ್ತರಿಗೆ  ನೌಕರಿ  ಸಿಗುವ ಸೂಚನೆ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ ಸನ್ನಿಹಿತ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.


೩. ಮಿಥುನ:

 ಬೌದ್ಧಿಕ ಕೆಲಸಗಾರರ ಶೋಷಣೆ. ಉದ್ಯಮಿಗಳ ಪಾಲಿಗೆ ಒಳ್ಳೆಯ ದಿನ. ಕೃಷಿ ಭೂಮಿಯ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.  ಓದು, ಬರವಣಿಗೆಯಲ್ಲಿ ಆಸಕ್ತಿ. ಮನೆಮಂದಿಯ ನಡುವೆ  ಪ್ರೀತಿ, ಸಾಮರಸ್ಯ ವೃದ್ಧಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಶ್ಯಾಮಲಾ ದಂಡಕ ಓದಿ.
 

೪.ಕರ್ಕಾಟಕ:

  ಮನಸ್ಸಿನ ಮಾಲಿನ್ಯ ಕಳೆಯಲು  ಧ್ಯಾನದ ಪ್ರಯೋಗ. ಉದ್ಯೋಗ ಸ್ಥಾನದಲ್ಲಿ ಆಮಿಷಗಳ ಬಗೆಗೆ ಎಚ್ಚರ.  ಹಿರಿಯರನ್ನು ಕಾಡುತ್ತಿದ್ದ  ಆರೋಗ್ಯ ಸಮಸ್ಯೆ ನಿವಾರಣೆ. ಖಾದಿ ಉದ್ಯಮಕ್ಕೆ ಶುಭಕಾಲ ಸನ್ನಿಹಿತ. ದೇವತಾರಾಧನೆ,  ಸತ್ಸಂಗಗಳ ಕಡೆಗೆ ಸೆಳೆತ. ಗಣೇಶ ಅಷ್ಟಕ, ದತ್ತಪಂಜರ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.


೫ ಸಿಂಹ:

  ದಿನ ಆರಂಭವಾಗುತ್ತಿದ್ದಂತೆ ಕೆಲಸಗಳ ಒತ್ತಡ. ಉದ್ಯೋಗ ಸ್ಥಾನದಲ್ಲಿ ಹೊಸ ಪ್ರಯೋಗಗಳ ಯೋಚನೆ. ವಸ್ತ್ರ, ಆಭರಣಾದಿ‌ ವ್ಯಾಪಾರಿಗಳಿಗೆ  ನಿರೀಕ್ಷೆ ಮೀರಿ ವ್ಯಾಪಾರ. ಇಲೆಕ್ಟ್ರಿಕಲ್,‌ ಇಲೆಕ್ಟ್ರಾನಿಕ್ಸ್ ಕೆಲಸಗಾರರಿಗೆ ಕೈತುಂಬಾ ಕೆಲಸ.  ಮನೆಯವರೊಂದಿಗೆ  ದೇವೀಕ್ಷೇತ್ರಕ್ಕೆ ಭೇಟಿ.

೬. ಕನ್ಯಾ:

  ಹೊಸ  ಅನುಭವಗಳಿಂದ  ಜೀವನಾಸಕ್ತಿ ವೃದ್ಧಿ. ಇಲೆಕ್ಟ್ರಾನಿಕ್ಸ್ , ಇಲೆಕ್ಟ್ರಿಕಲ್ಸ್ ವ್ಯಾಪಾರ ಬೆಳವಣಿಗೆ. ವೃತ್ತಿ ಪರಿಣತಿ ಹೆಚ್ಚಿಸಿಕೊಳ್ಳಲು ನುರಿತವರ  ಮಾರ್ಗದರ್ಶನ. ಬಂಧುವರ್ಗದಲ್ಲಿ ವಿವಾಹ ಸಿದ್ಧತೆ. ಹಿರಿಯರು ,ಮಹಿಳೆಯರು, ಮಕ್ಕಳಿಗೆ ಸಂಭ್ರಮ. ಗಣೇಶ ಪಂಚರತ್ನ, ನರಸಿಂಹ ಸ್ತೋತ್ರ, ಲಕ್ಷ್ಮೀಸ್ತೋತ್ರ ಓದಿ.

