ಈ ದಿನದ ರಾಶಿ ಭವಿಷ್ಯ

ರಾಶಿ ಭವಿಷ್ಯ

Dec 15, 2024 - 05:07
Dec 13, 2024 - 16:09
ಈ ದಿನದ ರಾಶಿ ಭವಿಷ್ಯ
ರಾಶಿ ಭವಿಷ್ಯ

   ದಿನ ಭವಿಷ್ಯ
                   ಜ್ಯೋತಿರ್ಮಯ

ಅದೃಷ್ಟ ಸಂಖ್ಯೆ  6

1.ಮೇಷ:
ವಿರಾಮದ ಕಾರಣದಿಂದ ದಿನಚರಿ ನಿಧಾನ. ವ್ಯವಹಾರ ಸುಧಾರಣೆಯ ಬಗ್ಗೆ ಚಿಂತನೆ. ಆಪ್ತ ವಲಯಗಳ ಸಂಪರ್ಕ. ಹಿರಿಯ ನಾಗರಿಕರಿಗೆ ನೆಮ್ಮದಿ.. ದೇವತಾಕ್ಷೇತ್ರಕ್ಕೆ ಸಂದರ್ಶನ ಸಂಭವ. ಬಂಧುಗಳ ಮನೆಯಲ್ಲಿ  ದೇವತಾರಾಧನೆ. ಗೃಹಿಣಿಯರಿಗೆ ನೆಮ್ಮದಿ. ಗಣೇಶ ಕವಚ, ಆದಿತ್ಯ ಹೃದಯ, ನವಗ್ರಹ ಸ್ತೋತ್ರ ಓದಿ.

2.ವೃಷಭ:
ಭಾವೀ ವಧೂ- ವರರ ಸಂದರ್ಶನ ಸಂಭವ. ಹಿರಿಯರಿಗೆ ಮತ್ತು ಮಕ್ಕಳಿಗೆ ಲವಲವಿಕೆ. ವ್ಯಾಪಾರಿಗಳು, ಎಂಜಿನಿಯರ್, ಲೆಕ್ಕ ಪರಿಶೋಧಕರು, ನ್ಯಾಯವಾದಿಗಳೇ ಮೊದಲಾದ  ವೃತ್ತಿಪರರಿಗೆ ವಿರಾಮ ಇಲ್ಲ. ಗೃಹಿಣಿಯರ ಸ್ವಾವಲಂಬನೆ ಆದಾಯ ವೃದ್ಧಿ. ಒಟ್ಟಿನಲ್ಲಿ ಶುಭಫಲಗಳ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಸ್ತೋತ್ರ, ಮಹಾಲಕ್ಷ್ಮಿ ಅಷ್ಟಕ ಓದಿ.

3.ಮಿಥುನ:
ದಿನಾರಂಭದಲ್ಲೇ ಹರ್ಷ, ಉಲ್ಲಾಸ. ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಕೆಲವು ವರ್ಗದ ವ್ಯಾಪಾರಿಗಳಿಗೆ ಒಳ್ಳೆಯ ಲಾಭ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸಂಗೀತ ಶ್ರವಣ, ಸತ್ಸಂಗಗಳಲ್ಲಿ ಕಾಲಯಾಪನೆ. ಎಲ್ಲರ ಆರೋಗ್ಯ ಉತ್ತಮ. ಗಣೇಶ ಪಂಚರತ್ನ, ಶಿವಕವಚ, ನವಗ್ರಹ ಸ್ತೋತ್ರ ಓದಿ.

4.ಕರ್ಕಾಟಕ:
ಶುಭಫಲಗಳ ದಿನ. ಹಿರಿಯರ ಯೋಗಕ್ಷೇಮ ವಿಚಾರಿಸುತ್ತಿರಿ. ಮನೆಯಲ್ಲಿ ಅತಿಥಿ ಸತ್ಕಾರ ಯೋಗ. ಮಕ್ಕಳ ಭವಿಷ್ಯ ಚಿಂತನೆ. ಅವಿವಾಹಿತರಿಗೆ ತಕ್ಕ ಜೋಡಿ ಸಿಗುವ ಸಾಧ್ಯತೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ವಿರಾಮದ ಸದುಪಯೋಗಕ್ಕೆ ಪ್ರಯತ್ನ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

5.ಸಿಂಹ:
ಎಲ್ಲ ರಂಗಗಳಲ್ಲೂ ಶುಭಫಲಗಳು ಗೋಚರ. ಹಳೆಯ ಸಾಲ ಅನಿರೀಕ್ಷಿತವಾಗಿ ವಾಪಸಾದ ಆನಂದ. ಸಕಾಲಿಕ ಪ್ರಯತ್ನದಿಂದ ಕಾರ್ಯಗಳು ಶೀಘ್ರ ಮುಕ್ತಾಯ. ವ್ಯವಹಾರಾರ್ಥವಾಗಿ ಸಣ್ಣ ಪ್ರವಾಸದ ಸಾಧ್ಯತೆ. ದಾಂಪತ್ಯ ಸುಖ ಉತ್ತಮ. ಬಂಧುಗಳ ಮನೆಗೆ ಭೇಟಿ. ಗಣೇಶ ಸ್ತೋತ್ರ, ದತ್ತಾತ್ರೇಯ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

