ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಿಲ್ಲವೆಂದು ಹೇಗೆ ತಿಳಿಯುವುದು? ಇಲ್ಲಿದೆ ಸುಲಭೋಪಾಯ

Karnataka: ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಹೆಸರುಗಳನ್ನು 'ASDDO' ಪಟ್ಟಿಯಲ್ಲಿ ಐದು ವರ್ಗಗಳಲ್ಲಿ ದಾಖಲಿಸಲಾಗುತ್ತದೆ. ನೀವು ಅದನ್ನು ಸುಲಭವಾಗಿ ಪರಿಶೀಲನೆ ನಡೆಸಬಹುದು.

Aug 8, 2026 - 19:14
ನಿಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದು ಹಾಕಿಲ್ಲವೆಂದು ಹೇಗೆ ತಿಳಿಯುವುದು? ಇಲ್ಲಿದೆ ಸುಲಭೋಪಾಯ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ, ಕರ್ನಾಟಕದಲ್ಲಿ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ'ಯನ್ನು ನಡೆಸುತ್ತಿದೆ. ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ - ಮನೆ ಭೇಟಿಯ ಪರಿಶೀಲನಾ ಅವಧಿಯನ್ನು ಆ.17 ರವರೆಗೆ ವಿಸ್ತರಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಅ.27 ರಂದು ಪ್ರಕಟಿಸಲಾಗುತ್ತದೆ.

ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಹೆಸರುಗಳನ್ನು 'ASDDO' ಪಟ್ಟಿಯಲ್ಲಿ ಐದು ವರ್ಗಗಳಲ್ಲಿ (ಗೈರುಹಾಜರು, ಸ್ಥಳಾಂತರ, ಮರಣ, ನಕಲು ಮತ್ತು ಇತರೆ) ದಾಖಲಿಸಲಾಗುತ್ತದೆ. ನೀವು ಅದನ್ನು ಸುಲಭವಾಗಿ ಪರಿಶೀಲನೆ ನಡೆಸಬಹುದು.

ಏನು ಮಾಡಬೇಕು: 

ಮೊದಲಿಗೆ https://karnataka-asddo-lookup.vercel.app/ ವೆಬ್‌ಸೈಟ್‌ಗೆ ಹೋಗಬೇಕು. 

ಅಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು ನಮೂದಿಸಿ, 'ಪರಿಶೀಲಿಸಿ' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಆಗ ಒಳ್ಳೆಯ ಸುದ್ದಿ - ಈ ಗುರುತಿನ ಚೀಟಿ ತೆಗೆದುಹಾಕಿದ ಪಟ್ಟಿಯಲ್ಲಿ ಇಲ್ಲ ಎಂದು ಕಾಣಿಸಿದರೆ, ಡಿಲೀಟ್ ಆಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. 

ಇದು ತೆಗೆದುಹಾಕುವಿಕೆಗಳನ್ನು ಮಾತ್ರ ಒಳಗೊಂಡಿದ್ದು, ಏನಾದರೂ ತಪ್ಪಾಗಿ ಕಂಡರೆ voters.eci.gov.inಗೆ ಭೇಟಿ ನೀಡಿ. ಇಲ್ಲವೇ BLO ಅವರನ್ನು ಸಂಪರ್ಕಿಸಿ. 

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.