ಇಂಗ್ಲೆಂಡ್‌ ವಿರುದ್ಧ ಸೋತು ಡಬ್ಲ್ಯುಟಿಸಿ ಫೈನಲ್ ರೇಸ್​ನಿಂದ ಹೊರಬಿದ್ದ ಪಾಕ್

ಪಾಕಿಸ್ತಾನದ ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ.

Oct 11, 2024 - 10:52
 9
ಇಂಗ್ಲೆಂಡ್‌ ವಿರುದ್ಧ ಸೋತು ಡಬ್ಲ್ಯುಟಿಸಿ ಫೈನಲ್ ರೇಸ್​ನಿಂದ ಹೊರಬಿದ್ದ ಪಾಕ್

ಪಾಕಿಸ್ತಾನದ ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಅದರಂತೆ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಭಾರಿ ಮುನ್ನಡೆ ಸಾಧಿಸಿದ್ದರೆ, ಪಾಕಿಸ್ತಾನದ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇದೀಗ ಪಾಕಿಸ್ತಾನಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಬಾಗಿಲು ಬಹುತೇಕ ಮುಚ್ಚಿದೆ.ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಮತ್ತೊಮ್ಮೆ ತವರಿನಲ್ಲಿ ಹೀನಾಯ ಸೋಲು ಎದುರಿಸಿದೆ.

\ಮೊದಲ ಇನ್ನಿಂಗ್ಸ್​ನಲ್ಲಿ 500 ಕ್ಕೂ ಅಧಿಕ ರನ್ ಬಾರಿಸಿದ ಹೊರತಾಗಿಯೂ ಪಾಕಿಸ್ತಾನ ತಂಡ ಇನಿಂಗ್ಸ್ ಮತ್ತು 47 ರನ್‌ಗಳ ಅವಮಾನಕರ ಸೋಲಿಗೆ ತುತ್ತಾಗಿದೆ.ಪಾಕಿಸ್ತಾನದ ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಅದರಂತೆ ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಭಾರಿ ಮುನ್ನಡೆ ಸಾಧಿಸಿದ್ದರೆ, ಪಾಕಿಸ್ತಾನದ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇದೀಗ ಪಾಕಿಸ್ತಾನಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಬಾಗಿಲು ಬಹುತೇಕ ಮುಚ್ಚಿದೆ.ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಸುಧಾರಿಸಿದೆ. ಇಂಗ್ಲೆಂಡ್ ತಂಡ ಇದೀಗ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕುವ ಮೂಲಕ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.