Karnataka: 1 ವರ್ಷದ ಅವಧಿಗೆ ಕೃತಕ ಪನೀರ್ ಬ್ಯಾನ್
Karnataka: ರಾಜ್ಯಾದ್ಯಂತ ಕೃತಕ ಅಥವಾ ಡೈರಿಯೇತರ ಪನೀರ್ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಮೇಲೆ 1 ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ.
ಬೆಂಗಳೂರು: ಕರ್ನಾಟಕದ ಜನರ ಆರೋಗ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಕೃತಕ ಅಥವಾ ಡೈರಿಯೇತರ ಪನೀರ್ ತಯಾರಿಕೆ, ಸಂಸ್ಕರಣೆ, ಪ್ಯಾಕಿಂಗ್, ಸಂಗ್ರಹಣೆ, ವಿತರಣೆ ಹಾಗೂ ಮಾರಾಟದ ಮೇಲೆ 1 ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ.
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಆಹಾರ ಸುರಕ್ಷತೆ & ಮಾನದಂಡಗಳ ಕಾಯ್ದೆ, 2006ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಇದು ಆಗಸ್ಟ್ 17, 2027 ರವರೆಗೆ ಜಾರಿಯಲ್ಲಿರುತ್ತದೆ.
ರಾಜ್ಯದಲ್ಲಿ ಇಲಾಖೆಯು ಹಲವಾರು ಪನೀರ್ ಮಾದರಿಗಳನ್ನು ಪರೀಕ್ಷಿಸಿದ್ದು, ಅದರಲ್ಲಿ ಯಾವುದೇ ಕಲಬೆರಕೆ ಕಂಡುಬಂದಿಲ್ಲ. ಆದಾಗ್ಯೂ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಕೃತಕ ಪನೀರ್‌ನ್ನು ಹಾಲಿನ ಬದಲಿಗೆ ಪಾಮ್‌ನಂತಹ ವೆಜಿಟೇಬಲ್ ಆಯಿಲ್ ಬಳಸಿ, ತಯಾರಿಸಲಾಗುತ್ತದೆ. ಇದೇ ತಿಂಗಳ ಆರಂಭದಲ್ಲಿ, ಮಹಾರಾಷ್ಟ್ರವು ಕೃತಕ ಪನೀರ್ ಮೇಲೆ ಒಂದು ವರ್ಷದ ನಿಷೇಧವನ್ನು ವಿಧಿಸಿತ್ತು.