Today Gold Price: ಇಂದು ಚಿನ್ನ - ಬೆಳ್ಳಿ ಬೆಲೆ ಇಳಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಳಿಕೆಯಾಗಿವೆ.

Oct 13, 2026 - 10:41
Today Gold Price: ಇಂದು ಚಿನ್ನ - ಬೆಳ್ಳಿ ಬೆಲೆ ಇಳಿಕೆ

Today Gold Price: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌ ಸಿಕ್ಕಿದೆ. ಚಿನಿವಾರ ಪೇಟೆಯಲ್ಲಿ ಇಂದು (ಮಂಗಳವಾರ) ಚಿನ್ನ ಹಾಗೂ ಬೆಳ್ಳಿ ಬೆಲೆಗಳು ಇಳಿಕೆಯಾಗಿವೆ. 

ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.390 ಕಡಿಮೆಯಾಗಿ ರೂ.1,49,290 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.350 ಇಳಿಕೆಯಾಗಿ ರೂ.1,36,850ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.290 ಕಡಿಮೆಯಾಗಿ ರೂ.1,11,970 ಆಗಿದೆ.

ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.5,000 ಇಳಿಕೆಯಾಗಿ, ರೂ.2,35,000 ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. 

ಷೇರುಪೇಟೆ: ಸಕಾರತ್ಮಕ ವಹಿವಾಟು

ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದೆ. ಬಿಎಸ್‌ಇ ಸೆನ್ಸೆಕ್ಸ್  27.05 ಅಂಕಗಳು ಏರಿಕೆಯಾಗಿ 72,771.32 ಅಂಕಗಳಿಗೆ ತಲುಪಿದೆ. ನಿಫ್ಟಿ 0.80 ಅಂಕಗಳು ಹೆಚ್ಚಳವಾಗಿ 22,364.15 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.

ಹೆಚ್‌ಸಿಎಲ್ ಟೆಕ್, ಟಿಸಿಎಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಹಾಗೂ ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಲಾಭದಲ್ಲಿವೆ. ಪವರ್ ಗ್ರಿಡ್, ಎನ್‌ಟಿಪಿಸಿ, ಟೈಟಾನ್, ಕೋಟಕ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟದಲ್ಲಿವೆ. 

ಸಂಜಯ್ ಅಂಬೇಕರ್ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.