Commercial LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

Commercial LPG Cylinder: ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಏರಿಕೆಯಾಗಿದ್ದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ, ಇಂದು ರೂ.200 ವರೆಗೆ ಕಡಿಮೆಯಾಗಿದೆ.

Aug 1, 2026 - 12:10
Commercial LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ: ಹೋಟೆಲ್ ಉದ್ಯಮದಲ್ಲಿರುವವರಿಗೆ ಸಿಹಿಸುದ್ದಿ ಲಭ್ಯವಾಗಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಏರಿಕೆಯಾಗಿದ್ದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial LPG cylinder) ಬೆಲೆ, ಇಂದು ರೂ.200 ವರೆಗೆ ಕಡಿಮೆಯಾಗಿದೆ. 

ದೆಹಲಿಯಲ್ಲಿ ರೂ.202 ಕಡಿಮೆಯಾಗಿ ರೂ.2,728 ಆಗಿದೆ. ಮುಂಬೈನಲ್ಲಿ ರೂ.194 ಇಳಿಕೆಯಾಗಿ ರೂ.2,691.50ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ರೂ.200 ಕಡಿಮೆಯಾಗಿ ರೂ.2,821.00 ಆಗಿದೆ. 

ಅದೇ ರೀತಿಯಲ್ಲಿ ಚೆನ್ನೈನಲ್ಲಿ ರೂ.200 ಇಳಿಕೆಯಾಗಿ ರೂ.2,906ಕ್ಕೆ ಬಂದಿದೆ. ಕೋಲ್ಕತ್ತಾದಲ್ಲಿ ರೂ.209 ಕಡಿಮೆಯಾಗಿ ರೂ.2,872 ಆಗಿದೆ. ಹೈದರಾಬಾದ್‌ನಲ್ಲಿ ರೂ.206 ಇಳಿಕೆಯಾಗಿ ರೂ.2,985 ದರದಲ್ಲಿ ಲಭ್ಯವಾಗಲಿದೆ. 

ಗೃಹಬಳಕೆಯ ಸಿಲಿಂಡರ್ ಬೆಲೆ ಬದಲಾಗಿಲ್ಲ: 

14.2 ಕೆಜಿ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಅದು ರೂ.942 ಬೆಲೆಯನ್ನು ಹೊಂದಿದೆ. ಕಡೆಯದಾಗಿ ಜೂನ್ 7 ರಂದು ರೂ.29 ದರವನ್ನು ಹೆಚ್ಚಿಸಲಾಗಿತ್ತು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.