ನ.1 ರಂದು ಶಾಲೆ-ಕಾಲೇಜು, ಕಂಪನಿ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಬೇಕು: ಡಿಕೆಶಿ

ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದಂದು ಶಾಲಾ-ಕಾಲೇಜು, ಕಂಪನಿ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ  ಹಾರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

Oct 11, 2024 - 08:13

ನವೆಂಬರ್‌ 1ರ ಕನ್ನಡ ರಾಜ್ಯೋತ್ಸವದಂದು ಶಾಲಾ-ಕಾಲೇಜು, ಕಂಪನಿ, ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ  ಹಾರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.ತನ್ನ ನಿವಾಸದಲ್ಲಿ ಆಯುಧ ಪೂಜೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನವೆಂಬರ್ 1 ನಮಗೆ ರೋಮಾಂಚನ ದಿನ. ಈ ವರ್ಷ 50ನೇ ವರ್ಷದ ರಾಜೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ‍್ಯ ದಿನದ ರೀತಿ ಸಂಭ್ರಮ ಮಾಡಬೇಕು ಎಂದು ಹೇಳಿದರು.ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯಾಗಿ ಕನ್ನಡ ಬಾವುಟ ಹಾರಿಸಬೇಕು. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆಚರಣೆ ಮಾಡಿ ನಿಮ್ಮ ಸಂಸ್ಥೆಯಲ್ಲಿ ಏನು ಮಾಡಿದ್ದೀರಿ ಎನ್ನುವುದಕ್ಕೆ ನಾವು ನೀಡುವ ನಂಬರ್‌ಗೆ ಪೋಸ್ಟ್ ಮಾಡಬೇಕು. ಕನ್ನಡ ಭೂಮಿಯಲ್ಲಿ ಕನ್ನಡ ಕಲಿಯಬೇಕಾಗಿರೋದು ಎಲ್ಲರಿಗೂ ಕಡ್ಡಾಯ ಎಂದರು.ಕನ್ನಡ ಬಾವುಟ ಕಡ್ಡಾಯ ಮಾಡಿದ್ದನ್ನು ಕನ್ನಡ ಸಂಘಟನೆಗಳು ದುರುಪಯೋಗ ಮಾಡಿಕೊಳ್ಳಬಾರದು. ಕಾರ್ಖಾನೆ, ಕಂಪನಿಗಳಿಗೆ ಒತ್ತಡ, ಕಿರುಕುಳ ನೀಡಬಾರದು. ಕನ್ನಡ ಸಂಘಟನೆಗಳು ರಿಗೂ ಹೆದರಿಸಬಾರದು. ಹಾಗೆ ಏನಾದರೂ ಒತ್ತಡ ಹೇರಿದರೆ ಅಂತಹ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.