ದಿನ ಭವಿಷ್ಯ
13-08-2025

ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 4
೧. ಮೇಷ:
ತ್ವರಿತ ಸ್ಪಂದನದಿಂದ ಕೆಲಸಕ್ಕೆ ಅನುಕೂಲ. ಉದ್ಯೋಗದಲ್ಲಿ ಜವಾಬ್ದಾರಿಗಳ ಬದಲಾವಣೆ. ಸರಕಾರಿ ಉದ್ಯೋಗಸ್ಥರಿಗೆ ಸ್ವಲ್ಪ ತಾಪತ್ರಯ. ಸಣ್ಣ ಉದ್ಯಮಿಗಳ ಸಮಸ್ಯೆಗಳು ಪರಿಹಾರ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ನಿವಾರಣೆ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಶನಿಮಹಾತ್ಮೆ ಓದಿ.
೨.ವೃಷಭ:
ಚಲನಶೀಲ ವಾತಾವರಣಕ್ಕೆ ಹೊಂದಿಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಧ್ಯಾನ, ದೈವ ಚಿಂತನೆಗೆ ಸಮಯ ನೀಡಿಕೆ. ಗಣಪತಿ ಅಥರ್ವಶೀರ್ಷ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
೩.ಮಿಥುನ:
ಅನವಶ್ಯ ವಿವಾದಗಳಿಂದ ದೂರವಿರಿ. ಅಪೇಕ್ಷಿಸಿದವರಿಗೆ ಮಾತ್ರ, ಸಲಹೆ ಸೂಚನೆ ನೀಡಿ. ಸರಕಾರಿ ನೌಕರರಿಗೆ ಸಮಾಧಾನ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ರಾತ್ರಿ ಪ್ರಯಾಣದಲ್ಲಿ ಎಚ್ಚರ. ಗಣೇಶ ಕವಚ, ದತ್ತಾತ್ರೇಯ ಸ್ತೋತ್ರ, ಲಲಿತಾ ಅಷ್ಟೋತ್ತರ ಓದಿ
೪. ಕರ್ಕಾಟಕ:
ಊಹೆಗೆ ಮೀರಿದ ಶುಭಫಲ ಪ್ರಾಪ್ತಿ. ಉದ್ಯೋಗಸ್ಥರಿಗೆ ತಕ್ಕಮಟ್ಟಿಗೆ ಅನುಕೂಲದ ಸನ್ನಿವೇಶ. ಉದ್ಯಮಗಳಿಗೆ ಸರಕಾರಿ ನೆರವು ಲಭ್ಯ. ಮಹಿಳೆಯರ ಸ್ವೋದ್ಯೋಗ ಯೋಜನೆ ಉತ್ಪನ್ನಗಳಿಗೆ ಕೀರ್ತಿ. ನೀಚ ಜನರ ಪಿತೂರಿಗಳು ವಿಫಲ. ಗಣಪತಿ ಅಥರ್ವ ಶೀರ್ಷ, ದುರ್ಗಾ ಸ್ತೋತ್ರ, ಋಣಮೋಚನ ಮಂಗಲ ಸ್ತೋತ್ರ ಓದಿ
೫.ಸಿಂಹ:
ಮೌನವಾಗಿ ಎಸಗಿದ ಸಾಧನೆಗಳಿಗೆ ಮಾನ್ಯತೆ. ಉದ್ಯೋಗಸ್ಥರಿಗೆ ಪದೋನ್ನತಿಅಥವಾ ವೇತನ ಏರಿಕೆ. ಉದ್ಯಮಕ್ಕೆ ಹೊಸರೂಪದೊಂದಿಗೆ ಕಾಯಕಲ್ಪ. ಸರಕಾರಿ ಕಾರ್ಯಾಲಯಗಳಲ್ಲಿ ಅನುಕೂಲಕರ ಸ್ಪಂದನ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ. ಗಣೇಶ ಕವಚ,ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಆದಿತ್ಯ ಹೃದಯ ಓದಿ.
