Core Technologies: ಪುತ್ತೂರು, ಮಂಗಳೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ಅಗ್ಗದ ದರದಲ್ಲಿ ಕಂಪ್ಯೂಟರ್‌-ಲ್ಯಾಪ್‌ಟಾಪ್‌!

Core Mega Sale: ಪುತ್ತೂರು, ಮಂಗಳೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌ಗೆ ಇಂದು ಚಾಲನೆ ದೊರೆತಿದೆ.

Sep 21, 2026 - 21:43
Sep 21, 2026 - 22:16
Core Technologies: ಪುತ್ತೂರು, ಮಂಗಳೂರು, ಸುಳ್ಯದಲ್ಲಿ ಕೋರ್‌ ಮೆಗಾ ಸೇಲ್‌.. ಅಗ್ಗದ ದರದಲ್ಲಿ ಕಂಪ್ಯೂಟರ್‌-ಲ್ಯಾಪ್‌ಟಾಪ್‌!

ಮಂಗಳೂರು: ಪುತ್ತೂರು, ಸುಳ್ಯ ಹಾಗೂ ಮಂಗಳೂರಿನಲ್ಲಿ ಶಾಖೆಯನ್ನು ಹೊಂದಿರುವ ಪ್ರತಿಷ್ಠಿತ ಕೋರ್‌ ಟೆಕ್ನಾಲಜೀಸ್‌ನ (Core Technologies) ಮೇಗಾ ಸೇಲ್‌ಗೆ ಇಂದು ಚಾಲನೆ ದೊರೆತಿದೆ.

ಕಂಕನಾಡಿಯಲ್ಲಿರುವ ಕೋರ್‌ ಟೆಕ್ನಾಲಜೀಸ್‌ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಈ ಕೋರ್‌ ಮೆಗಾ ಸೇಲ್‌ನ ಪೋಸ್ಟರ್‌ನ್ನು ಬಿಎನ್‌ಐ ಮಂಗಳೂರು ಹಾಗೂ ಉಡುಪಿ ವಿಭಾಗದ ಎಕ್ಸಿಕ್ಯೂಟೀವ್‌ ಡೈರೆಕ್ಟರ್‌ ಗಣೇಶ್‌ ಶರ್ಮಾ ಬಿಡುಗಡೆಗೊಳಿಸಿದ್ದಾರೆ.

ಕೋರ್‌ ಟೆಕ್ನಾಲಜೀಸ್‌ ಸಂಸ್ಥೆಯ ಮಾಲೀಕ ಅನೂಪ್‌ ಕೆಜೆ ಅವರು, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋರ್‌ ಟೆಕ್ನಾಲಜೀಸ್‌ ಕಳೆದ 7-8 ವರ್ಷದಲ್ಲಿ ಗ್ರಾಹಕರ ವಿಶ್ವಾಸಾರ್ಹತೆಯನ್ನು ದೊಡ್ಡ ಮಟ್ಟದಲ್ಲಿ ಸಂಪಾದಿಸಿದ್ದು, ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.

ಇದೀಗ ದೊಡ್ಡ-ದೊಡ್ಡ ಎಲೆಕ್ಟ್ರಾನಿಕ್ಸ್‌ ಮಳಿಗೆಗಳು ಡಿಸ್ಕೌಂಟ್‌ ಸೇಲ್‌ ನೀಡುತ್ತಿರುವ ಸಂದರ್ಭದಲ್ಲಿ, ನಮ್ಮ ಕೋರ್‌ ಟೆಕ್ನಾಲಜೀಸ್‌ ಕೂಡ ತನ್ನ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಮೆಗಾ ಸೇಲ್‌ ಆರಂಭಿಸುತ್ತಿದೆ. ನವೆಂಬರ್‌ ತಿಂಗಳ ಅಂತ್ಯದವರೆಗೆ ಇದು ಮುಂದುವರಿಯಲ್ಲಿದ್ದು, ಈ ಸೇಲ್‌ನಲ್ಲಿ ಕಂಪ್ಯೂಟರ್, ಡೆಸ್ಕ್‌ಟಾಪ್, ಲ್ಯಾಪ್‌ಟಾಪ್, ಟ್ಯಾಬ್ ಮತ್ತು ವಿವಿಧ ಆಕ್ಸಸರೀಸ್‌ಗಳು ಉತ್ತಮ ಆಫರ್ ಮತ್ತು ರಿಯಾಯಿತಿ ದರದಲ್ಲಿ ದೊರೆಯಲಿವೆ ಎಂದರು.

