ತಳಪತಿ ವಿಜಯ್ ರ‍್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್

‘ತಮಿಳಗ ವೆಟ್ರಿ ಕಳಗಮ್’ ಪಕ್ಷ ಸ್ಥಾಪನೆ ಆಗಿದ್ದು, ವಿಜಯ್ ಇದರ ಸ್ಥಾಪಕ.

Oct 28, 2024 - 11:04
Feb 5, 2026 - 18:37
ತಳಪತಿ ವಿಜಯ್ ರ‍್ಯಾಲಿಯನ್ನು ಯಶ್ ಚಿತ್ರಕ್ಕೆ ಹೋಲಿಸಿದ ಫ್ಯಾನ್ಸ್

ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ ಪಕ್ಷದ ರ‍್ಯಾಲಿ , ಅದರ ಬೃಹತ್ ಪ್ರಮಾಣದಿಂದ, ‘ಕೆಜಿಎಫ್ 2’ ಚಿತ್ರದ ಒಂದು ದೃಶ್ಯವನ್ನು ನೆನಪಿಸುತ್ತದೆ. ಐದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ ಈ ರ್ಯಾಲಿಯು ರಾಜಕೀಯ ವಲಯದಲ್ಲಿ ಸಂಚಲನವನ್ನು ಉಂಟುಮಾಡಿದೆ.‘ಕೆಜಿಎಫ್ 2’ ಚಿತ್ರದಲ್ಲಿ ಒಂದು ಥ್ರಿಲ್ಲಿಂಗ್ ಸೀನ್ ಬರುತ್ತದೆ. ರಾಕಿಯ ಕೆಜಿಎಫ್ ಹೇಗೆ ಇರುತ್ತದೆ ಎಂಬ ಕಲ್ಪನೆ ಯಾರಿಗೂ ಇರುವುದಿಲ್ಲ. ಅಲ್ಲಿ ಫೋಟೋ ತೆಗೆಯೋದು, ಮೇಲ್ಭಾಗದಲ್ಲಿ ವಿಮಾನ ಹಾರೋದು ನಿಷಿದ್ಧವಾಗಿರುತ್ತದೆ. ಆದಾಗ್ಯೂ ಕಷ್ಟಪಟ್ಟು ರಾಕಿಯ ಕೆಜಿಎಫ್​ನ ಒಂದು ದೃಶ್ಯವನ್ನು ಶೂಟ್ ಮಾಡಲಾಗಿರುತ್ತದೆ.

ರಾಕಿಯ ಕೆಜಿಎಫ್​ನ ನೋಡಿ ಪ್ರಧಾನಿ ರಮಿಕಾ ಸೇನ್ ಶಾಕ್ ಆಗುತ್ತಾಳೆ. ಈಗ ದಳಪತಿ ವಿಜಯ್ ರ‍್ಯಾಲಿಯ ದೃಶ್ಯವನ್ನು ಅನೇಕರು ‘ಕೆಜಿಎಫ್ 2’ ಚಿತ್ರದ ದೃಶ್ಯಕ್ಕೆ ಹೋಲಿಕೆ ಮಾಡುತ್ತಾ ಇದ್ದಾರೆ.ತಮಿಳುನಾಡಿನಲ್ಲಿ ವಿಜಯ್ ಅವರ ಪಕ್ಷದ ರ‍್ಯಾಲಿ ನಡೆದಿದೆ. ‘ತಮಿಳಗ ವೆಟ್ರಿ ಕಳಗಮ್’ (ಟಿವಿಕೆ) ಪಕ್ಷದ ಮೊದಲ ಸಾರ್ವಜನಿಕ ರ‍್ಯಾಲಿ ಇದಾಗಿತ್ತು. ವಿಜಯ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ರಾಜಕೀಯದಲ್ಲೂ ಇದೇ ರೀತಿಯ ಸ್ವಾಗತ ಸಿಗುತ್ತದೆಯೇ ಎನ್ನುವ ಪ್ರಶ್ನೆ ಎದುರಾಗಿತ್ತು. ಈ ಪ್ರಶ್ನೆಗೆ ಒಂದೇ ರ‍್ಯಾಲಿ ಮೂಲಕ ವಿಜಯ್ ಉತ್ತರ ಕೊಟ್ಟಿದ್ದಾರೆ.‘ತಮಿಳಗ ವೆಟ್ರಿ ಕಳಗಮ್’ ಪಕ್ಷ ಸ್ಥಾಪನೆ ಆಗಿದ್ದು, ವಿಜಯ್ ಇದರ ಸ್ಥಾಪಕ. ಅವರು ತಮ್ಮ ನಟನಾ ವೃತ್ತಿ ಉತ್ತುಂಗದಲ್ಲಿ ಇರುವಾಗಲೇ ಅದನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ. ಸದ್ಯ ವಿಜಯ್ ಹಮ್ಮಿಕೊಂಡಿರೋ ರ‍್ಯಾಲಿ ಉಳಿದ ಪಕ್ಷಗಳಲ್ಲಿ ಭಯ ಮೂಡಿಸಿದೆ. 2026ರಲ್ಲಿ ವಿಜಯ್ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.