ಕರಣ್ ಜೋಹರ್ಗೆ ಶುರು ಆಗಿದೆಯಾ ಕಾಯಿಲೆ?
ದಿನದಿಂದ ದಿನಕ್ಕೆ ಕರಣ್ ಜೋಹರ್ ಅವರ ದೇಹದ ತೂಕ ಕಡಿಮೆ ಆಗುತ್ತಿದೆಯಾ ಎಂಬ ಅನುಮಾನ ಮೂಡಿದೆ.
ದಿನದಿಂದ ದಿನಕ್ಕೆ ಕರಣ್ ಜೋಹರ್ ಅವರ ದೇಹದ ತೂಕ ಕಡಿಮೆ ಆಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಈ ಫೋಟೋ. ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಫೋಟೋ ನೋಡಿದ ಬಹುತೇಕರು ಕರಣ್ ಜೋಹರ್ ಅವರ ಆರೋಗ್ಯದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಅನೇಕರು ಟ್ರೋಲ್ ಮಾಡುತ್ತಿದ್ದಾರೆ.ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ಆಗಾಗ ಜನರ ಗಮನ ಸೆಳೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಾರೆ. ಬಾಲಿವುಡ್ನಲ್ಲಿ ನೆಪೋಟಿಸಂ ಪೋಷಿಸುವ ವ್ಯಕ್ತಿ ಎಂಬ ಕಾರಣಕ್ಕೆ ಕರಣ್ ಜೋಹರ್ ಅವರನ್ನು ಕಂಡರೆ ಬಹುತೇಕರಿಗೆ ಅಸಮಾಧಾನ ಇದೆ. ಈಗ ಅವರ ಹೊಸ ಫೋಟೋ ವೈರಲ್ ಆಗಿದೆ.
ಆ ಫೋಟೋದಲ್ಲಿ ಅವರು ಸಖತ್ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಏನಾದರೂ ಕಾಯಿಲೆ ಇರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.ಹಾಸ್ಯ ಕಲಾವಿವ ಹರ್ಷ್ ಗುಜ್ರಾಲ್ ಜೊತೆ ಕರಣ್ ಜೋಹರ್ ಅವರು ಫೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಅನುಮಾನ ಮೂಡುವಂತಿದೆ. ಏನೋ ಅನಾರೋಗ್ಯ ಕಾಡುತ್ತಿರುವುದುದರಿಂದ ಕರಣ್ ಜೋಹರ್ ಇಷ್ಟೊಂದು ಸ್ಲಿಮ್ ಆಗಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ದೇಹದ ತೂಕ ಕಡಿಮೆ ಆಗುತ್ತಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.ವೈರಲ್ ಆಗಿರುವ ಫೋಟೋ ನೋಡಿ ಜನರು ಅನೇಕ ರೀತಿಯಲ್ಲಿ ಊಹೆ ಮಾಡಿಕೊಂಡಿದ್ದಾರೆ. ಕರಣ್ ಜೋಹರ್ ನಶೆಯಲ್ಲಿ ಇರಬಹುದು. ಆ ಕಾರಣದಿಂದಲೇ ಅವರು ದಿನದಿಂದ ದಿನಕ್ಕೆ ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಮೆಂಟ್ ಕೂಡ ಬಂದಿದೆ.