ದಿನ ಭವಿಷ್ಯ
09-08-2025

ಜ್ಯೋತಿರ್ಮಯ
ಅದೃಷ್ಟ ಸಂಖ್ಯೆ 9
೧. ಮೇಷ:
ಶ್ರಾವಣ ಪೂರ್ಣಿಮೆಯ ಶುಭದಿನ. ದೇವರ ಅನುಗ್ರಹದಿಂದ ಆರೋಗ್ಯ ಭಾಗ್ಯ. ಸಮಗ್ರ ಸುಧಾರಣೆಯ ಬಗ್ಗೆ ಚಿಂತನೆ. ಉದ್ಯೋಗ ಸ್ಥಾನದಲ್ಲಿ ಕೊಂಚ ವ್ಯತ್ಯಾಸ. ಹಿರಿಯ ನಾಗರಿಕರಿಗೆ ನೆಮ್ಮದಿ. ವ್ಯವಹಾರ ಸಂಬಂಧ ತಿರುಗಾಟ. ಗೃಹಿಣಿಯರಿಗೆ ಉಲ್ಲಾಸ. ಗಣೇಶ ದ್ವಾದಶನಾಮ ಸ್ತೋತ್ರ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ವಿವಾಹಾಕಾಂಕ್ಷಿಗಳಿಗೆ ಶುಭವಾರ್ತೆ. ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ. ಎಂಜಿನಿಯರ್, ಲೆಕ್ಕ ಪರಿಶೋಧಕರು ಇತ್ಯಾದಿ ವೃತ್ತಿಪರರಿಗೆ ಕೆಲಸ ಮುಗಿಸುವ ತರಾತುರಿ. ಗೃಹಿಣಿಯರ ಉದ್ಯಮಗಳಿಗೆ ಆದಾಯ ವೃದ್ಧಿ. ವಸ್ತ್ರ,ಯಂತ್ರೋದ್ಯಮಿಗಳ ಪಾಲಿಗೆ ಶುಭದಿನ. ಗಣೇಶ ಪಂಚರತ್ನ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೩ಮಿಥುನ:
ವ್ಯಾಪಾರ ಕ್ಷೇತ್ರದವರಿಗೆ ಮಿಶ್ರಫಲ. ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ವ್ಯವಹಾರ ಸಂಬಂಧ ಪೂರ್ವ ದಿಕ್ಕಿಗೆ ಪ್ರಯಾಣ. ಸಂಕಷ್ಟನಾಶನ ಗಣೇಶ ಸ್ತೋತ್ರ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೪. ಕರ್ಕಾಟಕ:
ಲಾಭ- ನಷ್ಟ ಎರಡೂ ಆಗಬಹುದು. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಉಳಿದ ಎಲ್ಲರ ಆರೋಗ್ಯ ಉತ್ತಮ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ನ್ಯಾಯಾಲಯ ವ್ಯವಹಾರದಲ್ಲಿ ವಿಳಂಬ. ಗಣೇಶ ಅಷ್ಟಕ, ಶಿವಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.
೫.ಸಿಂಹ:
ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸಿನ ಅನುಭವ. ಅಧಿಕಾರಿಗಳ ಸಕಾಲಿಕ ಸ್ಪಂದನ, ಕಾರ್ಯಗಳು ಶೀಘ್ರ ಮುಕ್ತಾಯ. ವ್ಯವಹಾರಾರ್ಥವಾಗಿ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಅವಶ್ಯವಿದ್ದವರಿಗೆ ಸಹಾಯ ಮಾಡುವ ಅವಕಾಶ. ದಾಂಪತ್ಯ ಸುಖ ಉತ್ತಮ. ಗಣಪತಿ ಅಥರ್ವಶೀರ್ಷ, ದುರ್ಗಾ ಸ್ತೋತ್ರ, ಗುರು ಸ್ತೋತ್ರ ಓದಿ.
೬.ಕನ್ಯಾ:
ಜನಸೇವೆಯಿಂದ ಸಂತೃಪ್ತಿ, ಆನಂದ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಗಣೇಶ ಕವಚ, ಶಿವ ಕವಚ, ಕನಕಧಾರಾ ಸ್ತೋತ್ರ ಓದಿ.
