ವಿದ್ಯಾಮಾತಾ ಅಕಾಡೆಮಿ: ಗ್ರಾಮ ಆಡಳಿತಾಧಿಕಾರಿ ಹುದ್ದೆ.. ಉಚಿತ ತರಬೇತಿ ಆಯೋಜನೆ

Vidyamata Academy: ಪುತ್ತೂರಿನ 'ವಿದ್ಯಾಮಾತಾ ಅಕಾಡೆಮಿ' ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ, ಆಗಸ್ಟ್ 9 ಭಾನುವಾರದಂದು ಉಚಿತ ತರಬೇತಿ ಆಯೋಜಿಸಿದೆ.

Aug 2, 2026 - 16:08
Aug 2, 2026 - 16:09
ವಿದ್ಯಾಮಾತಾ ಅಕಾಡೆಮಿ: ಗ್ರಾಮ ಆಡಳಿತಾಧಿಕಾರಿ ಹುದ್ದೆ.. ಉಚಿತ ತರಬೇತಿ ಆಯೋಜನೆ

ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಿದ್ದು, ಆಗಸ್ಟ್ 7ಕ್ಕೆ ಕೊನೆಗೊಳ್ಳುತ್ತದೆ. 
 
ಕರಾವಳಿ ಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರ 'ವಿದ್ಯಾಮಾತಾ ಅಕಾಡೆಮಿ' ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ, ಆಗಸ್ಟ್ 9 ಭಾನುವಾರದಂದು ಉಚಿತ ತರಬೇತಿ ಆಯೋಜಿಸಿದೆ. 
 
ಗ್ರಾಮ ಆಡಳಿತಾಧಿಕಾರಿ ಮಾತ್ರವಲ್ಲದೆ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿಸ್ಕೃತವಾದ ಮಾಹಿತಿ ಒದಗಿಸಲಾಗುತ್ತದೆ. ಸದ್ಯ ಅರ್ಜಿ ಸಲ್ಲಿಸಿರುವ ಹಾಗೂ ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಈ ಉಚಿತ ತರಬೇತಿಗೆ ಹಾಜರಾಗಬಹುದು ಎಂದು ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9448527606ಗೆ ಸಂಪರ್ಕಿಸಬಹುದು.

ಸಂಜಯ್ ಅಂಬೇಕರ್ ಟಿಜಿ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.