ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

ದಿನ ಭವಿಷ್ಯ
ಜ್ಯೋತಿರ್ಮಯ.
ಅದೃಷ್ಟ ಸಂಖ್ಯೆ 7
1.ಮೇಷ:
ಲಾಭ ಕಡಿಮೆಯಾಯಿತೆಂದು ಕೊರಗದಿರಿ. ವಾರಾಂತ್ಯದಲ್ಲಿ ನಿಗದಿತ ಕೆಲಸಗಳು ಮುಕ್ತಾಯ. ಉದ್ಯಮದಲ್ಲಿ ಉಭಯ ಪಕ್ಷಗಳಿಗೂ ಹುಮ್ಮಸ್ಸು. ಮಹಿಳೆಯರ ಸ್ವಾವಲಂಬನೆ ಯೋಜನೆ ಮುನ್ನಡೆ. ಪಾಲುದಾರಿಕೆ ವ್ಯವಹಾರದಲ್ಲಿ ಸುಧಾರಣೆ. ಗಣೇಶ ಕವಚ, ಆದಿತ್ಯ ಹೃದಯ, ನವಗ್ರಹ ಸ್ತೋತ್ರ ಓದಿ.
2.ವೃಷಭ:
ಸೋಲುವುದಕ್ಕಿಂತ ಯಥಾಸ್ಥಿತಿ ಮೇಲು ಎಂಬ ಸಮಾಧಾನ ಇರಲಿ. ಕೃಷಿ ಉತ್ಪನ್ನಗಳ ಆದಾಯ ವೃದ್ಧಿ. ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಮತ್ತೆ ಪ್ರಯತ್ನ. ಮಾತಿನಲ್ಲಿ ಮೃದುತ್ವ ಇರಲಿ. ಗೃಹದಲ್ಲಿ ಸಂತೃಪ್ತಿಯ ವಾತಾವರಣ.ಗಣೇಶ ಅಷ್ಟಕ, ರಾಮರಕ್ಷಾ ಸ್ತೋತ್ರ, ನವಗ್ರಹ ಮಂಗಲಾಷ್ಟಕ ಓದಿ.
3.ಮಿಥುನ:
ಮರಳಿ ಯತ್ನಿಸುವುದರಿಂದ ಯಶಸ್ಸು ಪ್ರಾಪ್ತಿ. ಉದ್ಯೋಗದಲ್ಲಿ ಕಾರ್ಯಸಾಮರ್ಥ್ಯ ಪ್ರದರ್ಶನ. ಉದ್ಯಮ ಅಭಿವೃದ್ಧಿಗೊದಗಿದ ವಿಘ್ನ ನಿವಾರಣೆ.
ವಸ್ತ್ರ , ಸಿದ್ಧ ಉಡುಪು ,ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಸಂತೋಷದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ಸೂರ್ಯಮಂಡಲ ಸ್ತೋತ್ರ ಓದಿ.
4.ಕರ್ಕಾಟಕ:
ಕಾಲಕಳೆದಂತೆ ಉದ್ಯೋಗದಲ್ಲಿ ಉನ್ನತಿ. ಅಕಸ್ಮಾತ್ ಧನಾಗಮ ಯೋಗ. ಕೃಷ್ಯುತ್ಪನ್ನ ಮಾರಾಟದಿಂದ ತೃಪ್ತಿಕರ ಲಾಭ. ಧಾರ್ಮಿಕ ಕ್ರಿಯೆಯಿಂದ ಇಷ್ಟಾರ್ಥ ಸಿದ್ಧಿ. ಎಲ್ಲರಿಗೂ ಉತ್ತಮ ಆರೋಗ್ಯ. ಗಣೇಶ ಪಂಚರತ್ನ, ಸುಬ್ರಹ್ಮಣ್ಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
5.ಸಿಂಹ:
ಸಂಪೂರ್ಣ ಶಕ್ತಿಯಿಂದ ಪ್ರಯತ್ನ. ಉದ್ಯೋಗ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿ ಮನ್ನಣೆ. ಎಲ್ಲೆಯಿಲ್ಲದ ಉದ್ಯಮದ ಪ್ರಗತಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಕೃಷಿ ಕಾರ್ಮಿಕರಿಗೆ ಅನುಕೂಲದ ವಾತಾವರಣ. ಗಣಪತಿ ಅಥರ್ವಶೀರ್ಷ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
6.ಕನ್ಯಾ:
ಕೈಹಿಡಿದಿರುವ ವಿದ್ಯೆಯನ್ನೇ ಮುಂದುವರಿಸಿ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ಸಣ್ಣ ಉದ್ಯಮಿಗಳಿಗೆ ಅನುಕೂಲದ ದಿನ. ಕುಶಲಕರ್ಮಿಗಳಿಗೆ ಯೋಗ್ಯ ಸ್ಥಾನದಲ್ಲಿ ಉದ್ಯೋಗಾವಕಾಶ. ಅತಿ ನಿರೀಕ್ಷೆಯಿಂದ ವಿವಾಹಕ್ಕೆ ತೊಂದರೆ. ಗಣೇಶ ಪಂಚರತ್ನ, ಶಿವಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
7.ತುಲಾ:
ಸೌಜನ್ಯಪೂರ್ಣ ವರ್ತನೆಯಿಂದ ಜನಾದರಣೆ. ಹಿತಶತ್ರುಗಳ ಸಂಚಿಗೆ ಸೋಲು. ಗುರುಸ್ಥಾನದಲ್ಲಿರುವ ಹಿರಿಯರ ಭೇಟಿಯಿಂದ ಸಮಾಧಾನ. ದೇವತಾ ಸಾನ್ನಿಧ್ಯ ದರ್ಶನ. ವ್ಯವಹಾರ ಸಂಬಂಧ ಪಶ್ಚಿಮ ದಿಕ್ಕಿನತ್ತ ಸಣ್ಣ ಪ್ರಯಾಣ ಸಂಭವ. ಗಣೇಶ ಕವಚ, ನರಸಿಂಹ ಸ್ತೋತ್ರ, ಅನ್ನಪೂರ್ಣಾ ಸ್ತೋತ್ರ ಓದಿ.
