Today Gold Price: ಚಿನ್ನದ ದರ ಅತ್ಯಲ್ಪ ಇಳಿಕೆ

Today Gold Price: ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಚಿನ್ನದ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ.

Aug 10, 2026 - 11:31
Aug 10, 2026 - 11:32
Today Gold Price: ಚಿನ್ನದ ದರ ಅತ್ಯಲ್ಪ ಇಳಿಕೆ

ಬೆಂಗಳೂರು: ಆಷಾಢ ಮಾಸವಿದ್ದರೂ ಆಭರಣ ದರವು ಏರಿಕೆ ಹಾದಿಯಲಿದ್ದು, ಗ್ರಾಹಕರಿಗೂ ಆರ್ಥಿಕವಾಗಿ ಹೊರೆಯಾಗುತ್ತಿದೆ. ಸದ್ಯ ಶ್ರಾವಣ ಸಮೀಪಿಸುತ್ತಿದ್ದು, ಬಂಗಾರದ ಬೆಲೆಯೂ ಇಳಿಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
 
ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಚಿನ್ನದ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ. 
 
ರಾಜ್ಯದಲ್ಲಿ 24 ಕ್ಯಾ. 10 ಗ್ರಾಂ ಚಿನ್ನದ ದರ ರೂ.380 ಕಡಿಮೆಯಾಗಿ ರೂ.1,51,970 ಆಗಿದೆ. 22 ಕ್ಯಾ. 10 ಗ್ರಾಂ ಚಿನ್ನದ ಬೆಲೆ ರೂ.350 ಇಳಿಕೆಯಾಗಿ ರೂ.1,39,300ಕ್ಕೆ ಬಂದಿದೆ. 18 ಕ್ಯಾ. 10 ಗ್ರಾಂ ಚಿನ್ನದ ದರ ರೂ.280 ಕಡಿಮೆಯಾಗಿ ರೂ.1,13,980 ಆಗಿದೆ. 1 ಕೆಜಿ ಬೆಳ್ಳಿ ರೂ.2,45,000 ಬೆಲೆಯಲ್ಲಿ  ಮಾರಾಟವಾಗುತ್ತಿದೆ. 
 
ಷೇರುಪೇಟೆ: ಇಂದು ಆರಂಭಿಕ ವಹಿವಾಟು ಸ್ವಲ್ಪ ಮಟ್ಟಿಗೆ ಕುಸಿತ: 
 
ಸೆನ್ಸೆಕ್ಸ್ 97.39 ಅಂಕಗಳು ಇಳಿಕೆಯಾಗಿ 78,401.78 ಅಂಕಗಳಿಗೆ ತಲುಪಿದೆ. ನಿಫ್ಟಿ 34.25 ಅಂಕಗಳು ಕಡಿಮೆಯಾಗಿ 24,536.40 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. 
 
ಟೈಟಾನ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಸಿಪ್ಲಾ ಷೇರುಗಳು ಲಾಭದಲ್ಲಿವೆ. ಹೆಚ್‌ಡಿಎಫ್‌ಸಿ ಲೈಫ್, ಎಸ್‌ಬಿಐ, ಪವರ್ ಗ್ರಿಡ್ ಕಾರ್ಪ್, ಅಲ್ಟ್ರಾಟೆಕ್ ಸಿಮೆಂಟ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟದಲ್ಲಿವೆ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.