ರೈಲ್ವೆ ಟಿಕೆಟ್ ದರ ಏರಿಕೆ: ಕಿ.ಮೀಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ: ಜೋಶಿ

ಕಿಲೋ ಮೀಟರ್‌ಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ ಎಂದು ರೈಲ್ವೆ ಟಿಕೆಟ್ ದರ ಏರಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

Dec 22, 2025 - 17:36
ರೈಲ್ವೆ ಟಿಕೆಟ್ ದರ ಏರಿಕೆ: ಕಿ.ಮೀಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ: ಜೋಶಿ
Prahlad Joshi

ಹುಬ್ಬಳ್ಳಿ: ಕಿಲೋ ಮೀಟರ್‌ಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ ಎಂದು ರೈಲ್ವೆ ಟಿಕೆಟ್ ದರ ಏರಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಾನು ವಿರೋಧ ಪಕ್ಷದಲ್ಲಿದ್ದಾಗ ರೈಲ್ವೆ ಟಿಕೆಟ್ ದರ ಹೆಚ್ಚಳ ಆಗಿದ್ದಕ್ಕೆ ಲೋಕಸಭೆಯಲ್ಲಿ ಮಾತಾಡಿದ್ದೆ. ಇದೀಗ ಕೇವಲ ಕಿ.ಮೀಗೆ ಒಂದು ಪೈಸೆ ಹೆಚ್ಚಾಗಿದೆ ಎಂದಿದ್ದಾರೆ.

ಸ್ಥಳೀಯವಾಗಿ ಬಸ್ ಓಡಾಟಕ್ಕೆ ದರ ಹೆಚ್ಚಿದೆ, ಬಡವರಿಗೆ ಹೊರೆ ಆಗಬಾರದು, ಜನರ ಅಪೇಕ್ಷೆ ಮೇರೆಗೆ ಹೆಚ್ಚು ರೈಲು ಮತ್ತು ಸ್ವಚ್ಛತೆ ಬಗ್ಗೆ ಕೂಡ ಗಮನ ಹರಿಸಲಾಗುತ್ತಿದೆ. ರೈಲ್ವೆ ಟಿಕೆಟ್ ದರ ಹೆಚ್ಚೇನು ಏರಿಕೆ ಆಗಿಲ್ಲ. ಇದನ್ನ ಪೊಲಿಟಿಕಲ್ ಟುಲ್ ಮಾಡಿಕೊಂಡು ಜನರ ಅಪೇಕ್ಷೆ ಮೇರೆಗೆ ಒಂದು ಪೈಸೆ ಹೆಚ್ಚು ಮಾಡಿದ್ದೇವೆ. ಎಲ್ಲ ಪ್ರಯಾಣಿಕರಿಗೆ ಸಬ್ಸಿಡಿ ಕೊಡಲಾಗುತ್ತಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋದರೆ 25 ಪೈಸೆ ಮಾತ್ರ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

Day2Day News Bureau Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.