ಸಂತ ಫಿಲೋಮಿನಾ ಕಾಲೇಜಿನಲ್ಲಿ 'ಪವರ್ ಬಿಐ' ಕಾರ್ಯಾಗಾರ
St.Philomena College: ಸಂತ ಫಿಲೋಮಿನಾ ಕಾಲೇಜಿನಲ್ಲಿ ಈಚೆಗೆ 'ಪವರ್ ಬಿಐ - ಟ್ರಾನ್ಸ್ಫಾರಂ ಡೇಟಾ ಇನ್-ಟು ಇನ್ಸೈಟ್ಸ್ ಫಾರ್ ಸ್ಮಾರ್ಟರ್ ಬ್ಯುಸಿನೆಸ್ ಡಿಸಿಷನ್' ಎಂಬ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಈಚೆಗೆ 'ಪವರ್ ಬಿಐ - ಟ್ರಾನ್ಸ್ಫಾರಂ ಡೇಟಾ ಇನ್-ಟು ಇನ್ಸೈಟ್ಸ್ ಫಾರ್ ಸ್ಮಾರ್ಟರ್ ಬ್ಯುಸಿನೆಸ್ ಡಿಸಿಷನ್' ಎಂಬ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾಲೇಜಿನ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ರೊಫೆಷನಲ್ ಸ್ಟಡೀಸ್ ವಿಭಾಗ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ 'ಬಿಗ್ ಟೆಕ್ ಲಾಬ್'ನಲ್ಲಿ ಈ ಕಾರ್ಯಾಗಾರ ನಡೆಯಿತು.
ವ್ಯವಹಾರ ಕ್ಷೇತ್ರದಲ್ಲಿ ದತ್ತಾಂಶ ಆಧಾರಿತ ನಿರ್ಧಾರಗಳ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆ, ವಿದ್ಯಾರ್ಥಿಗಳಿಗೆ ಪವರ್ ಬಿಐ (Power BI) ಮೂಲಕ ದತ್ತಾಂಶ ವಿಶ್ಲೇಷಣೆ, ಡ್ಯಾಶ್ ಬೋರ್ಡ್ ನಿರ್ಮಾಣ, ಡೇಟಾ ಮಾಡೆಲಿಂಗ್, ಡಿಎಎಕ್ಸ್ (DAX) ಹಾಗೂ ದತ್ತಾಂಶದಿಂದ ಉಪಯುಕ್ತ ಒಳನೋಟಗಳನ್ನು ಪಡೆಯುವ ವಿಧಾನಗಳ ಕುರಿತು ಪ್ರಾಯೋಗಿಕ ಪರಿಚಯ ನೀಡಲಾಯಿತು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಶೋಧನ್ ಪಿ.ಜಿ ಭಾಗವಹಿಸಿ 'ಪವರ್ ಬಿಐ'ನ ವಿವಿಧ ವೈಶಿಷ್ಟ್ಯಗಳು ಮತ್ತು ಅದರ ನೈಜ ವ್ಯವಹಾರಿಕ ಬಳಕೆಗಳ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಸಂವಾದಾತ್ಮಕ ಡ್ಯಾಶ್ ಬೋರ್ಡ್ಗಳ ನಿರ್ಮಾಣ, ದತ್ತಾಂಶ ವಿಶ್ಲೇಷಣೆ ಮತ್ತು ಮಾಡೆಲಿಂಗ್, ಡಿಎಎಕ್ಸ್ ಮೂಲಕ ದತ್ತಾಂಶದಿಂದ ಒಳನೋಟಗಳನ್ನು ಪಡೆಯುವುದು ಮತ್ತು ನೈಜ ವ್ಯವಹಾರಿಕ ಸಂದರ್ಭಗಳಲ್ಲಿ ಪವರ್ ಬಿಐ ಬಳಕೆಯ ಕುರಿತು ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ & ಪ್ರೊಫೆಷನಲ್ ಸ್ಟಡೀಸ್ ವಿಭಾಗದ ಡೀನ್ ಡಾ.ರಾಧಾಕೃಷ್ಣ ಗೌಡ ವಿ ನೆರವೇರಿಸಿದರು. ಅವರು 'ಪವರ್ ಬಿಐ' ಸೇರಿದಂತೆ ದತ್ತಾಂಶ ವಿಶ್ಲೇಷಣಾ ಸಾಧನಗಳ ಅರಿವು, ಇಂದಿನ ವ್ಯವಹಾರಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ರೆ.ಡಾ.ಆಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು.