ಶಿವಮೊಗ್ಗ: ಸಿಟಿ-ಕೋ ಆಪರೇಟಿವ್ ಬ್ಯಾಂಕ್ ಸರ್ವ ಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ

Shivamogga: ಇಲ್ಲಿನ ಬಂಜಾರ ಕನ್ವೆನ್ಸನ್ ಹಾಲ್‌ನಲ್ಲಿ 'ಸಿಟಿ ಕೋಆಪರೇಟಿವ್ ಬ್ಯಾಂಕ್‌'ನ 114ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ಯಶಸ್ವಿಯಾಗಿ ನೆರವೇರಿತು.

Aug 13, 2026 - 12:21
ಶಿವಮೊಗ್ಗ: ಸಿಟಿ-ಕೋ ಆಪರೇಟಿವ್ ಬ್ಯಾಂಕ್ ಸರ್ವ ಸದಸ್ಯರ ಸಭೆ, ಪ್ರತಿಭಾ ಪುರಸ್ಕಾರ

ಶಿವಮೊಗ್ಗ: ಇಲ್ಲಿನ ಬಂಜಾರ ಕನ್ವೆನ್ಸನ್ ಹಾಲ್‌ನಲ್ಲಿ 'ಸಿಟಿ ಕೋಆಪರೇಟಿವ್ ಬ್ಯಾಂಕ್‌'ನ 114ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು   ಯಶಸ್ವಿಯಾಗಿ ನೆರವೇರಿತು. 

ಬ್ಯಾಂಕ್‌ನ ಅಧ್ಯಕ್ಷ ಕೆ.ರಂಗನಾಥ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. 'ಮಾರ್ಚ್ 2026ರ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟು ಸದಸ್ಯರ ಸಂಖ್ಯೆ 9,996 ಇದೆ. ರೂ.418.63 ಲಕ್ಷ ಷೇರು ಬಂಡವಾಳ ಹಾಗೂ ರೂ.114 ಕೋಟಿ 39 ಲಕ್ಷ ಠೇವಣಿ ಸಂಗ್ರಹವಾಗಿದ್ದು, ರೂ.75 ಕೋಟಿ 96 ಲಕ್ಷ ಮೊತ್ತವನ್ನು ಸಾಲವಾಗಿ ನೀಡಲಾಗಿದೆ ಎಂದರು. 

'ಬ್ಯಾಂಕ್‌ನ ಒಟ್ಟು ವ್ಯವಹಾರ ರೂ.525 ಕೋಟಿಗೂ ಮೀರಿದೆ. ನಿವ್ವಳ ಎನ್‌ಪಿಎ ಪ್ರಮಾಣ ಶೇಕಡ 0.43% ಇದೆ. ಪ್ರತಿವರ್ಷದಂತೆ ಈ ವರ್ಷವು ಬ್ಯಾಂಕ್‌ ಎ ಶ್ರೇಣಿಯಲ್ಲಿದ್ದು, ಷೇರು ಲಾಭಾಂಶವನ್ನು ಶೇಕಡ 10% ನೀಡಲು ಸಭೆಯು ಒಪ್ಪಿಗೆ ನೀಡಿದೆ' ಎಂದು ಹೇಳಿದರು.

ಪ್ರತಿಭಾ ಪುರಸ್ಕಾರ: 

ಎಸ್‌ಎಸ್‌ಎಲ್‌ಸಿ, ಪಿಯುಸಿ. ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಉತ್ತಮ ಅಂಕ, ಹಾಗೂ ಶೇಕಡ 90% ಶ್ರೇಣಿಯಲ್ಲಿ ತೇರ್ಗಡೆಯಾದ ಬ್ಯಾಂಕ್‌ನ ಸದಸ್ಯರ 70 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಬ್ಯಾಂಕ್‌ನಲ್ಲಿ ಸಾಲ ಪಡೆದು, ಉತ್ತಮವಾಗಿ ಕಂತು ಪಾವತಿಸುತ್ತಿರುವ ಸದಸ್ಯ ಸಾಲಗಾರರನ್ನು ಸನ್ಮಾನಿಸಲಾಯಿತು.

 ಗೌರವ ಸಮರ್ಪಣೆ:

ಕರ್ನಾಟಕ ಸರ್ಕಾರದಿಂದ 'ಸಹಕಾರ ರತ್ನ' ಬಿರುದು ಪಡೆದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ & ಸಿಟಿ ಬ್ಯಾಂಕ್‌ ನಿರ್ದೇಶಕ ಎಸ್.ಕೆ.ಮರಿಯಪ್ಪ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಎಸ್.ಪಿ.ಶೇಷಾದ್ರಿ ಅವರುಗಳನ್ನು ಆಡಳಿತ ಮಂಡಳಿ ಪರವಾಗಿ ಗೌರವ ಸಮರ್ಪಣೆ ಮಾಡಲಾಯಿತು.

ಬ್ಯಾಂಕ್‌ನ ಹಿರಿಯ ನಿರ್ದೇಶಕ ಜಿ.ಚಂದ್ರಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು. ಬ್ಯಾಂಕ್‌ನ ಉಪಾಧ್ಯಕ್ಷ ಸಿ.ಹೊನ್ನಪ್ಪ, ಖಜಾಂಚಿ ಘನಶಾಮ್ ನಿರ್ದೇಶಕರಾದ ಉಮಾಶಂಕರ್ ಉಪಾಧ್ಯ, ಜಿ.ರಾಜು, ರೇಖಾ ಚಂದ್ರಶೇಖರ್, ಎಂ.ರಾಕೇಶ್, ಎಸ್.ಎನ್.ಮಹೇಶ್, ಜಿ.ಹೆಚ್ ಪ್ರೇಮಾ, ಎಸ್.ಡಿ,ಪ್ರಸನ್ನ ಕುಮಾರ್, ಬಿ.ಲೋಕೇಶ್, ಬಿ.ಮಹದೇವ ಲಾಲ್, ಸಿಇಒ ಮನೋಜ್ ಕುಮಾರ್, ಸಿಬ್ಬಂದಿಗಳು ಹಾಗೂ ಪಿಗ್ಮಿ ಸಂಗ್ರಾಹಕರು ಉಪಸ್ಥಿತರಿದ್ದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.