ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಸಿನಿಮಾದ ನಿರ್ದೇಶಕನ ಕಾರು

ಅವರು ಬೇರೆ ಯಾರೂ ಅಲ್ಲ ನಾಗ್ ಅಶ್ವಿನ್.

Oct 21, 2024 - 06:18
ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಸಿನಿಮಾದ ನಿರ್ದೇಶಕನ ಕಾರು

‘ಕಲ್ಕಿ 2898 ಎಡಿ’ ಅಂತಹ ಹಿಟ್ ಸಿನಿಮಾ ನೀಡಿದ ನಾಗ್ ಅಶ್ವಿನ್ ಅವರು ಈಗ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ. ಈ ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಯಶಸ್ಸು ಅವರ ತೆಲೆಗೆ ಏರಿಲಿಲ್ಲ. ಅವರು ಪುಟಾಣಿ ಕಾರಿನಲ್ಲಿ ಓಡಾಟ ನಡೆಸುತ್ತಿದ್ದಾರೆ.  ನಾಗ್ ಅಶ್ವಿನ್ ಅವರು ಮಹಿಂದ್ರಾ ಎಲೆಕ್ಟ್ರಿಕ್ ಕಾರು e2oplus ಕಾರ್​ನ ಚಲಾಯಿಸಿಕೊಂಡು ಹೋಗಿದ್ದಾರೆ. ಅವರದ್ದೇ ಮನೆಯ ಸೋಲಾರ್ ಪ್ಯಾನಲ್ ಮೂಲಕ ಉತ್ಪಾದನೆಯಾದ ವಿದ್ಯುತ್​ನಿಂದ ಕಾರನ್ನು ಚಾರ್ಜ್ ಮಾಡಲಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರನ್ನು ನೋಡಿ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.‘ಕಲ್ಕಿ 2898 ಎಡಿ’ ಬಳಿಕ ಸೀಕ್ವೆಲ್​ಗೆ ನಾಗ್ ಅಶ್ವಿನ್ ಸಿದ್ಧರಾಗುತ್ತಿದೆ. ಈ ಬಗ್ಗೆ ಫ್ಯಾನ್ಸ್​ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಪ್ರಮುಖ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸಿದ್ದರು. ಕಮಲ್ ಹಾಸನ್ ಈ ಚಿತ್ರದ ವಿಲನ್ ಆಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ದೀಪಿಕಾಗೆ ಮಗು ಜನಿಸಿರುವುದರಿಂದ ಮುಂದಿನ ವರ್ಷ ಅವರು ಸೆಟ್ ಸೇರಲಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.