ಸಣ್ಣಕಥೆ: ಪ್ರೀತಿಗೆ ಅವಕಾಶ ಕೊಟ್ಟಾಗ, ದ್ವೇಷವೂ ಸಂಬಂಧವಾಗಿ ಬದಲಾಗಬಹುದು
ಮಗ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದಾಗ ತಾಯಿ ಅಳುತ್ತಾ ಹೇಳಿದಳು 'ನಾನು ನಿನ್ನ ಮದುವೆಯನ್ನು ಕನಸು ಕಂಡಿದ್ದು ನಮ್ಮ ಜಾತಿಯ ಹುಡುಗಿಯ ಜೊತೆ. ನಮ್ಮ ಜಾತಿಯಲ್ಲಿ ಎಷ್ಟೊಂದು ಒಳ್ಳೆಯ ಹುಡುಗಿಯರಿದ್ದಾರೆ, ನೀನು ಬೇರೆ ಜಾತಿಯ ಹುಡುಗಿಯನ್ನೇ ಯಾಕೆ ಮದುವೆಯಾಗಬೇಕು?'
ಪುಟ್ಟ ಹಳ್ಳಿಯಲ್ಲಿ ರಮೇಶ್ ಮತ್ತು ಅವನ ತಾಯಿ ಲಕ್ಷ್ಮಿ ವಾಸಿಸುತ್ತಿದ್ದರು. ರಮೇಶ್ ಅದೇ ಊರಿನ ಬೇರೆ ಜಾತಿಯ ಹುಡುಗಿ ಕಾವ್ಯಾಳನ್ನು ಪ್ರೀತಿಸುತ್ತಿದ್ದ.
ಮಗ ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗುತ್ತೇನೆ ಎಂದಾಗ ತಾಯಿ ಅಳುತ್ತಾ ಹೇಳಿದಳು
'ನಾನು ನಿನ್ನ ಮದುವೆಯನ್ನು ಕನಸು ಕಂಡಿದ್ದು ನಮ್ಮ ಜಾತಿಯ ಹುಡುಗಿಯ ಜೊತೆ. ನಮ್ಮ ಜಾತಿಯಲ್ಲಿ ಎಷ್ಟೊಂದು ಒಳ್ಳೆಯ ಹುಡುಗಿಯರಿದ್ದಾರೆ, ನೀನು ಬೇರೆ ಜಾತಿಯ ಹುಡುಗಿಯನ್ನೇ ಯಾಕೆ ಮದುವೆಯಾಗಬೇಕು?"
ರಮೇಶ್ ತಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅವಳು ಅದಕ್ಕೆ ಒಪ್ಪಲಿಲ್ಲ.
ತಾಯಿಗೆ ವಿರುದ್ಧವಾಗಿ ತಾನು ಪ್ರೀತಿಸಿದ ಹುಡುಗಿ ಜೊತೆ ಮಗ ರಮೇಶ್ ಮದುವೆಯಾದ. ಆರಂಭದಲ್ಲಿ ತಾಯಿ ಸೊಸೆಯ ಜೊತೆ ಮಾತನಾಡುತ್ತಿರಲಿಲ್ಲ.
ಒಂದು ದಿನ ತಾಯಿಗೆ ಹುಷಾರಿಲ್ಲದಾಗ, ಸೊಸೆ ರಾತ್ರಿಯಿಡೀ ಅವಳ ಪಕ್ಕದಲ್ಲೇ ಕುಳಿತು ಆರೈಕೆ ಮಾಡಿದಳು.
ಬೆಳಗ್ಗೆ ತಾಯಿ ಕೇಳಿದಳು:
"ನಾನು ನಿನ್ನನ್ನು ಇಷ್ಟಪಡದಿದ್ದರೂ, ನೀನು ನನ್ನನ್ನು ಇಷ್ಟು ಪ್ರೀತಿಯಿಂದ ನೋಡಿಕೊಳ್ಳುವುದು ಯಾಕೆ?"
ಸೊಸೆ ಉತ್ತರಿಸಿದಳು:
"ನಾನು ನಿಮ್ಮ ಮಗನನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಅಮ್ಮಾ, ನಿಮ್ಮನ್ನು ದ್ವೇಷಿಸಲು ಅಲ್ಲ!"
ತಾಯಿ ಅವಳನ್ನು ತಬ್ಬಿಕೊಂಡು ಅತ್ತಳು.
ಸಂದೇಶ: ಪ್ರೀತಿಗೆ ಅವಕಾಶ ಕೊಟ್ಟಾಗ, ದ್ವೇಷವೂ ಸಂಬಂಧವಾಗಿ ಬದಲಾಗಬಹುದು.
ಬರಹ: ಅನುಶ್ರೀ ರೈ, ಪಳ್ಳತಡ್ಕ