ಈಶ ಗ್ರಾಮೋತ್ಸವ ಥ್ರೋಬಾಲ್: SKYC ಪಟ್ಟೆ ತಂಡಕ್ಕೆ ಚಾಂಪಿಯನ್ ಪಟ್ಟ

Isha Gramotsava Throwball: ಮೂಡುಬಿದಿರೆಯಲ್ಲಿ ನಡೆದ ಈಶ ಗ್ರಾಮೋತ್ಸವ ಕ್ರೀಡಾಕೂಟ'ದಲ್ಲಿ ಮೈಸೂರು ವಿಭಾಗ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ, ಶ್ರೀ ಕೃಷ್ಣ ಯುವಕ ಮಂಡಲ (SKYC) ಪಟ್ಟೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಪ್ರಥಮ ಸ್ಥಾನ ಗಳಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದೆ.

Aug 11, 2026 - 13:21
ಈಶ ಗ್ರಾಮೋತ್ಸವ ಥ್ರೋಬಾಲ್: SKYC ಪಟ್ಟೆ ತಂಡಕ್ಕೆ ಚಾಂಪಿಯನ್ ಪಟ್ಟ

ಮೂಡುಬಿದಿರೆ: ಇಲ್ಲಿ ನಡೆದ ಪ್ರತಿಷ್ಠಿತ 'ಈಶ ಗ್ರಾಮೋತ್ಸವ ಕ್ರೀಡಾಕೂಟ'ದಲ್ಲಿ ಮೈಸೂರು ವಿಭಾಗ ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ, ಶ್ರೀ ಕೃಷ್ಣ ಯುವಕ ಮಂಡಲ (SKYC) ಪಟ್ಟೆ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಪ್ರಥಮ ಸ್ಥಾನ ಗಳಿಸಿ, ಚಾಂಪಿಯನ್ ಆಗಿ ಹೊರಹೊಮ್ಮಿದೆ. 

ಈ ಅದ್ಭುತ ಜಯದೊಂದಿಗೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಜರುಗುವ 'ಈಶ ಗ್ರಾಮೋತ್ಸವ' ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾವಳಿಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿದೆ. ತಂಡದ ಆಟಗಾರ್ತಿಯರ ಸಾಂಘಿಕ ಹೋರಾಟವು ಈ ಗೆಲುವಿಗೆ ಕಾರಣವಾಗಿದೆ. 

ರೇಖಾ ರೈಗೆ 'ಪಂದ್ಯಶ್ರೇಷ್ಠ' - ಎಲೆಕ್ಟ್ರಿಕ್ ಸ್ಕೂಟಿ ಬಹುಮಾನ:

ನಾಯಕಿ ಶ್ವೇತಾ ರೈ ನೇತೃತ್ವದಲ್ಲಿ ಕಣಕ್ಕಿಳಿದ ತಂಡದಲ್ಲಿ ಸಾಕ್ಷಿ ರೈ, ರೇಖಾ ರೈ, ಯಶ್ಮಿತಾ ಗೌಡ, ವಾಣಿಶ್ರೀ, ದೀಪಾಶ್ರೀ, ಹೇಮಾ, ಭವ್ಯಾ ಗೌಡ ಮತ್ತು  ಭವ್ಯಾ ಅವರು ಅದ್ಭುತವಾಗಿ ಆಟವಾಡಿದರು. 

ಪಂದ್ಯದುದ್ದಕ್ಕೂ ರೇಖಾ ರೈ ಅತ್ಯುತ್ತಮ ಪ್ರದರ್ಶನ ನೀಡಿ, 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು. ಎಲೆಕ್ಟ್ರಿಕ್ ಸ್ಕೂಟಿ ಬಹುಮಾನವನ್ನು ತಮ್ಮದಾಗಿಸಿಕೊಂಡರು. ತಂಡಕ್ಕೆ ತರಬೇತುದಾರರಾಗಿ ಮುದಸಿರ್ ಪಟ್ಟೆ ಮತ್ತು ಶಶಾಂಕ್ ರೈ ಸೂಕ್ತ ಮಾರ್ಗದರ್ಶನ ನೀಡಿದ್ದರು. 

ಪಂದ್ಯಾಟದ ವೇಳೆ ಶ್ರೀ ಕೃಷ್ಣ ಯುವಕ ಮಂಡಲ ಪಟ್ಟೆಯ ಸರ್ವ ಸದಸ್ಯರು ಮತ್ತು ಕ್ರೀಡಾಭಿಮಾನಿಗಳು ಹಾಜರಿದ್ದರು. ಆಟಗಾರ್ತಿಯರನ್ನು ಹುರಿದುಂಬಿಸಿದರು. ಕೊಯಂಬತ್ತೂರು ಕ್ರೀಡಾಕೂಟದಲ್ಲಿ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.