ಶಿವಮೊಗ್ಗ: ವೈಭವದ 'ಶ್ರೀ ಗುರುಗುಹ ನವರಾತ್ರಿ ಸಂಗೀತೋತ್ಸವ-2026' ಆರಂಭ
Shivamogga: 'ಶ್ರೀ ಗುರುಗುಹ ನವರಾತ್ರಿ ಸಂಗೀತೋತ್ಸವ-2026' ಇದೇ ಅ.19 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಶಿವಮೊಗ್ಗ: ನಗರದಲ್ಲಿ ಸಾಂಸ್ಕೃತಿಕ ಲೋಕದ ಅದ್ಭುತ ಸಂಭ್ರಮವಾದ 'ಶ್ರೀ ಗುರುಗುಹ ನವರಾತ್ರಿ ಸಂಗೀತೋತ್ಸವ-2026' ಇದೇ ಅ.19 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.
ಶ್ರೀ ಗುರುಗುಹ ಗಾನಸಭೆ, ವತಿಯಿಂದ ಏರ್ಪಡಿಸಿರುವ ಈ ಪ್ರತಿಷ್ಠಿತ ಕಾರ್ಯಕ್ರಮವು ಶಾಸ್ತ್ರಿ ಲೇಔಟ್‌ನಲ್ಲಿರುವ ಶ್ರೀ ಗುರುಗುಹ ಸಂಗೀತ ಭವನದಲ್ಲಿ ನಡೆಯಲಿದೆ.
ನಿನ್ನೆ ಉದ್ಘಾಟನಾ ಸಮಾರಂಭವು ನೆರವೇರಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರ ವನದ ನವಶ್ರೀ ನಾಗೇಶ್ ಎಂ.ವಿ ವಹಿಸಿದ್ದರು. ಕೋಟೆ ಶ್ರೀ ಚಂಡಿಕಾ ದುರ್ಗ ಪರಮೇಶ್ವರಿ ದೇಗುಲದ ಅರ್ಚಕ ಶಂಕರಾನಂದ ಜೋಯಿಸ್ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಅಭಿಯಂತರರಾದ ಎಸ್.ಆರ್.ಲಕ್ಷ್ಮೀನಾರಾಯಣ್ ಮತ್ತು ಎಸ್.ಎನ್.ಕೆ ಟ್ರಸ್ಟ್‌ನ ಅಧ್ಯಕ್ಷೆ ಮಾಜಿ ಮಹಾನಗರ ಪಾಲಿಕೆ ಸದಸ್ಯೆ ನಿರ್ಮಲಾ ಕಾಶಿ ಅವರು ಭಾಗವಹಿಸಿದ್ದರು.
ಈ 9 ದಿನಗಳ ಕಾಲ ನಡೆಯುವ ಸಂಗೀತೋತ್ಸವದಲ್ಲಿ, ಪ್ರತಿದಿನ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಲಲಿತಾರ್ಚನೆ ನಡೆಯಲಿದೆ. ಇದರೊಂದಿಗೆ ಸಂಜೆ 4ಕ್ಕೆ ದೇವಿ ಭಕ್ತಿ ಸಂಕೀರ್ತನೆ ಮತ್ತು ಸಂಜೆ 4:45ಕ್ಕೆ ಶ್ರೇಷ್ಠ ಕಲಾವಿದರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿರುತ್ತದೆ. ಪ್ರತಿದಿನ ಸಂಜೆ 6 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ.
ಪ್ರಮುಖ ಕಲಾವಿದರ ವಿವರಗಳು:
- ಅ.12 ಸಂಜೆ 4ಕ್ಕೆ ಯುಗಳ ಹಾಡುಗಾರಿಕೆ (ಮಾಧವಿ ರಘುರಾಮ್ ಹಾಗೂ ಕವನ ಎಂ.ಎಸ್ - ಬೆಂಗಳೂರು)
- ಅ.13 ಸಂಜೆ 4:45ಕ್ಕೆ ಹಾಡುಗಾರಿಕೆ (ರಾಧಿಕಾ ಮಧು - ಬೆಂಗಳೂರು)
- ಅ.14 ಸಂಜೆ 4:45ಕ್ಕೆ ಹಾಡುಗಾರಿಕೆ (ಹಂಸ ಎಂ ಮತ್ತು ವಿಧಾತ್ರಿ ವಿ ಆತ್ರೇಯ - ಶಿವಮೊಗ್ಗ)
- ಅ.15 ಸಂಜೆ 4:45ಕ್ಕೆ ಯುಗಳ ಹಾಡುಗಾರಿಕೆ (ಸಂಸ್ಕೃತಿ ಆರ್ ವಂಗಾಳಿ ಮತ್ತು ಸನ್ನಿಧಿ ಆರ್ ವಂಗಾಳಿ - ಬೆಂಗಳೂರು)
- ಅ.16 ಸಂಜೆ 4:45ಕ್ಕೆ ಹಾಡುಗಾರಿಕೆ (ಮೇಧಾ ಅಡಿಗ - ಬೆಂಗಳೂರು)
- ಅ.17 ಸಂಜೆ 4:45ಕ್ಕೆ ಹಾಡುಗಾರಿಕೆ (ಸುರಕ್ಷಾ ಪ್ರಭಂಜನ್ ಹಾಗೂ ಮಾಧುರ್ಯ ಜಿಂಗಾಡೆ - ಬೆಂಗಳೂರು)
- ಅ.18 ಸಂಜೆ 4:45ಕ್ಕೆ ಹಾಡುಗಾರಿಕೆ (ವಿನಯ್ ಹೆಬ್ಬಾರ್ - ಬೆಂಗಳೂರು)
- ಅ.19 ಸಂಜೆ 4:45ಕ್ಕೆ ಹಾಡುಗಾರಿಕೆ (ಮಾನಸಾ ಎಂ.ಎನ್ - ಬೆಂಗಳೂರು)