ದಿನ ಭವಿಷ್ಯ
19-09-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 1
೧. ಮೇಷ:
ವಾರಾಂತ್ಯದ ಮುನ್ನಾದಿನ ಕೆಲಸ ಮುಗಿಸುವ ತರಾತುರಿ. ಉದ್ಯಮಕ್ಕೆ ಕಾಯಕಲ್ಪ ಮಾಡುವ ಪ್ರಯತ್ನ. ಪಿತೃಕಾರ್ಯದಲ್ಲಿ ಪಾಲಯಗೊಂಡ ಧನ್ಯತಾ ಭಾವ. ಕೆಲವು ವರ್ಗದ ವ್ಯಾಪರಿಗಳಿಗೆ ಹಿತಾನುಭವ. ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ. ಗಣಪತಿ ಅಥರ್ವಶೀರ್ಷ, ಶಿವನಾಮಾವಲ್ಯಷ್ಟಕ, ಶನಿಮಹಾತ್ಮೆ ಓದಿ.
೨.ವೃಷಭ
ಉದ್ಯೋಗ ನಿರತರಿಗೆ ಉತ್ತೇಜನ. ಹಿರಿಯರ ಜೀವನೋತ್ಸಾಹಕ್ಕೆ ಕಿರಿಯರ ಪ್ರೋತ್ಸಾಹ. ಎಂಜಿನಿಯರ್, ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರ ಕ್ಷೇತ್ರ ವಿಸ್ತರಣೆ. ಗೃಹಿಣಿಯರ ಉದ್ಯಮಗಳ ಆದಾಯ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅಧಿಕ ಲಾಭ. ಗಣೇಶ ಕವಚ, ಕಾರ್ತಿಕೇಯ ಸ್ತೋತ್ರ, ಆದಿತ್ಯ ಹೃದಯ ಓದಿ.
೩ಮಿಥುನ:
ಉದ್ಯೋಗಾನ್ವೇಷಿಗಳಿಗೆ ಮಾರ್ಗ ಗೋಚರ. ಸ್ವತಂತ್ರ ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಕುಟುಂಬಸಹಿತ ದತ್ತಾತ್ರೇಯನ ಆಲಯಕ್ಕೆ ಭೇಟಿ.
ಗಣೇಶ ಪಂಚರತ್ನ, ರಾಜರಾಜೇಶ್ವರೀ ಅಷ್ಟಕ, ಮವಗ್ರಹ ಸ್ತೋತ್ರ ಓದಿ.
೪. ಕರ್ಕಾಟಕ:
ಕುಟುಂಬದ ಹಿರಿಯ ವ್ಯಕ್ತಿಯ ಆಗಮನ. ಶಿಕ್ಷಿತರ ನಿರುದ್ಯೋಗ ಸಮಸ್ಯೆ ನಿವಾರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಅನುಕೂಲ ವಾತಾವರಣ. ಹಿರಿಯ ಚೇತನಗಳಿಗೆ ನಮನ ಸಲ್ಲಿಕೆ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೫.ಸಿಂಹ:
ವಿಘ್ನಗಳನ್ನು ಮೆಟ್ಟಿನಿಂತು ವಿಜಯ ಘೋಷ! ಶೇರು ವ್ಯವಹಾರದಲ್ಲಿ ಉತ್ತಮ ಲಾಭ. ಇಲಾಖೆಗಳ ಸಕಾಲಿಕ ಸ್ಪಂದನದಿಂದ ಕಾರ್ಯಗಳು ಶೀಘ್ರ ಮುಕ್ತಾಯ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ವಿನ ಲಾಭ. ಸಕುಟುಂಬರಾಗಿ ದೇವಾಲಯ ದರ್ಶನ. ಗಣೇಶ ಕವಚ, ಶಿವ ಸಹಸ್ರನಾಮ, ಮಹಾಲಕ್ಷ್ಮಿ ಅಷ್ಟಕ ಓದಿ.
೬.ಕನ್ಯಾ:
ಸ್ವಪ್ರಯತ್ನದಿಂದ ಯಶಸ್ಸು ಪ್ರಾಪ್ತಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ. ಲೇಖನ ವ್ಯವಸಾಯ, ಸ್ವಾಧ್ಯಾಯದಲ್ಲಿ ಹೆಚ್ಚು ಆಸಕ್ತಿ. ಗಣೇಶ ಪಂಚರತ್ನ, ಹನುಮಾನ್ ಚಾಲೀಸಾ, ಶನಿಸ್ತೋತ್ರ ಓದಿ.
