ಮೊದಲ ದಿನವೇ ಹಾಸನಾಂಬೆಯ ದರ್ಶನ ಮಾಡಿಕೊಂಡ ರಾಜಮಾತೆ ಪ್ರಮೋದಾ ದೇವಿ

ಭಕ್ತರಿಗಾಗಿ ಹಾಸನ ಹಾಸನಾಂಬೆಯ ದರ್ಶನ ಇಂದು ಬೆಳಗ್ಗೆ 4 ಗಂಟೆಯಿಂದ ಅರಂಭಗೊಂಡಿದೆ .

Oct 25, 2024 - 13:56
ಮೊದಲ ದಿನವೇ ಹಾಸನಾಂಬೆಯ ದರ್ಶನ ಮಾಡಿಕೊಂಡ ರಾಜಮಾತೆ ಪ್ರಮೋದಾ ದೇವಿ

ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕರುಣಿಸುವ ಹಾಸನಾಂಬೆ ದೇವಿಯ  ಗರ್ಭಗುಡಿ ಗುರುವಾರ ತೆರೆದಿದ್ದು, ಇಂದಿನಿಂದ  ಸಾರ್ವಜನಿಕರು ಶಕ್ತಿದೇವತೆಯ ದರ್ಶನ ಪಡೆಯಬಹುದಾಗಿದೆ.ಹಿಂದಿನ ಮೈಸೂರು ಒಡೆಯರ್ ಅರಸೊತ್ತಿಗೆಯ ರಾಜವಂಶಸ್ಥರು ಅಪಾರ ದೈವಭಕ್ತರಾಗಿದ್ದರೆನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅಲ್ಲಿನ ರಾಜಮಾತೆ ಪ್ರಮೋದಾ ದೇವಿಯವರು ಮೊದಲ ದಿನವೇ ಹಾಸನಾಂಬೆಯ ದರ್ಶನಕ್ಕೆ ಆಗಮಿಸಿದರು. ಈಗಾಗಲೇ ವರದಿ ಮಾಡಿರುವಂತೆ ವರ್ಷಕ್ಕೊಮ್ಮೆ ಮಾತ್ರ ತೆರೆಯಲ್ಪಡುವ ಹಾಸನಾಂಬೆ ದೇಗುಲ ನಿನ್ನೆಯಷ್ಟೇ ಓಪನ್ ಆಗಿದ್ದು ಇಂದಿನಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ದೇವಾಲಯ ಆಡಳಿತ ಮಂಡಳಿಯು ಸರ್ಕಾರೀ ಮರ್ಯಾದೆಗಳೊಂದಿಗೆ ರಾಜಮಾತೆ ಪ್ರಮೋದಾದೇವಿಯವರನ್ನು ಬರಮಾಡಿಕೊಂಡಿತು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.