ಕಂಪೂಟರ್‌ಗಳು, ಲಾಪ್‌ಟಾಪ್‌ಗಳನ್ನು ಕೂಡ ಬಾಡಿಗೆಗೆ ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ, ಡೇಟಾ ರಿಕವರಿ, ಸಿಸಿಟಿವಿ ಸೇಲ್ಸ್‌, ಇನ್‌ಸ್ಟಾಲೇಷನ್‌, ಬಯೋಮೆಟ್ರಿಕ್‌ ಸೆಕ್ಯೂರಿಟಿ ಸಿಸ್ಟಮ್ಸ್‌, ಬಿಲ್ಲಿಂಗ್‌ ಸಾಫ್ಟ್‌ವೇರ್‌ನಂಥ ತಾಂತ್ರಿಕ ಸೇವೆಗಳು ಸಹ ಲಭ್ಯವಿದೆ ಎಂದು ತಿಳಿಸಿದರು.
 
ಈ ಮೆಗಾ ಸೇಲ್‌ಗೆ ಚಾಲನೆ ನೀಡಿ ಗಣೇಶ್‌ ಶರ್ಮಾ ಅವರು ಮಾತನಾಡಿದರು. ಕೋರ್‌ ಟೆಕ್ನಾಲಜೀಸ್‌ನ ಮಾಲೀಕ ಅನುಪ್‌ ಕೆಜೆ, ಪತ್ತೂರಿನಲ್ಲಿ 7-8 ವರ್ಷಗಳ ಹಿಂದೆ ಪ್ರಾರಂಭಿಸಿರುವ ಕೋರ್‌ ಟೆಕ್ನಾಲಜೀಸ್‌, ಕಂಪ್ಯೂಟರ್‌ ಉಪಕರಣಗಳ ಮಾರಾಟ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳೆದಿರುವುದು ಶ್ಲಾಘನೀಯ ಎಂದು ಹೇಳಿದರು. 

ಪುತ್ತೂರಿನಲ್ಲಿ ಆರಂಭವಾದ ಈ ಸಂಸ್ಥೆ, ಸುಳ್ಯದ ಜೊತೆಗೆ ಮಂಗಳೂರಿಗೂ ವಿಸ್ತರಣೆಯಾಗಿರುವುದು ಗಮನಾರ್ಹವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್‌, ಲ್ಯಾಪ್‌ಟಾಪ್‌ಗಳ ಬೆಲೆ ಜಾಸ್ತಿಯಾಗಿದ್ದು, ಎಂಜಿನಿಯರಿಂಗ್‌ ಸೇರಿ ವಿವಿಧ ಕೋರ್ಸ್‌ ಕಲಿಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಇಂಥಹ ಸಂದರ್ಭದಲ್ಲಿ ರೆಫ್ಯೂರ್ಬಿಸ್ಡ್ ಲಾಪ್‌ಟಾಪ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಅನುಕೂಲ ಉಂಟು ಮಾಡುತ್ತಿವೆ. ಈ ನಿಟ್ಟಿನಲ್ಲಿ ಅನೂಪ್‌ ಅವರ ಕೋರ್‌ ಟೆಕ್ನಾಲಜೀಸ್‌ ಸಂಸ್ಥೆಯು 6 ತಿಂಗಳ ವಾರಂಟಿಯೊಂದಿಗೆ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ಲಾಪ್‌ಟಾಪ್‌ಗಳನ್ನು ಪೂರೈಕೆ ಮಾಡುತ್ತಿರುವುದು ನಿಜಕ್ಕೂ ಉತ್ತಮ ಕ್ರಮವಾಗಿದೆ ಎಂದರು.

