ಹಿತ್ತಲ ಗಿಡ ಮದ್ದು: ಯಾರೋ.. ಉಪಯೋಗಗಳೇನು?

Achillea Millefolium: ಯಾರೋ ಒಂದು ಪ್ರಾಚೀನ ಔಷಧೀಯ ಗಿಡ ಮೂಲಿಕೆಯಾಗಿದ್ದು, ಇದು ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ.

Aug 8, 2026 - 12:41
Aug 8, 2026 - 12:42
ಹಿತ್ತಲ ಗಿಡ ಮದ್ದು: ಯಾರೋ.. ಉಪಯೋಗಗಳೇನು?

ಯಾರೋ (Achillea millefolium) ಒಂದು ಪ್ರಾಚೀನ ಔಷಧೀಯ ಗಿಡ ಮೂಲಿಕೆಯಾಗಿದೆ. ಇದರ ಎಲೆಗಳು ಗರಿಗಳಂತೆ ಕೋಮಲವಾಗಿದ್ದು, ಬಿಳಿ ಅಥವಾ ಗುಲಾಬಿ ಬಣ್ಣದ ಸಣ್ಣ ಹೂಗಳ ಗೊಂಚಲುಗಳನ್ನು ಹೊಂದಿರುತ್ತವೆ.
 
ಆಯುರ್ವೇದದಲ್ಲಿ ಗಾಯ, ಉರಿಯೂತ ಹಾಗೂ ಜ್ವರಕ್ಕೆ ಔಷಧವಾಗಿ ಬಳಸುತ್ತಾರೆ. ಇದು ರಕ್ತಸ್ರಾವವನ್ನು ನಿಲ್ಲಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಶೀತ-ಕೆಮ್ಮನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದರ ಚಹಾವು ಒತ್ತಡ ನಿವಾರಿಸಿ, ಮುಟ್ಟಿನ ನೋವನ್ನು ಶಮನಗೊಳಿಸುತ್ತದೆ. ತಂಪು & ಒಣ ಪ್ರದೇಶಗಳಲ್ಲಿ ಬೆಳೆಯುವ ಈ ಸಸ್ಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
 
ಇದನ್ನು ಸಲಾಡ್, ಸೂಪ್ ಹಾಗೂ ಟಾನಿಕ್ ರೂಪದಲ್ಲಿ ಸೇವಿಸಬಹುದು. ಅತಿಯಾದ ಸೇವನೆ ತಪ್ಪಿಸಬೇಕು, ಗರ್ಭಿಣಿಯರು ವೈದ್ಯರ ಸಲಹೆ ಪಡೆಯಬೇಕು. 
 
ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಈ ಅದ್ಭುತ ಮೂಲಿಕೆ, ನೈಸರ್ಗಿಕ ಔಷಧಾಲಯವಿದ್ದಂತೆ. ಇದರ ಸುಗಂಧ ತೈಲವು ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಗಾಯದ ಕಲೆಗಳನ್ನು ಕಡಿಮೆ ಮಾಡುತ್ತದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.