೭. ತುಲಾ:
ಉದ್ಯೋಗ ಅರಸುವವರಿಗೆ ಮಾರ್ಗದರ್ಶನ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಮಾಧಾನದ ದಿನ. ಇಷ್ಟದೇವರ ಆಲಯಕ್ಕೆ ಭೇಟಿ. ಕುಟುಂಬದ ಹಿರಿಯರ ಮನೆಯಲ್ಲಿ ಪಿತೃಕಾರ್ಯ. ಗಣೇಶ ದ್ವಾದಶನಾಮ ಸ್ತೋತ್ರ, ದಾರಿದ್ರ್ಯದಹನ ಶಿವಸ್ತೋತ್ರ, ನವಗ್ರಹ ಕವಚ ಓದಿ.
೮.ವೃಶ್ಚಿಕ:
ಮಾಮೂಲಾದ ಚಿಕ್ಕಪುಟ್ಟ ಸಮಸ್ಯೆಗಳು. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಉದರದ ಆರೋಗ್ಯದ ಬಗ್ಗೆ ಎಚ್ಚರ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ದೇವತಾರಾಧನೆಯಿಂದ ಮನೆಯಲ್ಲಿ ಹರ್ಷ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಲಕ್ಷ್ಮೀಸ್ತೋತ್ರ ಓದಿ.
೯.ಧನು:
ಸರಕಾರಿ ಅಧಿಕಾರಿಗಳಿಗೆ ಹಿತಶತ್ರು ಬಾಧೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ. ಪಾರದರ್ಶಕ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಶುಭಕಾಲ. ಕೌಟುಂಬಿಕ ಕ್ಲೇಶ ನಿವಾರಣೆಗೆ ಪ್ರಾರ್ಥನೆ. ಗಣಪತಿ ಅಥರ್ವಶೀರ್ಷ, ದತ್ತಾತ್ರೇಯ ಸ್ತೋತ್ರ, ಕಾರ್ತಿಕೇಯ ಸ್ತೋತ್ರ ಓದಿ.
೧೦.ಮಕರ:
ಲೆಕ್ಕ ಪರಿಶೋಧಕರಂತಹ ವೃತ್ತಿಪರರಿಗೆ ಒತ್ತಡ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ.ವೈದ್ಯರು, ನ್ಯಾಯವಾದಿಗಳಿಗೆ ಕೀರ್ತಿ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ. ಬರವಣಿಗೆ ವೃತ್ತಿಯವರಿಗೆ ಶೋಷಕರಿಂದ ಪೀಡೆ.ಗಣೇಶ ಅಷ್ಟಕ, ಶಿವಪಂಚಾಕ್ಷರ ಸ್ತೋತ್ರ, ದೇವೀಸ್ತೋತ್ರ ಓದಿ.
೧೧. ಕುಂಭ:
ಕಾರ್ಯನಿರ್ವಹಣೆಗೆ ವರಿಷ್ಠರ ಮೆಚ್ಚುಗೆ. ಸಮಾಜ ಸೇವೆಯಿಂದ ಜನಪ್ರಿಯತೆ ವೃದ್ಧಿ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಅನುಕೂಲ. ಬಂಧುಗಳೊಡನೆ ದೇವಾಲಯ ದರ್ಶನ. ಗಣೇಶ ಪಂಚರತ್ನ, ದೇವೀ ಕವಚ, ಶನಿಮಹಾತ್ಮೆ ಓದಿ.
೧೨. ಮೀನ:
ಅರ್ಹರಿಗೆ ಸಹಾಯ ಮಾಡುವ ಅವಕಾಶ. ಅನ್ಯಸಮಾಜದ ವ್ಯಕ್ತಿಯಿಂದ ಸಹಾಯ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭಕಾಲ. ಗುರು, ಹಿರಿಯರ ದರ್ಶನದಿಂದ ಶುಭ. ಹೃದಯ ಚಿಕಿತ್ಸಾ ತಜ್ಞರಿಗೆ ಕೀರ್ತಿ ತರುವ ಪ್ರಸಂಗ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.