೬. ಕನ್ಯಾ:
ಏಕಪ್ರಕಾರದ ಕಾರ್ಯವೈಖರಿಯನ್ನು ಅಳವಡಿಸಿಕೊಂಡರೆ ವಿಹಿತ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿಕಾರ್ಯ ವಿಸ್ತರಣೆ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಸಾಮಾಜಿಕ ಕಾರ್ಯಗಳಲ್ಲಿ ಹೊಂದಾಣಿಕೆಗೆ ಪ್ರಯತ್ನ. ಗಣೇಶ ಅಷ್ಟೋತ್ತರ ಶತನಾಮ ಸ್ತೋತ್ರ , ಶಿವಪಂಚಾಕ್ಷರ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
೭.ತುಲಾ:
ದೈವಾನುಗ್ರಹದಿಂದ ದೂರವಾದ ಆಪತ್ತು. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ವಸ್ತ್ರ, ಆಭರಣ ಸ್ತೋತ್ರವನ್ನು ಲಾಭ. ನ್ಯಾಯಾಲಯ ವ್ಯವಹಾರದಲ್ ನಷ್ಟಸಾಧ್ಯತೆ. ವಾಹನ ಚಾಲನೆಯಲ್ಲಿ ವಿಶೇಷ ಎಚ್ಚರ. ಸಂಕಷ್ಟನಾಶನ ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಪೀಡಾಪರಿಹಾರ ಸ್ತೋತ್ರ ಓದಿ.
೮. ವೃಶ್ಚಿಕ:
ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕೇಟರಿಂಗ್ ವ್ಯವಹಾರಸ್ಥರಿಗೆ ಸಮಯದೊಂದಿಗೆ ಸೆಣಸಾಟ. ಧನಬಲ ವೃದ್ಧಿಗೋಸ್ಕರ ವಿಶೇಷ ದೇವೋಪಾಸನೆ. ಗಣಪತಿ ಅಥರ್ವಶೀರ್ಷ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.
೯. ಧನು:
ದೈವಾನುಗ್ರಹದಿಂದ ಈ ದಿನ ಕಾರ್ಯಜಯ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫಲ. ಸರಕಾರಿ ಸವಲತ್ತುಗಳ ನೀಡಿಕೆಗೆ ಪುಢಾರಿಗಳ ಅಡ್ಡಗಾಲು. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಕುಶಲಕರ್ಮಿಗಳ ಸಾಧನೆಗೆ ಗೌರವ. ಗಣೇಶ ಅಷ್ಟಕ, ಶಿವನಾಮಾವಲ್ಯಷ್ಟಕ, ನವಗ್ರಹ ಮಂಗಲಾಷ್ಟಕ ಓದಿ.
೧೦. ಮಕರ:
ಸತತ ಸಾಧನೆಯಿಂದ ಆತ್ಮವಿಶ್ವಾಸ ವೃದ್ಧಿ. ಉದ್ಯೋಗಸ್ಥರಿಗೆ ಸತ್ವಪರೀಕ್ಷೆಯಲ್ಲಿ ವಿಜಯ. ನಷ್ಟದಿಂದ ಚೇತರಿಸಲು ಉದ್ಯಮಿಗಳ ಪ್ರಯತ್ನ. ಕರಕುಶಲ ಸಾಮಗ್ರಿ ಉದ್ಯಮಿಗಳಿಗೆ ಅನುಕೂಲ. ಸಂಸಾರದಲ್ಲಿ ಹುಳಿ ಹಿಂಡುವವರಿಗೆ ಮುಖಭಂಗ. ಗಣೇಶ ಸ್ತೋತ್ರ, ಆದಿತ್ಯ ಹೃದಯ, ಹನುಮಾನ್ ಚಾಲೀಸಾ ಓದಿ.
೧೧.ಕುಂಭ:
ಹೆಚ್ಚಿನ ಕೆಲಸ, ಕಾರ್ಯಗಳಲ್ಲಿ ಮುನ್ನಡೆ. ಉದ್ಯೋಗಸ್ಥರಿಗೆ ಅನುಕೂಲ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಂಗೀತ, ನೃತ್ಯಾದಿ ಕಲೋಪಾಸಕರಿಗೆ ಶುಭ. ಗಣೇಶ ತ್ರಿಶತಿ ಸ್ತೋತ್ರ, ಶಿವ ಸಹಸ್ರನಾಮ,ಶನಿಮಹಾತ್ಮೆ ಓದಿ.
೧೨. ಮೀನ:
ವಾತಾವರಣ ಮಧ್ಯಮವಾಗಿದ್ದರೂ. ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಒಡನಾಡಿಗಳಿಂದ ಅನುಕೂಲ. ಸರಕಾರಿ ಇಲಾಖೆಗಳಿಂದ ಅಪೇಕ್ಷಿತ ಸಹಕಾರ. ಜನಹಿತ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ತಿಂಡಿ, ಪಾನೀಯ ವ್ಯಾಪಾರಿಗಳಿಗೆ ಲಾಭ. ಗಣೇಶ ದ್ವಾದಶನಾಮ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ಶನಿಮಹಾತ್ಮೆ ಓದಿ.