Today Gold Price: ಇಂದು ಬಂಗಾರದ ಬೆಲೆ ಏರಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನ ಹಾಗೂ ಪ್ಲಾಟಿನಂ ದರವು ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಸ್ಥಿರವಾಗಿದೆ.

Jul 21, 2026 - 12:18
Jul 22, 2026 - 11:34
Today Gold Price: ಇಂದು ಬಂಗಾರದ ಬೆಲೆ ಏರಿಕೆ

ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನ ಹಾಗೂ ಪ್ಲಾಟಿನಂ ದರವು ಏರಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆಯು ಸ್ಥಿರವಾಗಿದೆ.
 
ರಾಜ್ಯದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.760 ಹೆಚ್ಚಳವಾಗಿ ರೂ.1,44,220 ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.700 ಏರಿಕೆಯಾಗಿ ರೂ.1,32,200ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.570 ಹೆಚ್ಚಳವಾಗಿ ರೂ.1,08,160 ಆಗಿದೆ. 

ಇದರೊಂದಿಗೆ 10 ಗ್ರಾಂ ಪ್ಲಾಟಿನಂ ಬೆಲೆ ರೂ.400 ಏರಿಕೆಯಾಗಿ ರೂ.49,870ಕ್ಕೆ ತಲುಪಿದೆ. 1 ಕೆಜಿ ಬೆಳ್ಳಿ ರೂ.2,35,000 ದರದಲ್ಲಿ ಮಾರಾಟವಾಗುತ್ತಿದೆ.

ಷೇರುಪೇಟೆ: ಆರಂಭಿಕ ವಹಿವಾಟು ಸ್ವಲ್ಪ ಕುಸಿತ

ಇಂದು ಷೇರುಪೇಟೆ ಆರಂಭಿಕ ವಹಿವಾಟು ಸ್ವಲ್ಪ ಮಟ್ಟಿಗೆ ನಕಾರತ್ಮಕವಾಗಿದೆ. ಸೆನ್ಸೆಕ್ಸ್ 32 ಅಂಕಗಳು ಇಳಿಕೆಯಾಗಿ 77,676 ಅಂಕಗಳಗೆ ತಲುಪಿದೆ. ನಿಫ್ಟಿ 22.45 ಅಂಕಗಳು ಕುಸಿದು 24,216 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. 

ಅಲ್ಟ್ರಾಟೆಕ್ ಸಿಮೆಂಟ್, ಶ್ರೀರಾಮ್ ಫೈನಾನ್ಸ್, ಟಾಟಾ ಸ್ಟೀಲ್, ಅದಾನಿ ಎಂಟರ್‌ಪ್ರೈಸಸ್ ಹಾಗೂ ಟೆಕ್ ಮಹೀಂದ್ರಾ ಷೇರುಗಳು ಲಾಭದಲ್ಲಿವೆ. ಆದಾಗ್ಯೂ ಹೆಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ, ಎಟರ್ನಲ್, ಸನ್ ಫಾರ್ಮಾ ಮತ್ತು ಡಾ. ರೆಡ್ಡೀಸ್ ಲ್ಯಾಬ್‌ಗಳು ನಷ್ಟದಲ್ಲಿವೆ.