ದಿನ ಭವಿಷ್ಯ.

17-11-2025

Nov 17, 2025 - 17:15
ದಿನ ಭವಿಷ್ಯ.

                ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 8

೧.ಮೇಷ:
 ಸಪ್ತಾಹದ  ಮೊದಲನೆಯ ದಿನ ವೃತ್ತಿಕ್ಷೇತ್ರದಲ್ಲಿ  ಸೌಖ್ಯ. ಹಿರಿಯ ಜವಾಬ್ದಾರಿಗಳ ನಿರ್ವಹಣೆ. ಕೆಲವು ಬಗೆಯ ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಲಾಭ.  ಹೊಸ ವ್ಯವಹಾರಕ್ಕೆ ಕೈಹಾಕುವ ವಿಷಯದಲ್ಲಿ ಗೊಂದಲ. ಆಸ್ತಿ ವಿವಾದ ಮಾತುಕತೆಯಿಂದ ಪರಿಹಾರ.  ಸಂಸಾರದಲ್ಲಿ ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ಆದಿತ್ಯ ಹೃದಯ, ಶನಿಮಹಾತ್ಮೆ  ಓದಿ

೨. ವೃಷಭ:

ಎಚ್ಚರಿಕೆಯ ನಡೆ ವಿವೇಕಸಮ್ಮತವಾಗಿದ್ದರೂ ಸಂಶಯ ಪ್ರವೃತ್ತಿ ಸಲ್ಲದು. ಪಾಲುದಾರಿಕೆ ವ್ಯವಹಾರದಲ್ಲಿ ನಿಧಾನ ಅಭಿವೃದ್ಧಿ .  ಉದ್ಯೋಗಸ್ಥರಿಗೆ ಸ್ವಲ್ಪ ಒಳ್ಳೆಯ ಸ್ಥಿತಿ. ವಸ್ತ್ರ ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ  ಲಾಭ. ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಯಂತ್ರೋಪಕರಣ ಹಾಗೂ ವಾಹನ‌ ಬಿಡಿಭಾಗ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
  
೩. ಮಿಥುನ:

ಏನೇ ಬಂದರೂ ನಿಭಾಯಿಸುವ ಧೈರ್ಯ ಇರಲಿ. ಉದ್ಯೋಗದಲ್ಲಿ ಸ್ಥಾನಕ್ಕೆ ಸರಿಯಾದ  ಗೌರವ ಹಾಗೂ ಪ್ರತಿಫಲ ಖಚಿತ.   ಉದ್ಯಮ ವಿಸ್ತರಣೆಗೆ ಪಾಲುದಾರರೊಡನೆ ಸಮಾಲೋಚನೆ..
 ಹಣದ ಬೆಳೆಗಳನ್ನು ಬೆಳೆಸುವ ಕಾರ್ಯದಲ್ಲಿ ಪ್ರಗತಿ. ಹತ್ತಿರದ ದೇವಾಲಯಕ್ಕೆ ಭೇಟಿ. ಹಿರಿಯರ ಆರೋಗ್ಯ ಉತ್ತಮ. ಗಣೇಶ ಕವಚ, ಆದಿತ್ಯ ಹೃದಯ, ರಾಮರಕ್ಷಾ ಸ್ತೋತ್ರ, ದೇವೀ ಕವಚ ಓದಿ.

೪. ಕರ್ಕಾಟಕ:

 ನಿಯೋಜಿತ ಕಾರ್ಯಗಳು ಬಹತೇಕ ಮುಕ್ತಾಯ.  ಸಣ್ಣ  ಹಾಗೂ ಮಧ್ಯಮ ಉದ್ಯಮಿಗಳಿಗೆ  ಆದಾಯ ವೃದ್ಧಿ. ಮಧ್ಯಮ ವರ್ಗದ ಉದ್ಯೋಗಸ್ಥರಿಗೆ ಆದಾಯ- ವೆಚ್ಚ ಸಮತೋಲನದ ಸಮಸ್ಯೆ. ಉದ್ಯಮ ಸುಧಾರಣೆಗೆ ಬ್ಯಾಂಕ್  ಹಾಗೂ ಸುಲಭ ಬಡ್ಡಿಯ ಖಾಸಗಿ ನೆರವು ಲಭ್ಯ. ಬಂಧುವರ್ಗದಲ್ಲಿ ಶಿಶು ಜನನ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸುಧಾರಣೆ. ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೫. ಸಿಂಹ:

  ನಿಯೋಜಿತ ಕಾರ್ಯಗಳು ನಿರ್ವಿಘ್ನವಾಗಿ ಸಾಗಿ ನೆಮ್ಮದಿ. ಉದ್ಯೋಗಸ್ಥರಿಗೆ ಮಾಮೂಲಿನಂತೆ  ಕೆಲಸದ ಒತ್ತಡ.  ಉದ್ಯಮದ ಹೊಸ ವಿಭಾಗದಲ್ಲಿ ಪ್ರಗತಿ. ಖಾಸಗಿ ಸಾರಿಗೆ ಸಂಸ್ಥೆಗಳ  ನಿರ್ವಹಣೆ ವೆಚ್ಚ ಏರಿಕೆ.  ಕಟ್ಟಡ ನಿರ್ಮಾಪಕರಿಗೆ ಶೀಘ್ರ ಕೆಲಸ ಮುಗಿಸುವ ತರಾತುರಿ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.  ಮನೆಯಲ್ಲಿ ಎಲ್ಲರಿಗೂ ಸಂಭ್ರಮ. ಗಣೇಶ ಪಂಚರತ್ನ, ಶಿವಸಹಸ್ರನಾಮ, ದೇವೀಸ್ತೋತ್ರ ಓದಿ.


೬. ಕನ್ಯಾ:

  ಪರಿಣತ ಕುಶಲ ಕರ್ಮಿಗಳಿಗೆ   ಉದ್ಯೋಗ ಲಾಭ.ವಿದ್ಯುತ್ ಮತ್ತು ಇಲೆಕ್ಟ್ರಾನಿಕ್ಸ್ ವ್ಯಾಪಾರಿಗಳಿಗೆ  ಒಳ್ಳೆಯ  ದಿನ.  ಕುಟುಂಬದ ಸದಸ್ಯರ ಸೌಹಾರ್ದಸಮ್ಮಿಲನ. ಪ್ರಾಪ್ತ ವಯಸ್ಕ ಮಕ್ಕಳ ವಿವಾಹದ ಚಿಂತೆ. ಉದ್ಯೋಗಾಕಾಂಕ್ಷಿಗಳಿಗೆ  ಅವಕಾಶಗಳು ಗೋಚರ. ಕೃಷ್ಯುತ್ಪಾದನೆ ಮಾರಾಟದಿಂದ ಸಾಮಾನ್ಯ ಲಾಭ. ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಪಾರಾಯಣ ಮಾಡಿ.


೭ ತುಲಾ:
 ಆರೋಗ್ಯ ಸುಧಾರಣೆಯಾಗಿ ಆತ್ಮವಿಶ್ವಾಸ ವೃದ್ಧಿ. ಹೊಸ ಹುಮ್ಮಸ್ಸಿನೊಂದಿಗೆ ಕಾರ್ಯ ನಿರ್ವಹಣೆ. ಮಾಲಿಕ- ನೌಕರರ ನಡುವೆ  ಸಾಮರಸ್ಯವೃದ್ಧಿ. ನ್ಯಾಯಾಲಯದಲ್ಲಿ ವಿವಾದ ವಿಚಾರಣೆಯಲ್ಲಿ ಪ್ರಗತಿ. ಆಹಾರದ ಬೆಳೆಗಳಿಂದ ಸಾಮಾನ್ಯ ಲಾಭ. ಖಾದಿ ವಸ್ತ್ರ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಾಮರಸ್ಯದ ವಾತಾವರಣ. ಗಣೇಶ ಕವಚ, ನವಗ್ರಹ ಸ್ತೋತ್ರ, ಆಂಜನೇಯ ಸ್ತೋತ್ರ ಪಾರಾಯಣ ಮಾಡಿ.


೮ ವೃಶ್ಚಿಕ:

 ಸರ್ವ ವಿಧಗಳಲ್ಲಿಯೂ ಸಂತೃಪ್ತಿಯ ದಿನ. ಉದ್ಯೋಗಸ್ಥಾನದಲ್ಲಿ  ಹಿತಶತ್ರು ಬಾಧೆ ನಿವಾರಣೆ. ಉತ್ಪನ್ನಗಳ  ಗುಣಮಟ್ಟ  ಏರಿಕೆಯಿಂದ  ವ್ಯಾಪಾರ ಸುಧಾರಣೆ. ಮಕ್ಕಳ ಉದ್ಯಮ ಅಭಿವೃದ್ಧಿ. ವಿದೇಶದಲ್ಲಿರುವ  ಬಂಧುಗಳ ಆಗಮನ. ಕುಟುಂಬದಲ್ಲಿ ಹರ್ಷದ ವಾತಾವರಣ. ತಾಯಿಯ ಆರೋಗ್ಯ ಸುಧಾರಣೆ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೯. ಧನು:

