ಕರಣ್ ಜೋಹರ್​ಗೆ ಶುರು ಆಗಿದೆಯಾ ಕಾಯಿಲೆ?

ದಿನದಿಂದ ದಿನಕ್ಕೆ ಕರಣ್​ ಜೋಹರ್​ ಅವರ ದೇಹದ ತೂಕ ಕಡಿಮೆ ಆಗುತ್ತಿದೆಯಾ ಎಂಬ ಅನುಮಾನ ಮೂಡಿದೆ.

Oct 7, 2024 - 11:18

ದಿನದಿಂದ ದಿನಕ್ಕೆ ಕರಣ್​ ಜೋಹರ್​ ಅವರ ದೇಹದ ತೂಕ ಕಡಿಮೆ ಆಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಈ ಫೋಟೋ. ಸೋಶಿಯಲ್​ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಫೋಟೋ ನೋಡಿದ ಬಹುತೇಕರು ಕರಣ್ ಜೋಹರ್​ ಅವರ ಆರೋಗ್ಯದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅನೇಕರು ಟ್ರೋಲ್​ ಮಾಡುತ್ತಿದ್ದಾರೆ.ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್​ ಅವರು ಆಗಾಗ ಜನರ ಗಮನ ಸೆಳೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನೆಟ್ಟಿಗರು ಅವರನ್ನು ಟ್ರೋಲ್​ ಮಾಡುತ್ತಾರೆ. ಬಾಲಿವುಡ್​ನಲ್ಲಿ ನೆಪೋಟಿಸಂ ಪೋಷಿಸುವ ವ್ಯಕ್ತಿ ಎಂಬ ಕಾರಣಕ್ಕೆ ಕರಣ್ ಜೋಹರ್​ ಅವರನ್ನು ಕಂಡರೆ ಬಹುತೇಕರಿಗೆ ಅಸಮಾಧಾನ ಇದೆ. ಈಗ  ಅವರ ಹೊಸ ಫೋಟೋ ವೈರಲ್​ ಆಗಿದೆ.
ಆ ಫೋಟೋದಲ್ಲಿ ಅವರು ಸಖತ್​ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಏನಾದರೂ ಕಾಯಿಲೆ ಇರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಹಾಸ್ಯ ಕಲಾವಿವ ಹರ್ಷ್​ ಗುಜ್ರಾಲ್​ ಜೊತೆ ಕರಣ್ ಜೋಹರ್ ಅವರು ಫೋಸ್​ ನೀಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಅನುಮಾನ ಮೂಡುವಂತಿದೆ. ಏನೋ ಅನಾರೋಗ್ಯ ಕಾಡುತ್ತಿರುವುದುದರಿಂದ ಕರಣ್​ ಜೋಹರ್​ ಇಷ್ಟೊಂದು ಸ್ಲಿಮ್​ ಆಗಿದ್ದಾರೆ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ದೇಹದ ತೂಕ ಕಡಿಮೆ ಆಗುತ್ತಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.ವೈರಲ್ ಆಗಿರುವ ಫೋಟೋ ನೋಡಿ ಜನರು ಅನೇಕ ರೀತಿಯಲ್ಲಿ ಊಹೆ ಮಾಡಿಕೊಂಡಿದ್ದಾರೆ. ಕರಣ್ ಜೋಹರ್​ ನಶೆಯಲ್ಲಿ ಇರಬಹುದು. ಆ ಕಾರಣದಿಂದಲೇ ಅವರು ದಿನದಿಂದ ದಿನಕ್ಕೆ ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಮೆಂಟ್​ ಕೂಡ ಬಂದಿದೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.