ಸಿನಿಮಾ ಜಾಹೀರಾತು ಕ್ಷೇತ್ರದಲ್ಲಿ ಧೂಳೆಬ್ಬಿಸಲು ಖುಷಿ ಜೊತೆ ಪಿವಿಆರ್-ಐನಾಕ್ಸ್ ಡೀಲ್

ದೇಶದ ಅತಿದೊಡ್ಡ ಸಿನಿಮಾ ಜಾಹೀರಾತು ಸಂಸ್ಥೆ ಖುಷಿ ಅಡ್ವರ್ಟೈಸಿಂಗ್ ಮತ್ತು ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆ ಪಿವಿಆರ್ ಐನಾಕ್ಸ್ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿವೆ.

Oct 9, 2024 - 11:27
ಸಿನಿಮಾ ಜಾಹೀರಾತು ಕ್ಷೇತ್ರದಲ್ಲಿ ಧೂಳೆಬ್ಬಿಸಲು ಖುಷಿ ಜೊತೆ ಪಿವಿಆರ್-ಐನಾಕ್ಸ್ ಡೀಲ್

ದೇಶದ ಅತಿದೊಡ್ಡ ಸಿನಿಮಾ ಜಾಹೀರಾತು ಸಂಸ್ಥೆ ಖುಷಿ ಅಡ್ವರ್ಟೈಸಿಂಗ್ ಮತ್ತು ಅತಿದೊಡ್ಡ ಸಿನಿಮಾ ಪ್ರದರ್ಶಕ ಸಂಸ್ಥೆ ಪಿವಿಆರ್ ಐನಾಕ್ಸ್ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿವೆ. ಐದು ವರ್ಷದ ಗುತ್ತಿಗೆಗೆ ಸಹಿ ಹಾಕಲಾಗಿದ್ದು, ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಪಿವಿಆರ್ ಐನಾಕ್ಸ್​ಗೆ ಸಿನಿಮಾ ಜಾಹೀರಾತು ಮಾರಾಟ ನಿರ್ವಹಣೆಯನ್ನು ಖುಷಿ ಸಂಸ್ಥೆ ಮಾಡಲಿದೆ.ಉದ್ಯಮದ ಎರಡು ಮುಂಚೂಣಿ ಸಂಸ್ಥೆಗಳ ಮಧ್ಯೆ ಆಗಿರುವ ಹೊಸ ಸಹಭಾಗಿತ್ವವು ಬಹಳ ಮಹತ್ವದ್ದು. ಮಾರುಕಟ್ಟೆಯ ಸುಧಾರಣೆ ತರಲು, ಮಾರುಕಟ್ಟೆಯ ಮೇಲೆ ಉತ್ತಮ ನಿಯಂತ್ರಣ ತರಲು ಈ ಒಪ್ಪಂದ ಸಹಾಯವಾಗಲಿದೆ. ಅಷ್ಟೇ ಅಲ್ಲ, ನಮ್ಮ ಪ್ರತಿಷ್ಠಿತ ಜಾಹೀರಾತುದಾರರು ಮತ್ತು ವ್ಯಾಪಾರ ಪಾಲುದಾರರಲ್ಲಿ ಸಿನಿಮಾ ಜಾಹೀರಾತಿನ ಮೌಲ್ಯ ಎತ್ತಿಹಿಡಿಯಲು ನೆರವಾಗುತ್ತದೆ’ ಎಂದು ಪಿವಿಆರ್ ಐನಾಕ್ಸ್ ಸಂಸ್ಥೆಯ ರೆವಿನ್ಯೂ ಮತ್ತು ಆಪರೇಷನ್ಸ್ ವಿಭಾಗದ ಸಿಇಒ ಗೌತಮ್ ದತ್ತಾ ಹೇಳಿದ್ದಾರೆ.ಸಾಂಪ್ರದಾಯಿಕವಾಗಿ, ನಮ್ಮ ಒಟ್ಟು ಆದಾಯದಲ್ಲಿ ಜಾಹೀರಾತು ಮಾರಾಟದ ಪಾಲು ಶೇ. 10-11ರಷ್ಟಿರುತ್ತದೆ. ಕೋವಿಡ್ ನಂತರ ಇದು ಶೇ. 7-8ಕ್ಕೆ ಇಳಿದಿದೆ. ಈಗ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದೇವೆ. ಕೋವಿಡ್ ಮುಂಚಿನ ಸ್ಥಿತಿಗೆ ಮರಳಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಗೌತಮ್ ದತ್ತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಖುಷಿ ಅಡ್ವರ್ಟೈಸಿಂಗ್ ಸಂಸ್ಥೆ OOH (Out of Home) ತಂತ್ರದಲ್ಲಿ ಪರಿಣತಿ ಹೊಂದಿದೆ. ಮಾಲ್, ಏರ್​ಪೋರ್ಟ್, ಕಾರ್ಪೊರೇಟ್ ಪಾರ್ಕ್ ಇತ್ಯಾದಿ ಸ್ಥಳದಲ್ಲಿ ಜಾಹೀರಾತುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡ ಖುಷಿ ಅಡ್ವೈರ್ಟೈಸಿಂಗ್ ಸಂಸ್ಥೆಯ ಸಿಇಒ ವಿಷ್ಣು ತೆಲಂಗ್ ಅವರು, ಜಾಹೀರಾತುದಾರರ ಯಾವುದೇ ಸಂದೇಶವನ್ನು ಅದು ತಲುಪಬೇಕಾದವರಿಗೆ ತಲುಪಿಸಬಲ್ಲ ಸಾಮರ್ಥ್ಯ ಹೊಂದಿದ್ದೇವೆ ಎಂದಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.