8.ವೃಶ್ಚಿಕ:
ಉದ್ಯೋಗ ಸ್ಥಾನದಲ್ಲಿ ಅನಿಶ್ಚಿತ ಪರಿಸ್ಥಿತಿ. ಉದ್ಯಮಿಗಳಿಗೆ ಎದುರಾಳಿಗಳಿಂದ ಸಹಜ ಪೈಪೋಟಿ. ಸರಕಾರಿ ಅಧಿಕಾರಿಗಳಿಗೆ ದುಷ್ಟ ರಾಜಕಾರಣಿಗಳ ಕಾಟ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳ ಮುನ್ನಡೆ.ಗಣೇಶ ಕವಚ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.
9.ಧನು:
ಹಲವು ಮೂಲಗಳಿಂದ ಆದಾಯ ವೃದ್ಧಿ. ಸಹಕಾರಿಗಳಿಂದ ಸಂಪೂರ್ಣ ಸಹಕಾರ. ಖಾದಿ ಉಡುಪು ಉತ್ಪಾದಕರಿಗೆ ಉತ್ತಮ ಆದಾಯ. ಜೇನು ಸಾಕಣೆಯಲ್ಲಿ ಪ್ರಗತಿ.. ಮಹಿಳೆಯರ ನೇತೃತ್ವದ ಖಾದ್ಯವಸ್ತು ಘಟಕಕ್ಕೆ ಅಭೂತಪೂರ್ವ ಲಾಭ. ಸಂಕಷ್ಟನಾಶನ ಗಣೇಶ ಸ್ತೋತ್ರ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.
10.ಮಕರ:
ಹೆಚ್ಚಿನ ನಿಯೋಜಿತ ಕೆಲಸಗಳು ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ವ್ಯಾಪಾರ. ಪ್ರಾಪ್ತ ವಯಸ್ಕ ಹುಡುಗರಿಗೆ ವಿವಾಹ ಯೋಗ. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ.ಗಣೇಶ ಕವಚ, ರಾಮರಕ್ಷಾ ಸ್ತೋತ್ರ, ಶನಿಸ್ತೋತ್ರ ಓದಿ.
11.ಕುಂಭ:
ನಿಗದಿತ ಕಾರ್ಯಗಳು ಮುಗಿದಂತೆ ಹೊಸ ಕರೆಗಳು. ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ. ಟೈಲರಿಂಗ್ ವೃತ್ತಿ ಬಲ್ಲವರಿಗೆ ಉದ್ಯೋಗಾವಕಾಶ. ಹೊಸ ಪಾಲುದಾರಿಕೆ ವ್ಯವಹಾರದ ನೀಲನಕ್ಷೆ ಸಿದ್ಧ. ಗಣೇಶ ಪಂಚರತ್ನ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಶನಿಸ್ತೋತ್ರ ಓದಿ.
12. ಮೀನ:
ಸಪ್ತಾಹ ಅಂತ್ಯವಾಗುತ್ತಿದ್ದಂತೆ ಇನ್ನಷ್ಟು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನ ಹರಿಸಬೇಕಾದ ಸಂದರ್ಭ. ಸರಕಾರಿ ಇಲಾಖೆಗಳವರ ಸಹಕಾರ. ಕೃಷಿಭೂಮಿ ಹೊಂದುವ ಪ್ರಯತ್ನ ಫಲಪ್ರದ. ಉದ್ಯೋಗ ಅರಸುತ್ತಿರುವವರಿಗೆ ಮಾರ್ಗದರ್ಶನ. ಗಣೇಶ ಕವಚ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ, ಶನಿಸ್ತೋತ್ರ ಓದಿ.