ಕೋರ್‌ ಟೆಕ್ನಾಲಜೀಸ್‌ ಸಂಸ್ಥೆಯು ತನ್ನ ಮೂರು ಶಾಖೆಗಳಲ್ಲಿ ಈ ಮೆಗಾ ಸೇಲ್‌ನಲ್ಲಿ ಬಹಳ ಆಕರ್ಷಕವಾದ ರಿಯಾಯಿತಿಗಳನ್ನು ಘೋಷಿಸಿದೆ. ಇದರಿಂದ ಗ್ರಾಹಕರಿಗೂ ಬಹಳ ಕಡಿಮೆ ಬೆಲೆಗೆ ಗುಣಮಟ್ಟದ ಕಂಪ್ಯೂಟರ್‌, ಲಾಪ್‌ಟ್ಯಾಪ್‌ ಹಾಗೂ ಅದಕ್ಕೆ ಸಂಬಂಧಿಸಿದ ಅಕ್ಸೆಸರೀಸ್‌ನ್ನು ಖರೀದಿಸುವುದಕ್ಕೆ ಅನುಕೂಲವಾಗಿದೆ. ಹೀಗಿರುವಾಗ, ನಮ್ಮ ಬಿಎನ್‌ಐ ಸಂಸ್ಥೆ ಕೂಡ ಅನೂಪ್‌ ಅವರ ಈ ಮೆಗಾ ಸೇಲ್‌ಗೆ ಎಲ್ಲ ರೀತಿಯ ಬೆಂಬಲವನ್ನು ನೀಡಲಿದ್ದು, ಅವರ ಸೇಲ್ಸ್‌ ಕೂಡ ಕಳೆದ ಬಾರಿಗಿಂತ ಹೆಚ್ಚಾಗುವುದಕ್ಕೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಎನ್‌ಐ ಪ್ರಗತಿ ಚಾಪ್ಟರ್‌ನ ಅಧ್ಯಕ್ಷರ ಭರತ್‌ ಶೆಟ್ಟಿ ಹಾಗೂ ರೋಟರಿ ಕ್ಲಬ್‌ ಪುತ್ತೂರು ಯುವದ ಅಧ್ಯಕ್ಷ ವಚನಾ ಜಯರಾಂ ಸಹ ಕೋರ್‌ ಟೆಕ್ನಾಲಜೀಸ್‌ನ ಈ ಮೆಗಾ ಸೇಲ್‌ಗೆ ಶುಭವನ್ನು ಕೋರಿದರು. ಕಾರ್ಯಕ್ರಮದಲ್ಲಿ ಬಿಎನ್‌ಐನ ಹಲವು ಸದಸ್ಯರು, ಗ್ರಾಹಕರು ಹಾಗೂ ಹಿತೈಷಿಗಳು ಪಾಲ್ಗೊಂಡಿದ್ದರು.

ಮೆಗಾ ಸೇಲ್‌ ಮೂರು ಶಾಖೆಗಳಲ್ಲಿಯೂ ಲಭ್ಯ:

ಕೋರ್‌ ಟೆಕ್ನಾಲಜೀಸ್‌ನ ಕಳೆದ ವರ್ಷದ ಮೆಗಾ ಸೇಲ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಈ ಬಾರಿಯ ಮೆಗಾ ಸೇಲ್‌ನಲ್ಲಿ ಗ್ರಾಹಕರಿಗೆ ಮತ್ತಷ್ಟು ಡಿಸ್ಕೌಂಟ್‌ ಹಾಗೂ ರಿಯಾಯಿತಿ ಮಾರಾಟವನ್ನು ಘೋಷಿಸಲಾಗಿದೆ. ಅಲ್ಲದೆ, ಸಂಸ್ಥೆಯು ಅತ್ಯಂತ ಕಡಿಮೆ ಅವಧಿಯ ಬದಲಿಗೆ ನವೆಂಬರ್‌ ತಿಂಗಳ ಅಂತ್ಯದವರೆಗೂ ಮೆಗಾ ಸೇಲ್‌ ಕೋರ್‌ ಟೆಕ್ನಾಲಜೀಸ್‌ನ ಮಂಗಳೂರು, ಪುತ್ತೂರು ಹಾಗೂ ಸುಳ್ಯ ಶಾಖೆಯಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ. ಹೀಗಿರುವಾಗ, ಹೊಸ ಕಂಪ್ಯೂಟರ್‌-ಡೆಸ್ಕ್‌ಟಾಪ್‌ ಖರೀದಿ ಅಥವಾ ರೆಫ್ಯೂರ್ಬಿಸ್ಡ್ ಲಾಪ್‌ಟಾಪ್‌ ಖರೀದಿಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ ಎಂದು ಸಂಸ್ಥೆ ಮಾಲೀಕ ಅನೂಪ್‌ ಕೆಜೆ ತಿಳಿಸಿದ್ದಾರೆ.

ಕೋರ್‌ ಟೆಕ್ನಾಲಜೀಸ್‌ನ ಮಳಿಗೆಗಳು:

ಮಂಗಳೂರು ಶಾಖೆ: 1ನೇ ಮಹಡಿ, ಕಂಕನಾಡಿ ಗೇಟ್‌ ಬಿಲ್ಡಿಂಗ್‌
ಸುಳ್ಯ ಶಾಖೆ: ಸೋಂತೋಡು ಎಂಪೋರಿಯಂ, KSRTC ಬಸ್ ನಿಲ್ದಾಣದ ಎದುರು
ಪುತ್ತೂರು ಶಾಖೆ: ಮಹಾಲಸಾ ಆರ್ಕೇಡ್, ಸಂಗೀತಾ ಮೊಬೈಲ್ಸ್ ಎದುರು, ಮುಖ್ಯ ರಸ್ತೆ

ಹೆಚ್ಚಿನ ವಿವರಗಳಿಗೆ ಮಂಗಳೂರು: 8277834777 | ಪುತ್ತೂರು: 8277227287 | ಸುಳ್ಯ: 8277874777 ಸಂಖ್ಯೆಯನ್ನು ಸಂಪರ್ಕಿಸಿರಿ. 

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.