6.ಕನ್ಯಾ:
ಸೇವಾಕಾರ್ಯಗಳಿಂದ ಜನಪ್ರಿಯತೆ ವೃದ್ಧಿ.  ಪ್ರಾಕೃತಿಕ ತಾಣಗಳಿಗೆ ಭೇಟಿ ಸಂಭವ. ಭವಿಷ್ಯದ ಭದ್ರತೆಗಾಗಿ ದೀರ್ಘಾವಧಿ ಹೂಡಿಕೆ. ಸಂಸಾರದಲ್ಲಿ ಸದ್ಭಾವನೆ, ಸಾಮರಸ್ಯ ವೃದ್ಧಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಹಣ್ಣು ನೀಡಿ ಸಾಂತ್ವನ. ಗಣೇಶ ಅಷ್ಟಕ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

7.ತುಲಾ:
ಬಂಧುವರ್ಗದಲ್ಲಿ ವಿವಾಹ. ಪರಿಸರ ಸ್ವಚ್ಛತೆ ಚಟುವಟಿಕೆಗಳಲ್ಲಿ ಆಸಕ್ತಿ. ಜೇನು ವ್ಯವಸಾಯ, ತೋಟಗಾರಿಕೆಯಲ್ಲಿ ಆಸಕ್ತರಿಗೆ ಸಂತೋಷದ ಸಂದರ್ಭ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ‌ ಲಾಭ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ. ಗಣೇಶ ಅಷ್ಟಕ, ಸುಬ್ರಹ್ಮಣ್ಯ ಕರಾವಲಂಬನ ಸ್ತೋತ್ರ, ನವಗ್ರಹ ಸ್ತೋತ್ರ ಓದಿ.

8.ವೃಶ್ಚಿಕ:
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ. ವಸ್ತ್ರಾಭರಣ ಖರೀದಿ ಸಂಭವ. ಗೃಹಾಲಂಕಾರದಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ವಾಹನ ಚಾಲನೆಯಲ್ಲಿ ಎಚ್ಚರ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ಅನುಭವ. ಸಂಕಷ್ಟನಾಶನ ಗಣೇಶ ಸ್ತೋತ್ರ, ಶಿವಾಷ್ಟೋತ್ತರ ಶತನಾಮ ಸ್ತೋತ್ರ, ಕನಕಧಾರಾ ಸ್ತೋತ್ರ ಓದಿ.

9.ಧನು:
ಉದ್ಯೋಗಸ್ಥರಿಗೆ ಬಿಡುವಿನ ಆನಂದ. ಉಳಿತಾಯ  ಯೋಜನೆಗಳ‌ ಏಜೆಂಟರಿಗೆ ಆದಾಯ  ವೃದ್ಧಿ ಯೋಗ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳ ಕ್ಷಿಪ್ರಗತಿಯ ಮುನ್ನಡೆ. ಹಿತಶತ್ರುಗಳ ಕುರಿತು ಎಚ್ಚರ‌. ಕೆಲವರಿಗೆ ರಕ್ತದಾನ ಮಾಡುವ ಅವಕಾಶ ಪ್ರಾಪ್ತಿ. ಗಣೇಶ ಕವಚ, ವಿಷ್ಣು ಸಹಸ್ರನಾಮ, ಮಹಿಷಮರ್ದಿನಿ ಸ್ತೋತ್ರ ಓದಿ.


10.ಮಕರ:
ಆದಾಯ ವೃದ್ಧಿ  ಪ್ರಯತ್ನಕ್ಕೆ ಯೋಗ್ಯ ಫಲ. ಹೂಡಿಕೆಯಲ್ಲಿ ಎಳೆಯರಿಗೆ ಮಾರ್ಗದರ್ಶನ. ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ಶಸ್ತ್ರವೈದ್ಯರಿಗೆ ಕೀರ್ತಿ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ. ಮನೆಯಲ್ಲಿ ಹರ್ಷದ ವಾತಾವರಣ. ಗಣೇಶ ಪಂಚರತ್ನ, ಹನುಮಾನ್ ಚಾಲೀಸಾ, ಶನಿಸ್ತೋತ್ರ ಓದಿ.

 

11. ಕುಂಭ:
ಬಂಧು‌ ಬಳಗದವರಿಂದ ವಿಶೇಷ ಪ್ರೇಮ ಪ್ರಕಟ. ಹಿರಿಯರ ಆಸ್ತಿಯಲ್ಲಿ ಹೊಸ ಬಗೆಯ ಕೃಷಿ ಆರಂಭ‌. ವೃದ್ಧಾಶ್ರಮ,  ಅನಾಥಾಲಯಗಳಿಗೆ  ಭೇಟಿ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವಿಕೆ. ಅತಿಥಿ ಸತ್ಕಾರ ಯೋಗ. ಗಣೇಶ ಕವಚ, ವಿಷ್ಣು ಸಹಸ್ರನಾಮ, ನವಗ್ರಹ ಸ್ತೋತ್ರ ಓದಿ.

12. ಮೀನ:
ಸತ್ಕಾರ್ಯಗಳ ನೇತೃತ್ವದಿಂದ ಆನಂದ. ಹಿಡಿದ ಕಾರ್ಯ ಕೈಗೂಡುವ ಭರವಸೆಯಿಂದ  ಮುಂದಡಿಯಿಡಿ.  ಮನೆಮಂದಿಯಿಂದ  ಒಳ್ಳೆಯ ಸಹಕಾರ, ಸೌಜನ್ಯದ ವಾತಾವರಣ. ಎಲ್ಲರ ಆರೋಗ್ಯ ಉತ್ತಮ. ಪರಿಣತರೊಬ್ಬರ ಸಕಾಲಿಕ ಸಲಹೆಯಿಂದ ಲಾಭ‌.ಗಣೇಶ ಅಷ್ಟಕ, ದತ್ತಾತ್ರೇಯ ಸ್ತೋತ್ರ, ದೇವೀ ಕವಚ ಓದಿ.