ಸ್ವಾಭಿಮಾನದ ಬದುಕಿಗೆ ಸರಿಹೊಂದದ ವಿದ್ಯಮಾನಗಳು.  ಉದ್ಯೋಗಸ್ಥ ಪುರುಷರಿಗೆ ಜವಾಬ್ದಾರಿ ಬದಲಾವಣೆ.  ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಯಂತ್ರೋದ್ಯಮಗಳಿಗೆ ಎದುರಾಗಿದ್ದ. ಸಮಸ್ಯೆ ನಿವಾರಣೆ. ಸಾಮಾಜಿಕ ಹೋರಾಟಗಾರರಿಗೆ ದುಷ್ಟಶಕ್ತಿಗಳಿಂದ ಬೆದರಿಕೆ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶಿವಾಷ್ಟೋತ್ತರ ಶತನಾಮಾವಳಿ ಓದಿ


೧೦:ಮಕರ:

 ತಾಮಸಿಕ ಶಕ್ತಿಗಳೆದುರು  ಹೋರಾಟದಲ್ಲಿ ಸಾತ್ವಿಕರ ವಿಜಯ. ನ್ಯಾಯದ ಪರವಾಗಿ ಹೋರಾಡುವ‌ ಶಕ್ತಿಗಳ ಮೇಲುಗೈ. ಉದ್ಯೋಗ ಸ್ಥಾನದ ಒತ್ತಡ ನಿವಾರಣೆ. ವಸ್ತ್ರ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಮಧ್ಯಮ‌ ಲಾಭ‌. ಖಾದ್ಯ ಪದಾರ್ಥಗಳ ವ್ಯಾಪಾರಿಗಳಿಗೆ ಉತ್ತಮ ಆದಾಯ. ಗಣೇಶ ಕವಚ, ಶನಿಸ್ತೋತ್ರ, ಹನುಮಾನ್ ಚಾಲೀಸಾ ಓದಿ.

೧೧.ಕುಂಭ:

ಹಲವು ಮೂಲಗಳಿಂದ  ವೃದ್ಧಿಯಾದ ಆದಾಯ. ಉದ್ಯೋಗದಲ್ಲಿ  ಹೊಸ ಜವಾಬ್ದಾರಿಗಳ ನಿಯೋಜನೆ. ನವೀಕೃತ ಕಟ್ಟಡದಲ್ಲಿ ವ್ಯವಹಾರ ಸುಧಾರಣೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಸರಕಾರಿ ನೌಕರಿ ಸಿಗುವ ಸಾಧ್ಯತೆ. ವ್ಯವಹಾರದ ಸಂಬಂಧ  ಹತ್ತಿರದ ಊರಿಗೆ ಪ್ರಯಾಣ. ಬಡವರಿಗೆ ಚಿಕಿತ್ಸೆಗೆ ಸಹಾಯ.ಕೆಲಸದ ನಡುವೆ  ಮುಂದುವರಿದ ಸಮಾಜ ಸೇವಾ ಕಾರ್ಯಗಳ ಮುಂದುವರಿಕೆ. ಗಣೇಶ ಕವಚ,  ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಪಾರಾಯಣ ಮಾಡಿ, 

೧೨.ಮೀನ:
ದಿನವಿಡೀ ಶುಭಫಲಗಳ ಅನುಭವ.ವೃತ್ತಿರಂಗದಲ್ಲಿ ಹೊಸ‌ ವ್ಯಕ್ತಿಗಳ ಸಂಪರ್ಕ. ಹಿತಶತ್ರುಗಳ ಬಾಧೆ ನಿವಾರಣೆ. ಸರಕಾರಿ ಅಧಿಕಾರಿಗಳ ಮತ್ತು ನೌಕರರ ಸಕಾಲಿಕ ಸ್ಪಂದನ. ವ್ಯವಹಾರ ವಿಸ್ತರಣೆಗೆ ಎದುರಾಗಿದ್ದ ವಿಘ್ನಗಳ ನಿವಾರಣೆ. ಸಮಾಜದ ಅಭಿವೃದ್ಧಿ ಕಾರ್ಯಗಳ ನೇತೃತ್ವ. ಕುಟುಂಬದ ಹಿರಿಯರ ನಡುವೆ ಸಾಮರಸ್ಯ ಸಾಧನೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ  ಓದಿ.