ಚಾನಲ್‌, ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ: ವದಂತಿಗಳಿಗೆ ಸುದೀಪ್‌ ಸ್ಪಷ್ಟನೆ

ಬಿಗ್‌ಬಾಸ್‌ ನಿರೂಪಣೆಗೆ ವಿದಾಯ ಹೇಳಿದ್ದ ವಿಚಾರವಾಗಿ ಹಬ್ಬರುವ ವದಂತಿಗಳಿಗೆ ನಟ ಕಿಚ್ಚ ಸುದೀಪ್‌  ಪ್ರತಿಕ್ರಿಯಿಸಿದ್ದಾರೆ.

Oct 15, 2024 - 10:53
ಚಾನಲ್‌, ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ: ವದಂತಿಗಳಿಗೆ ಸುದೀಪ್‌ ಸ್ಪಷ್ಟನೆ

ಬಿಗ್‌ಬಾಸ್‌ ನಿರೂಪಣೆಗೆ ವಿದಾಯ ಹೇಳಿದ್ದ ವಿಚಾರವಾಗಿ ಹಬ್ಬರುವ ವದಂತಿಗಳಿಗೆ ನಟ ಕಿಚ್ಚ ಸುದೀಪ್‌  ಪ್ರತಿಕ್ರಿಯಿಸಿದ್ದಾರೆ. ಚಾನಲ್‌ ಮತ್ತು ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿರುವ ಸುದೀಪ್‌, ನನ್ನ ನಿರ್ಧಾರದ ನಂತರ ನೀವು ತೋರಿಸಿದ ಪ್ರೀತಿ-ಬೆಂಬಲಕ್ಕೆ ಧನ್ಯವಾದ. ಚಾನಲ್ ಹಾಗೂ ನನ್ನ ನಡುವೆ ಯಾವುದೇ ಘರ್ಷಣೆ ಆಗಿಲ್ಲ. ಈ ಬಗ್ಗೆ ಬರ್ತಿರೋ ವೀಡಿಯೋಗಳು, ಪ್ರತಿಕ್ರಿಯೆಗಳೆಲ್ಲಾ ಆಧಾರ ರಹಿತ. ನನಗೆ ಅಗೌರವ ಆಗಿದೆ ಎಂಬ ಪದವನ್ನ ಇದಕ್ಕೆ ಸೇರಿಸೋದು ತಪ್ಪು ಎಂದಿರುವ ನಟ ವದಂತಿಗಳನ್ನು ಹರಡದಂತೆ ಮನವಿ ಮಾಡಿಕೊಂಡಿದ್ದಾರೆ. 

ಈ ಸಮಸ್ಯೆಯ ಸುತ್ತಲಿನ ಯಾವುದೇ ಊಹೆಗಳು ಆಧಾರ ರಹಿತ. ಕಲರ್ಸ್ ಜೊತೆಗೆ ನನ್ನ ಬಾಂಧವ್ಯ ಚೆನ್ನಾಗಿದೆ. ನಮ್ಮ ನಡುವೆ ಏನೂ ಆಗಿಲ್ಲ. ಬಿಗ್‌ಬಾಸ್ ಡೈರೆಕ್ಟರ್ ಪ್ರಕಾಶ್ ಬಹಳ ಟ್ಯಾಲೆಂಟೆಡ್. ಅವರು ಯಾವಾಗಲೂ ನನ್ನ ಗೌರವದಿಂದ ನಡೆಸಿಕೊಳ್ತಾರೆ. ನಾನು ಅವರ ಬಗ್ಗೆ ಆಳವಾದ ಗೌರವ ಹೊಂದಿದ್ದೇನೆ ಎಂದು ಸುದೀಪ್ ತಿಳಿಸಿದ್ದಾರೆ.ನಾನು ಕೆಲಸ ಮಾಡ್ತಿರೋ ತಂಡದ ಬಗ್ಗೆ ಅನಗತ್ಯ ಆರೋಪಗಳನ್ನ ಆನಂದಿಸಲಾರೆ.‌ ಹೀಗಾಗಿ, ಇದು ನನ್ನ ಪ್ರತಿಕ್ರಿಯೆ ಆಗಿದೆ ಎಂದು ಸುದೀಪ್‌ ಸ್ಪಷ್ಟಪಡಿಸಿದ್ದಾರೆ. 

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.