ದಿನ ಭವಿಷ್ಯ
09-10-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 9
೧. ಮೇಷ:
ವೃತ್ತಿಪರರಿಗೆ ಸಮಯದೊಂದಿಗೆ ಸೆಣಸಾಟ. ಸರಕಾರಿ ನೌಕರರಿಗೆ ಆಳುವವರ ಕಾಟ. ಕೃಷಿಕರಿಗೆ ಸಾಮಾನ್ಯ ಮಟ್ಟಿಗೆ ಸಮಾಧಾನ. ವಿದ್ಯುತ್, ರಸ್ತೆ ಮೊದಲಾದ ಗುತ್ತಿಗೆದಾರರಿಗೆ ಮುಗ್ಗಟ್ಟು. ಕೆಲವೊಮ್ಮೆ ಅನವಶ್ಯ ಗೊಂದಲ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಅಧ್ಯಾಪಕರಿಗೆ ನಿಲ್ಲದ ಪೀಡೆ. ಖಾಸಗಿ ಕ್ಷೇತ್ರದಲ್ಲಿ ಸ್ವಲ್ಪ ಸುಧಾರಣೆ. ವಿದೇಶಗಳಲ್ಲಿ ನೌಕರಿಯಲ್ಲಿರುವ ಬಂಧುಗಳಿಂದ ಕರೆ. ಮಾಧ್ಯಮದವರಿಗೆ ಅಧಿಕಾರಸ್ಥರ ಆಮಿಷ. ಗೃಹಿಣಿಯರ ಸ್ವಾವಲಂಬನೆ ಉದ್ಯಮದಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಗುರುಸ್ತೋತ್ರ ಓದಿ .
೩ಮಿಥುನ:
ಅಧಿಕಾರಿಗಳಿಗೆ ರಾಜಕಾರಣಿಗಳ ಒತ್ತಡ. ಕೃಷಿಕರಿಗೆ ತಕ್ಕಮಟ್ಟಿಗೆ ಸಮಾಧಾನದ ದಿನ. ವ್ಯಾಪಾರಿ ವರ್ಗಕ್ಕೆ ತೃಪ್ತಿಕರ ಲಾಭ. ಮನೆಯಲ್ಲಿ ದೇವತಾರ್ಚನೆ ಹಾಗೂ ಮಂಗಲ ಕಾರ್ಯದ ಸಿದ್ಧತೆ. ವ್ಯಾಯಾಮ, ಪ್ರಾಣಾಯಾಮದಿಂದ ಆರೋಗ್ಯ ವೃದ್ಧಿ. ಸಂಕಷ್ಟನಾಶನ ಗಣೇಶ ಸ್ತೋತ್ರ, ಕನಕಧಾರಾ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೪ ಕರ್ಕಾಟಕ:
ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ. ಸ್ವಂತ ವ್ಯವಹಾರಸ್ಥರಿಗೆ ಸಮಯದೊಂದಿಗೆ ಸ್ಪರ್ಧೆ. ಮನೆಯಲ್ಲಿ ಅನುಕೂಲಕರ ಸ್ಪಂದನ. ಹೊಸ ವ್ಯವಹಾರಕ್ಕೆ ಕೈಹಾಕುವಲ್ಲಿ ಎಚ್ಚರ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ಸೂರ್ಯಮಂಡಲ ಸ್ತೋತ್ರ ಓದಿ.
೫.ಸಿಂಹ:
ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ. ಸಣ್ಣ ಉದ್ಯಮಗಳಿಗೆ ಶುಭಕಾಲ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ.ಪ್ರಾಪ್ತವಯಸ್ಕರಿಗೆ ಇಷ್ಟಕ್ಕೆ ಸರಿಯಾಗಿ ವಿವಾಹ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ನೆಮ್ಮದಿ. ಗಣೇಶ ಕವಚ , ದಾರಿದ್ರ್ಯದಹನ ಶಿವಸ್ತೋತ್ರ, ದೇವೀಸ್ತೋತ್ರ ಓದಿ.
