ಹಿತ್ತಲ ಗಿಡ ಮದ್ದು: ಕ್ಯಾಮೊಮೈಲ್.. ಉಪಯೋಗಗಳೇನು?

Chamomile: ಇದೊಂದು ಸುಗಂಧಭರಿತ ಔಷಧೀಯ ಮೂಲಿಕೆಯಾಗಿದ್ದು, ಶತಮಾನಗಳಿಂದ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.

Aug 9, 2026 - 13:19
ಹಿತ್ತಲ ಗಿಡ ಮದ್ದು: ಕ್ಯಾಮೊಮೈಲ್.. ಉಪಯೋಗಗಳೇನು?

ಕ್ಯಾಮೊಮೈಲ್ (Chamomile) ಒಂದು ಸುಗಂಧಭರಿತ ಔಷಧೀಯ ಮೂಲಿಕೆಯಾಗಿದ್ದು, ಶತಮಾನಗಳಿಂದ ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಹೂವುಗಳು ಚಿಕ್ಕದಾಗಿದ್ದು, ಬಿಳಿ ದಳಗಳು ಹಾಗೂ ಹಳದಿ ಮಧ್ಯಭಾಗವನ್ನು ಹೊಂದಿರುತ್ತವೆ. 

ಕ್ಯಾಮೊಮೈಲ್ ಚಹಾ ನಿದ್ರಾಹೀನತೆ, ಒತ್ತಡ & ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹೊಟ್ಟೆ ಉಬ್ಬರವನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ-ಕೆಮ್ಮನ್ನು ಕಡಿಮೆ ಮಾಡುತ್ತದೆ. ಇದರ ಎಣ್ಣೆ ಚರ್ಮದ ಉರಿಯೂತ ಮತ್ತು ಮೊಡವೆಗಳಿಗೆ ಉಪಯುಕ್ತವಾಗಿದೆ. 

ದಿನಕ್ಕೆ ಒಂದು ಕಪ್ ಕ್ಯಾಮೊಮೈಲ್ ಚಹಾ ಕುಡಿಯುವುದು ಮನಸ್ಸಿಗೆ ಶಾಂತಿ ನೀಡುತ್ತದೆ. ಗರ್ಭಿಣಿಯರು ಹಾಗೂ ಚಿಕ್ಕ ಮಕ್ಕಳು ವೈದ್ಯರ ಸಲಹೆ ಪಡೆದು ಬಳಸುವುದು ಉತ್ತಮ. ಇದನ್ನು ಮನೆಯಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ.

ಡೇ2ಡೇ ನ್ಯೂಸ್ ಬ್ಯೂರೋ Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.