೭ತುಲಾ:

  ಧ್ಯಾನ, ಜಪಗಳಿಂದ ಚಿತ್ತಸ್ಥೈರ್ಯಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ವಿಶ್ವಾಸ ಮೂಡಿಸುವ ವಾತಾವರಣ. ಕಸೂತಿ, ಕರಕೌಶಲದ ಕೆಲಸಗಾರರಿಗೆ ಬೇಡಿಕೆ. ಮಕ್ಕಳ ಬಹುಮುಖ ಪ್ರತಿಭೆ ಬೆಳವಣಿಗೆಗೆ ಪ್ರೋತ್ಸಾಹ. ಪ್ರಕೃತಿ ಚಿಕಿತ್ಸೆಯಿಂದ ಆರೋಗ್ಯ ವೃದ್ಧಿ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೮.ವೃಶ್ಚಿಕ:

   ದಿನಾರಂಭದಲ್ಲಿ   ನಿಶ್ಚಿಂತೆಯ ಮನಃಸ್ಥಿತಿ. ಉದ್ಯೋಗ ಸ್ಥಾನದಲ್ಲಿ ಕೆಲಸಕ್ಕೆ ಉತ್ತೇಜನ. ಗೃಹೋದ್ಯಮ ಉತ್ಪನ್ನಗಳಿಗೆ ಹೊಸ ಗಿರಾಕಿಗಳು.   ಉದ್ಯೋಗ ಅರಸುವ ಶಿಕ್ಷಿತರಿಗೆ  ಮಾರ್ಗದರ್ಶನ.  ಸಂಗೀತ ವಾದ್ಯ ಕಲಿಯುವ  ಆಸಕ್ತಿ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ ಓದಿ.


೯. ಧನು:

  ನಿಮ್ಮ ಕ್ರಿಯಾಶೀಲತೆಗೆ ಸವಾಲಾಗುವಷ್ಟು ಕೆಲಸಗಳ ಹೊರೆ. ಉದ್ಯೋಗಸ್ಥರ ನಡುವೆ ಪರಸ್ಪರ ಸಹಕಾರ.  ಸಣ್ಣ ಪ್ರಮಾಣದ ಗೃಹೋದ್ಯಮ ಪ್ರಗತಿಯಲ್ಲಿ. ಉದ್ಯೋಗಾಸಕ್ತರಿಗೆ ಯಥೋಚಿತ ಮಾರ್ಗದರ್ಶನ.  ಮನೆಯಲ್ಲಿ ಇಷ್ಟದೇವತಾರ್ಚನೆ. 
ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
 

೧೦. ಮಕರ:

 ಮನಸ್ಸಿಗೆ ಮುದ ನೀಡುವಂತೆ ಮಾತಾಡಿರಿ. ಅಧ್ಯಾಪಕ ವರ್ಗಕ್ಕೆ ಕೆಲಸದ ಒತ್ತಡ.  ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮಕ್ಕಳ ಜ್ಞಾನವೃದ್ಧಿಗೆ ವಿಶೇಷ ಪ್ರಯತ್ನ. ದೀರ್ಘಾವಧಿ ಹೂಡಿಕೆ ಕುರಿತು ಅಧ್ಯಯನ.  ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

  ಕಾರ್ಯರಂಗದ ಕರೆಗಳಿಗೆ ಶೀಘ್ರ ಸ್ಪಂದನ. ಉದ್ಯೋಗಸ್ಥರಿಗೆ ಹೊಸ ‌ವಿಭಾಗಕ್ಕೆ ಪ್ರವೇಶ. ವೃತ್ತಿರಂಗದ ಮಿತ್ರರಿಂದ ಮಾರ್ಗದರ್ಶನಕ್ಕೆ ಕೋರಿಕೆ. ಗ್ರಾಹಕರ  ಬೇಡಿಕೆಗಳಿಗೆ ಸ್ಪಂದಿಸುವ ಒತ್ತಡ. ಸೋದರ ಸಂಬಂಧಿಯ ಮನೆಯಲ್ಲಿ ದೇವತಾಕಾರ್ಯ‌. ಗಣೇಶ ಕವಚ, ಶಿವ ಕವಚ, ಶನಿಮಹಾತ್ಮೆ ಓದಿ.


೧೨.ಮೀನ:
  ರಾಶಿ ಬಿದ್ದಿರುವ  ಕೆಲಸಗಳ ಒತ್ತಡ. ಹೊಸ ಜನಸೇವಾ ಕಾರ್ಯಗಳಿಗೆ ಪೀಠಿಕೆ.  ನಿರ್ಮಾಣ ವ್ಯವಹಾರ  ಮತ್ತೆ ಆರಂಭ. ಗುರುಸಮಾನ ವ್ಯಕ್ತಿಯ ಆಗಮನ.ಅನ್ಯ ಸಮಾಜದ ವ್ಯಕ್ತಿಯಿಂದ ಅಕಸ್ಮಾತ್ ಸಹಾಯ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.