೬.ಕನ್ಯಾ:
ದೇಹ, ಮನಸ್ಸು ಎರಡಕ್ಕೂ ಆಲಸ್ಯ. ಸಹಚರರ ನೆರವಿನಿಂದ ಕೆಲಸ ಪರಿಪೂರ್ಣ. ಅಪರೂಪದ ಗೆಳೆಯರ ಆಗಮನ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಗೋಚರ. ಸರಕಾರಿ ಕಚೇರಿಯ ಕೆಲಸ ಸುಗಮ. ಗಣೇಶ ದ್ವಾದಶನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭. ತುಲಾ:
ಖಾಸಗಿ ರಂಗದ ನೌಕರರಿಗೆ ಹೊಸ ಅವಕಾಶಗಳು. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಕೃಷಿತಜ್ಞರೊಂದಿಗೆ ವಿಶೇಷ ಸಮಾಲೋಚನೆ. ಮಕ್ಕಳ ಭವಿಷ್ಯದ ಚಿಂತನೆ. ಧ್ತಾನ, ಪಾರಾಯಣದಿಂದ ಮನೋಬಲ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೮.ವೃಶ್ಚಿಕ:
ಮನೆಯಲ್ಲಿ ಹಿತಕರ ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಕರಕುಶಲ ವಸ್ತು ತಯಾರಕರಿಗೆ ಉತ್ತಮ ಬೇಡಿಕೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೯.ಧನು:
ಅನಿರೀಕ್ಷಿತ ಧನಪ್ರಾಪ್ತಿ. ವ್ಯವಹಾರ ವಿಸ್ತರಣೆಗೆ ಚಿಂತನೆ. ವಸ್ತ್ರ, ಆಭರಣ, ನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಕೈ ಕಸಬುದಾರರಿಗೆ ಕೈತುಂಬಾ ಕೆಲಸ. ಬೌದ್ಧಿಕ ಕಾರ್ಯಕರ್ತರಿಗೆ ಬಹುವಿಧ ಒತ್ತಡ. ಮನೆಯಲ್ಲಿ ಅನುಕೂಲದ ವಾತಾವರಣ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೧೦.ಮಕರ:
ಸಹೋದ್ಯೋಗಿಗಳಿಂದ ಪ್ರೀತಿಯ ಕೊಡುಗೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಫ್ಯಾಶನ್ ಡಿಸೈನಿಂಗ್ ಪರಿಣತರಿಗೆ ಉದ್ಯೋಗಾವಕಾಶ. ಗಣೇಶ ಕವಚ, ರಾಮ ಭುಜಂಗಪ್ರಯಾತ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೧೧. ಕುಂಭ:
ಅವಕಾಶಗಳಿಗಾಗಿ ನಿಲ್ಲದ ಹುಡುಕಾಟ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು. ಸರಕಾರಿ ನೌಕರರಿಗೆ ಶುಭ ಸಮಾಚಾರ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ ಮಧ್ಯಮ. ಗಣಪತಿ ಅಥರ್ವಶೀರ್ಷ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಉದ್ಯೋಗಸ್ಥರಿಗೆ ನಿರಾತಂಕವಾದ ವಾತಾವರಣ. ಸರಕಾರಿ ಇಲಾಖೆಗಳಿಂದ ಉತ್ತಮ ಸ್ಪಂದನ. ಕೆಲವು ಬಗೆಯ ವ್ಯವಹಾರಸ್ಥರಿಗೆ ಅನಿರೀಕ್ಷಿತ ಪ್ರಗತಿ. ವ್ಯವಹಾರ ನಿರ್ವಹಣೆಗೆ ಎಲ್ಲರ ಸಹಕಾರ. ಮಕ್ಕಳಿಗೆ ಪಾಠೇತರ ಚಟುವಟಿಕೆಗಳ ಆಕರ್ಷಣೆ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.