ಅಂಬಿಕಾ ಪಿಯು ಕಾಲೇಜು: ಕರಾಟೆಯಲ್ಲಿ ಚಾಂಪಿಯನ್‌.. ಖೋಖೋದಲ್ಲಿ ಸೆಕೆಂಡ್

Ambika PU College: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ, ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆ 'ಅಂಬಿಕಾ ಪದವಿ ಪೂರ್ವ ವಿದ್ಯಾಲಯ' ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

Aug 13, 2026 - 16:05
ಅಂಬಿಕಾ ಪಿಯು ಕಾಲೇಜು: ಕರಾಟೆಯಲ್ಲಿ ಚಾಂಪಿಯನ್‌.. ಖೋಖೋದಲ್ಲಿ ಸೆಕೆಂಡ್

ಪುತ್ತೂರು: 'ವಿದ್ಯಾಭಾರತಿ' ದಕ್ಷಿಣ ಕನ್ನಡ ಜಿಲ್ಲಾ ಘಟಕ, ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಶ್ರೀದೇವಿ ವಿದ್ಯಾಕೇಂದ್ರ ವತಿಯಿಂದ ಈಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ, ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆ 'ಅಂಬಿಕಾ ಪದವಿ ಪೂರ್ವ ವಿದ್ಯಾಲಯ' ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಕರಾಟೆಯಲ್ಲಿ ಚಾಂಪಿಯನ್‌:
 
19 ವರ್ಷದೊಳಗಿನ 36 ಕೆಜಿ ತೂಕ ವಿಭಾಗದಲ್ಲಿ ರಶ್ಮಿ ಆರ್ ಪ್ರಥಮ ಸ್ಥಾನ ಪಡೆದಿದ್ದಾರೆ. 56 ಕೆಜಿ ವಿಭಾಗದಲ್ಲಿ ಆಶಿತಾ ಕೆ.ಆರ್ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಉಳಿದಂತೆ 54 ಕೆಜಿ ವಿಭಾಗದಲ್ಲಿ ರಕ್ಷಿತ್ ಎಸ್.ಎಲ್ ಮತ್ತು 60 ಕೆಜಿ ವಿಭಾಗದಲ್ಲಿ ದೇವಿಕಾ ಕೆ.ಡಿ ಅವರುಗಳು ದ್ವಿತೀಯ ಸ್ಥಾನ ಗಳಿಸಿದ್ದು, ಈ ಮೂಲಕ ಕಾಲೇಜು ಚಾಂಪಿಯನ್‌ಶಿಪ್ ಆಗಿ ಹೊರಹೊಮ್ಮಿದೆ.

ಖೋ-ಖೋದಲ್ಲಿ ದ್ವಿತೀಯ ಸ್ಥಾನ: 

ಖೋಖೋ ಪಂದ್ಯಾವಳಿಯಲ್ಲಿಯೂ ಕಾಲೇಜಿನ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಆಟಗಾರ್ತಿಯರಾದ ಅನುಷಿಕಾ ಎಸ್, ಶ್ರಾವಣಿ ಹೆಚ್.ಕೆ, ದಿಯಾ ಬಿ.ಜಿ, ಚಶ್ವಿ ಶೆಟ್ಟಿ, ಧನ್ವಂತರಿ ಹೆಚ್.ಎಂ, ಪೂರ್ವಿಕಾ ಎಂ, ಬಿ.ಆರ್.ಅಮೂಲ್ಯ, ತಾನ್ಯಾ ಕೆ, ಹಿತೈಷಿಣಿ ಎಸ್, ಮನ್ವಿತಾ ಎಂ ಮತ್ತು ಇಶಿಕಾ ಭಾಗವಹಿಸಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.