ಮೈಸೂರಲ್ಲಿ ಯುವದಸರಾಗೆ ಅದ್ಧೂರಿ ಚಾಲನೆ

ದಸರಾ ಮಹೋತ್ಸವದ ಅಂಗವಾಗಿ ನಡೆದ ಯುವ ದಸರಾ  ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅದ್ಧೂರಿ ಚಾಲನೆ ನೀಡಿದರು

Oct 7, 2024 - 04:26
ಮೈಸೂರಲ್ಲಿ ಯುವದಸರಾಗೆ ಅದ್ಧೂರಿ ಚಾಲನೆ

 ದಸರಾ ಮಹೋತ್ಸವದ ಅಂಗವಾಗಿ ನಡೆದ ಯುವ ದಸರಾ  ಕಾರ್ಯಕ್ರಮಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್ ಅದ್ಧೂರಿ ಚಾಲನೆ ನೀಡಿದರು. ಮೊದಲ ದಿನವೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್  ಹಾಡಿನ ಮೂಲಕ ಮೋಡಿ ಮಾಡಿದರು. ಮಳೆ ಭೀತಿ ನಡುವೆಯೂ ಯುವ ಸಮೂಹ ಹುಚ್ಚೆದ್ದು ಕುಣಿಯುತ್ತಿತ್ತು.ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಅವರ ʻಸುನ್ ರಹಾ ಹೇನʼ ಗೀತೆಯ ಮೂಲಕ ಕಾರ್ಯಕ್ರಮ ಆರಂಭಿಸಿದರು. ಯುವ ದಸರಾ ಕಾರ್ಯಕ್ರಮದ ಮೊದಲ ದಿನ ದರ್ಶನ್‌ ನಟನೆಯ ʻಚಕ್ರವರ್ತಿʼ ಚಿತ್ರದ ʻಒಂದು ಮಳೆ ಬಿಲ್ಲುʼ, ಕೊಟ್ಟಿಗೊಬ್ಬ-2 ಚಿತ್ರದ ʻಸಾಲುತಿಲ್ಲವೇ ಸಾಲುತಿಲ್ಲವೇʼ, ಸಂಜು ವೆಡ್ಸ್ ಗೀತಾ ಚಿತ್ರದ ʻಗಗನವೇ ಬಾಗಿʼ ಗೀತೆ ಹಾಡುವ ಮೂಲಕ ಯುವಜನರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.