ದಿನ ಭವಿಷ್ಯ

14-11-2025

Nov 15, 2025 - 16:47
ದಿನ ಭವಿಷ್ಯ

          ‌‌‌‌           ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ  5

೧. ಮೇಷ:

 ಉದ್ಯೋಗ, ವ್ಯವಹಾರಗಳಲ್ಲಿ ನಿರ್ಣಾಯಕ  ಹಂತ.   ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಭದಿನ. ಅಪರೂಪದ  ಬಂಧುಗಳ ಭೇಟಿ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ‌. ಗಣಪತಿ ಅಥರ್ವಶೀರ್ಷ, ಶಿವಕವಚ, ಶನಿಮಹಾತ್ಮೆ ಓದಿ.


೨. ವೃಷಭ:

 ಹಣಕಾಸು ವ್ಯವಹಾರ ಸುಗಮ. ಸರಕಾರಿ  ನೌಕರರ ಆತಂಕ ದೂರ. ಹಿರಿಯರ ಮನೆಯಲ್ಲಿ  ದೇವತಾರಾಧನೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಗೃಹೋತ್ಪನ್ನ ಖಾದ್ಯ ಪದಾರ್ಥಗಳ ಮಾರಾಟ ಹೆಚ್ಚಳ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.


೩ಮಿಥುನ:

  ದೀರ್ಘಕಾಲದ ಚಿಂತೆಯಿಂದ ಮುಕ್ತಿ. ಉದ್ಯೋಗಸ್ಥರಿಗೆ ಹಿತಶತ್ರುಗಳ ಪೀಡೆ. ವ್ಯವಹಾರಸ್ಥರಿಗೆ ಅನುಕೂಲದ ದಿನ. ದೃಢವಾದ  ಆತ್ಮವಿಶ್ವಾಸದಿಂದ  ಕಾರ್ಯಜಯ. ಗೃಹಿಣಿಯರು,ಮಕ್ಕಳಿಗೆ ನೆಮ್ಮದಿ. ಗಣೇಶ ಪಂಚರತ್ನ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.


೪. ಕರ್ಕಾಟಕ:


  ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ  ನೆಮ್ಮದಿ. ಪಾಲುದಾರಿಕೆ ವ್ಯವಹಾರ ಮುನ್ನಡೆ. ಕಟ್ಟಡ ನಿರ್ಮಾಣ-ಮಾರಾಟ  ವ್ಯವಹಾರಸ್ಥರಿಗೆ   ಉತ್ತಮ ಲಾಭ. ವ್ಯವಹಾರ ಸಂಬಂಧ ಸಣ್ಣ ಪ್ರವಾಸ. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ಗುರುಸ್ತೋತ್ರ ಓದಿ.
 


೫.ಸಿಂಹ:

  ಸ್ವಯಂ ಉದ್ಯೋಗಸ್ಥರಿಗೆ ಲಕ್ಷ್ಮೀ ಕಟಾಕ್ಷ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವೋದ್ಯೋಗ ಶುಭಾರಂಭ. ಹತ್ತಿರದ ದೇವೀಕ್ಷೇತ್ರಕ್ಕೆ ಸಂದರ್ಶನ. ಗಣೇಶ ಕವಚ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.

೬. ಕನ್ಯಾ:

ಅನಿರೀಕ್ಷಿತ ಮೂಲದಿಂದ  ಧನಪ್ರಾಪ್ತಿ.   ಉದ್ಯೋಗಸ್ಥರಿಗೆ , ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಗೆ ಕಾರ್ಯ ವಿಸ್ತರಿಸಲು ಉತ್ಸಾಹ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣಪತಿ ಅಥರ್ವಶೀರ್ಷ, ನರಸಿಂಹ ಕವಚ, ಲಕ್ಷ್ಮೀಸ್ತೋತ್ರ ಓದಿ.

೭. ತುಲಾ:

 ಉದ್ಯೋಗ ಕ್ಷೇತ್ರದಲ್ಲಿ ಹೊಸ ಬಗೆಯ ಕಾರ್ಯಗಳು. ನಿವೇಶನ, ಮನೆ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಅನುಕೂಲ. ಕೃಷಿ ಉತ್ಪನ್ನ ಮಾರಾಟಗಾರರಿಗೆ  ತೃಪ್ತಿಕರ  ಲಾಭ.ಅಧ್ಯಾಪಕ‌ ವೃತ್ತಿಯವರಿಗೆ ಕೆಲಸದ  ಹೊರೆ. ಹಿರಿಯರಿಗೆ ಉಲ್ಲಾಸದವಾತಾವರಣ.  ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಸ್ತೋತ್ರ ಓದಿ.


೮.ವೃಶ್ಚಿಕ:

  ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಮಾಲಿಕ- ನೌಕರರ ಬಾಂಧವ್ಯ ವೃದ್ಧಿ. ಆಸ್ತಿ, ಮನೆ ದಳ್ಳಾಳಿಗಳಿಗೆ ಅನುಕೂಲ. ಲೇವಾದೇವಿ ವ್ಯವಹಾರಸ್ಥರಿಗೆ  ಸ್ವಲ್ಪಮಟ್ಟಿನ ಲಾಭ.  ಚಿನ್ನ, ಬೆಳ್ಳಿ ವ್ಯಾಪಾರಿಗಳಿಗೆ  ಉತ್ತಮ ಲಾಭ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಮಹಿಷಮರ್ದಿನಿ ಸ್ತೋತ್ರ ಓದಿ.

೯.ಧನು:

 ಹೊಂದಾಣಿಕೆ,  ಕಾರ್ಯನಿಷ್ಠೆಗಳಿಂದ  ಯಶಸ್ಸು. ಸಹೋದ್ಯೋಗಿಗಳಿಂದ ಸಹಕಾರ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ದೇವತಾರ್ಚನೆಯಲ್ಲಿ ಆಸಕ್ತಿ.ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ವ್ಯಾಸಂಗಾಸಕ್ತಿ ಸುಧಾರಣೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ದೇವೀಸ್ತೋತ್ರ ಓದಿ.


೧೦.ಮಕರ:

  ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಮನೆಮಂದಿಯ ಸಹಕಾರ,ಉತ್ತಮ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ.  ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಲಾಭ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ. ಗಣೇಶ ಕವಚ, ಮಹಾಲಕ್ಷ್ಮಿ ಅಷ್ಟಕ, ಹನುಮಾನ್ ಚಾಲೀಸಾ ಓದಿ.


೧೧. ಕುಂಭ:

 ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೆಚ್ಚು ಯಶಸ್ಸು. ಅವಿಶ್ರಾಂತ  ಚಟುವಟಿಕೆಗಳಿಂದ ಆಯಾಸ.   ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಕವಚ, ಶನಿಮಹಾತ್ಮೆ ಓದಿ.

೧೨. ಮೀನ:
  ತ್ವರಿತಗತಿಯಿಂದ ಕಾರ್ಯಗಳ ನಿರ್ವಹಣೆ. ಕಾರ್ಯಕ್ಷೇತ್ರದಲ್ಲಿ ಪ್ರಯತ್ನಕ್ಕೆ ತಕ್ಕ ಫಲ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಂಗಾತಿಯಿಂದ ವ್ಯವಹಾರದಲ್ಲಿ ಉತ್ತಮ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.