೭. ತುಲಾ:
ಮನೆಯ ಯಜಮಾನರಿಗೆ ಸಂತೋಷದ ದಿನ. ಪರಿಸರ ಸ್ವಚ್ಛತೆ ಚಟುವಟಿಕೆಗಳಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೃಪ್ತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ಲಾಭ. ಅಸಹಾಯಕರಿಗೆ ಸಹಾಯ ಮಾಡುವ ಅವಕಾಶ. ಗಣೇಶ ಪಂಚರತ್ನ, ವಿಷ್ಣು ಸಹಸ್ರನಾಮ, ಹನುಮಾನ್ ಚಾಲೀಸಾ ಓದಿ.
೮.ವೃಶ್ಚಿಕ:
ನೊಂದವರಿಗೆ ಸಾಂತ್ವನ ಹೇಳಿ ಸಮಾಧಾನ ಹೊಂದುವಿರಿ. ಗೃಹಾಲಂಕಾರದಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ಗಣೇಶ ತ್ರಿಶತಿ ಸ್ತೋತ್ರ, ದೇವೀ ಕವಚ, ನವಗ್ರಹ ಸ್ತೋತ್ರ ಓದಿ.
೯.ಧನು:
ಸರಕಾರಿ ಉದ್ಯೋಗಸ್ಥರಿಗೆ ಶುಭ ಸಮಾಚಾರ ನಿರೀಕ್ಷೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ. ಅಲ್ಪಾವಧಿ ಹೂಡಿಕೆಗಳು ಹಿತಕರವಲ್ಲ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆ. ಹೆಚ್ಚುವರಿ ಆದಾಯದ ಮಾರ್ಗ ಅನ್ವೇಷಣೆ. ಗಣಪತಿ ಅಥರ್ವಶೀರ್ಷ, ದಕ್ಷಿಣಾಮೂರ್ತಿ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
೧೦.ಮಕರ:
ಆದಾಯ ವೃದ್ಧಿಯ ಪ್ರಯತ್ನಕ್ಕೆ ಫಲ. ಉದ್ಯೋಗದಲ್ಲಿ ಸಹನೆಗೆ ದಕ್ಷತೆಯಷ್ಟೇ ಪ್ರಾಧಾನ್ಯ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಪೂರ್ವದಿಕ್ಕಿಗೆ ಪ್ರಯಾಣದ ಸಾಧ್ಯತೆ. ವೈದ್ಯರು, ಅಧ್ಯಾಪಕರಿಗೆ ಸಾಧನೆಯಿಂದ ತೃಪ್ತಿ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ, ಶಿವಪಂಚಾಕ್ಷರ ಸ್ತೋತ್ರ, ಶನಿಸ್ತೋತ್ರ ಓದಿ.
೧೧. ಕುಂಭ:
ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಬಂಧು ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ಸ್ಥಿರಾಸ್ತಿ ಖರೀದಿ ಪ್ರಯತ್ನದಲ್ಲಿ ಮುನ್ನಡೆ. ನ್ಯಾಯಾಲಯಕ್ಕೆ ಹೋಗದೆ ವಿವಾದ ತೀರ್ಮಾನ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಶುಭದಿನ. ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಮಹಾತ್ಮೆ ಓದಿ.
೧೨. ಮೀನ:
ಸತ್ಕಾರ್ಯಗಳಲ್ಲಿ ಪಾಲುಗೊಳ್ಳುವ ಅವಕಾಶ. ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ. ಕಾರ್ಯ ಯಶಸ್ಸಿಗೆ ಸಂಬಂಧಪಟ್ಟವರ ಸಹಕಾರ. ಪರಿಣತರೊಬ್ಬರ ಹಠಾತ್ ಭೇಟಿಯಿಂದ ಲಾಭ. ಹಿರಿಯ ಬಂಧುಗಳಿಗೆ ನೆರವಾಗುವ ಸಂದರ್ಭ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.