ಡಿ.ಕೆ.ಶಿವಕುಮಾರ್ ಸಿಎಂ ಪ್ರಮಾಣಕ್ಕೆ ಕ್ಷಣಗಣನೆ

ಎಚ್‌.ಡಿ.ದೇವೇಗೌಡ, ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸಗಳಿಗೆ ತೆರಳಿ ಆಶೀರ್ವಾದ ಪಡೆದ ಡಿಕೆಶಿ, ಶಿವಕುಮಾರ್ ಅವರಿಗೆ ಶುಭ ಕೋರಿದ ಸೋನಿಯಾ ಗಾಂಧಿ

Jun 3, 2026 - 15:02
ಡಿ.ಕೆ.ಶಿವಕುಮಾರ್ ಸಿಎಂ ಪ್ರಮಾಣಕ್ಕೆ ಕ್ಷಣಗಣನೆ

ಬೆಂಗಳೂರು, ಜೂನ್‌ 3: ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಅವರು ನಿಯೋಜಿತ ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಬುಧವಾರ ದೂರವಾಣಿ ಕರೆ ಮಾಡಿ ಶುಭ ಹಾರೈಸಿದರು.

ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಿರಿ. ಕರ್ನಾಟಕವನ್ನು ಯಶಸ್ವಿಯಾಗಿ ಮುನ್ನಡೆಸುತ್ತೀರಿ ಎಂಬ ಅದಮ್ಯ ವಿಶ್ವಾಸ ನನಗಿದೆ. ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ. ಮತ್ತಷ್ಟು
ಯಶಸ್ಸು ನಿಮ್ಮದಾಗಲಿ ಎಂದು ಸೋನಿಯಾ ಗಾಂಧಿ ಅವರು ಶುಭಾಶಯ ಹೇಳಿದರು.

ಈ ಮಧ್ಯೆ, ರಾಜ್ಯದ 25ನೇ ಮುಖ್ಯಮಂತ್ರಿ ಆಗಿ ಶಿವಕುಮಾರ್ ಅವರ ಪದಗ್ರಹಣಕ್ಕೆ ಲೋಕಭವನದಲ್ಲಿ ಸಕಲ ಸಿದ್ಧತೆ ನಡೆದಿದೆ.

ಇದಕ್ಕೆ ಮೊದಲಾಗಿ ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಬಿಜೆಪಿ ನಾಯಕ ಬಿ.ಎಸ್.ಯುಡಿಯೂರಪ್ಪ ಅವರ ಮನೆಗಳಿಗೆ ತೆರಳಿ ಆಶೀರ್ವಾದ ಪಡೆದರು ಹಾಗೂ ತಮ್ಮ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿದರು.

ಸದಾಶಿವನಗರದ ತಮ್ಮ ಮನೆಯಲ್ಲಿ ಅಮ್ಮನ ಆಶೀರ್ವಾದ ಪಡೆದರು.

13 ಸಚಿವರು: ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ 13 ಮಂದಿ ಇರುವುದು ದೃಢಪಟ್ಟಿದೆ. ಡಾ.ಜಿ.ಪರಮೇಶ್ವರ ಅವರು ಡಿಸಿಎಂ ಆಗಿರಲಿದ್ದಾರೆ.