ಪ್ರಮಾಣವಚನಕ್ಕೆ ಸಕಲ ಸಿದ್ಧತೆ.. ಹೊಸ ಸಚಿವರ ಪಟ್ಟಿಯೇ ಅಂತಿಮಗೊಂಡಿಲ್ಲ!

Karnataka Cabinet Expansion: ಸಿಎಂ ಡಿ.ಕೆ.ಶಿವಕುಮಾರ್ ಕ್ಯಾಬಿನೆಟ್‌ ಸೇರುವ ಹೊಸ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಆದರೂ ಸಂಪುಟ ವಿಸ್ತರಣೆಯು ಗೊಂದಲದ ಗೂಡಾಗಿದೆ.

Jul 30, 2026 - 11:08
ಪ್ರಮಾಣವಚನಕ್ಕೆ ಸಕಲ ಸಿದ್ಧತೆ.. ಹೊಸ ಸಚಿವರ ಪಟ್ಟಿಯೇ ಅಂತಿಮಗೊಂಡಿಲ್ಲ!

ನವದೆಹಲಿ: ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar), ಕ್ಯಾಬಿನೆಟ್‌ ಸೇರಲಿರುವ ಹೊಸ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಅದರ ಹೊರತಾಗಿಯೂ ಸಂಪುಟ ವಿಸ್ತರಣೆಯು ಗೊಂದಲದ ಗೂಡಾಗಿದೆ.

ಲೋಕಭವನದಲ್ಲಿ ಪ್ರಮಾಣವಚನಕ್ಕೆ ಪೆಂಡಾಲ್ ಹಾಕಲಾಗಿದ್ದು, ಸಮಾರಂಭದ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಆದರೂ ದೆಹಲಿಯಲ್ಲಿ ವರಿಷ್ಠರು ಇನ್ನು ಸಚಿವರ ಪಟ್ಟಿಯನ್ನೇ ಅಂತಿಮಗೊಳಿಸಿಲ್ಲ. ರಾಜ್ಯ ನಾಯಕರಿಗೆ ವರಿಷ್ಠರ ಭೇಟಿಯೇ ಸಾಧ್ಯವಾಗಿಲ್ಲ.

ಇಂದು ನೂತನ ಸಚಿವರ ಹೆಸರು ಘೋಷಣೆ ಸಾಧ್ಯತೆ:

ಬುಧವಾರ ಸಚಿವರ ಪಟ್ಟಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು, ಹೊಸ ಸಚಿವರ ಪಟ್ಟಿಗೆ ಒಪ್ಪಿಗೆ ಸೂಚಿಸುವರು ಎಂದು ನಿರೀಕ್ಷಿಸಲಾಗಿತ್ತು. ಎಲ್ಲವು ಅಂದುಕೊಂಡಂತೆ ನಡೆದರೆ, ಇಂದು (ಗುರುವಾರ) ಸಂಜೆ ಪ್ರಮಾಣ ವಚನ ಸಮಾರಂಭ ನಡೆಯಬೇಕಿತ್ತು. ಆದರೀಗ ಪಟ್ಟಿ ಫೈನಲ್ ಆಗಿಲ್ಲ. ಬಹುತೇಕ ನಾಳೆ (ಶುಕ್ರವಾರ) ನೂತನ ಸಚಿವರು ಅಧಿಕಾರವನ್ನು ಸ್ವೀಕರಿಸಬಹುದು ಎನ್ನಲಾಗಿದ್ದು, ಖಚಿತ ವಿವರಗಳು ಲಭ್ಯವಿಲ್ಲ. 

ಸಚಿವಾಕಾಂಕ್ಷಿಗಳ ದಂಡೇ ದೆಹಲಿಯಲ್ಲಿದ್ದು, ಜೋರು ಲಾಬಿ ನಡೆಸುತ್ತಿದ್ದಾರೆ. ಬಹುತೇಕ ಇಂದು ರಾತ್ರಿ ಎಲ್ಲಾ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.