ಕಡಬ: ನಾಳೆ ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ 'ಆಟಿಡೊಂಜಿ ದಿನ' ಆಯೋಜನೆ
Kadaba Aatidonji Dina: ನಾಳೆ (ಆ.2) ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ 'ಆಟಿಡೊಂಜಿ ದಿನ' ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದೆ.
ಕಡಬ: ನಾಳೆ (ಆ.2) ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ 'ಆಟಿಡೊಂಜಿ ದಿನ' ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ ಆಯೋಜನೆಗೊಂಡಿದೆ.
ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಮಹಿಳಾ ಘಟಕ, ಯುವ ಘಟಕ, ಸ್ಪಂದನಾ ಸಮುದಾಯ ಸಹಕಾರ ಸಂಘ ಮತ್ತು ಒಕ್ಕಲಿಗ ಸ್ಪಂದನಾ ಸ್ವ-ಸಹಾಯ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.
ಬೆಳಗ್ಗೆ 9ಕ್ಕೆ ಆಟಿಕೂಟದ ವಿವಿಧ ಸ್ಪರ್ಧೆಗಳಿಗೆ ಚಾಲನೆ ದೊರೆಯಲಿದೆ. ಪತ್ರೊಡೆ, ಕಣಿಲೆ, ತಜಂಕ್, ಕೆಸು ಪಲ್ಯ ಮತ್ತು ಹಲಸಿನ ಪಾಯಸ ಸೇರಿದಂತೆ ಸಾಂಪ್ರದಾಯಿಕ ಖಾದ್ಯ ಸ್ಪರ್ಧೆಗಳು ಜರುಗಲಿವೆ. ಜೊತೆಗೆ ಸೋಬಾನೆ ಹಾಡು, ಚೆನ್ನೆಮಣೆ ಆಟ ಹಾಗೂ ಪುರುಷರಿಗಾಗಿ ತೆಂಗಿನಕಾಯಿ ಉರುಳಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಬೆಳಗ್ಗೆ 11.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ಮಹಾ ಸಹಭೋಜನ ಮತ್ತು ಮಧ್ಯಾಹ್ನ 2ಕ್ಕೆ ಸಾಂಸ್ಕೃತಿಕ ರಸದೌತಣವಾಗಿ ಶ್ರೀಮಹಿಷಮರ್ದಿನಿ ಯಕ್ಷಗಾನ ಕಲಾ ಕೇಂದ್ರ, ಕೇಪ್ರಡ ಮಕ್ಕಳ ತಂಡದಿಂದ 'ಶಶಿಪ್ರಭ ಪರಿಣಯ' ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. 'ಯಕ್ಷಮಣಿ' ಗಿರೀಶ್ ಗಡಿಕಲ್ಲು ಅವರು ನಿರ್ದೇಶಿಸಲಿದ್ದಾರೆ.
ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್ ಮಾಧ್ಯಮ ಸಂಸ್ಥೆ. ವೆಬ್ ನ್ಯೂಸ್ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್, ಯೂಟ್ಯೂಬ್, ನ್ಯೂಸ್ ಆಪ್‌ವರೆಗೆ ಎಲ್ಲ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್ ಆಪ್. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.