ಮನರಂಜನೆಯ ಹೊಸ ತಾಣ 'ನಾನು ಕಿವಿ' - ಓಪನ್ ಮೈಕ್
Bengaluru: ಹೊಸತನದ ಆಲೋಚನೆ & ಪ್ರತಿಭೆಗಳ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ 'ನಾನು ಕಿವಿ' ಎಂಬ ವಿಶಿಷ್ಟ ಓಪನ್ ಮೈಕ್ ಕಾರ್ಯಕ್ರಮವು ಯಶಸ್ವಿಯಾಗಿ ತನ್ನ ಮೊದಲ ಹೆಜ್ಜೆಯಿಟ್ಟಿದೆ.
ಬೆಂಗಳೂರು: ಹೊಸತನದ ಆಲೋಚನೆ & ಪ್ರತಿಭೆಗಳ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ 'ನಾನು ಕಿವಿ' ಎಂಬ ವಿಶಿಷ್ಟ ಓಪನ್ ಮೈಕ್ ಕಾರ್ಯಕ್ರಮವು ಯಶಸ್ವಿಯಾಗಿ ತನ್ನ ಮೊದಲ ಹೆಜ್ಜೆಯಿಟ್ಟಿದೆ.
'ನಿಮ್ಮ ಧ್ವನಿಗೆ ನಮ್ಮ ಕಿವಿ' ಎಂಬ ಆಕರ್ಷಕ ಟ್ಯಾಗ್‌ಲೈನ್‌ನೊಂದಿಗೆ ಶುರುವಾಗಿರುವ ಈ ಕಾರ್ಯಕ್ರಮವು, ಆಯ್ದ ಭಾನುವಾರ ಹಾಗೂ ರಜಾ ದಿನಗಳಂದು ನಡೆಯಲಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು @nanukivi ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನ್ನು ಫಾಲೋ ಮಾಡಬಹುದಾಗಿದೆ.
ಏನಿದು 'ನಾನು ಕಿವಿ' ಓಪನ್ ಮೈಕ್:
ಸಾಮಾನ್ಯವಾಗಿ ಓಪನ್ ಮೈಕ್ ಎಂದರೆ ತಮ್ಮಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಯಾವುದೇ ಹಿಂಜರಿಕೆಯಿಲ್ಲದೆ ವೇದಿಕೆಯ ಮೇಲೆ ಪ್ರದರ್ಶಿಸಲು ನೀಡುವ ಮುಕ್ತ ಅವಕಾಶ. 'ನಾನು ಕಿವಿ' ಕೂಡ ಅದೇ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಕಥೆ, ಕವಿತೆ, ಹಾಡು, ನೃತ್ಯ, ಅನುಭವ, ಯಶೋಗಾಥೆ ಸೇರಿದಂತೆ ಹತ್ತಾರು ವಿಷಯಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿಕೊಡುತ್ತದೆ. ವೇದಿಕೆ ಹತ್ತಲು ಹಿಂಜರಿಯುವವರಿಗೂ ಇದು ಮೊದಲ ವೇದಿಕೆಯಾಗಲಿದೆ. ಬೆಂಗೂರಿನ ನಾಗರಭಾವಿಯಲ್ಲಿನ ಐಸಿರಿ ಎಂಟರ್‌ಪ್ರೈಸಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಪ್ರತಿಭೆ ಪ್ರದರ್ಶನಕ್ಕಷ್ಟೇ ಅಲ್ಲ, ವೀಕ್ಷಕರಿಗೂ ಮುಕ್ತ ಆಹ್ವಾನ:
'ನನ್ನಲ್ಲಿ ಯಾವುದೇ ವಿಶೇಷ ಪ್ರತಿಭೆಯಿಲ್ಲ' ಅಥವಾ 'ವೇದಿಕೆಯ ಮೇಲೆ ಬರಲು ಮುಜುಗರವಾಗುತ್ತದೆ' ಎನ್ನುವವರಿಗೂ ಈ ಕಾರ್ಯಕ್ರಮ ಮುಕ್ತವಾಗಿ ಸ್ವಾಗತ ಕೋರುತ್ತದೆ. ಇಲ್ಲಿ ಕೇವಲ ಪ್ರದರ್ಶಕರಷ್ಟೇ ಅಲ್ಲದೆ, ವೀಕ್ಷಕರಾಗಿಯೂ ಭಾಗವಹಿಸಬಹುದು. ಅತ್ಯಂತ ಆತ್ಮೀಯ ಹಾಗೂ 'ಹೋಮ್ಲಿ' ಅನಿಸುವ ಈ ಕಾರ್ಯಕ್ರಮದಲ್ಲಿ ಕೂತು, ಕಲಾಪ್ರದರ್ಶನಗಳನ್ನು ಆನಂದಿಸುತ್ತಾ ತಾನಾಗಿಯೇ ಎಲ್ಲರೊಂದಿಗೆ ಬೆರೆಯುವ ವಾತಾವರಣ ಸೃಷ್ಟಿಯಾಗುತ್ತದೆ.
ಆಟ, ಮಾತು, ಸಿನಿಮಾ, ಹರಟ ಇನ್ನೂ ಹತ್ತು ಹಲವು:
ಕೇವಲ ಕಲಾ ಪ್ರದರ್ಶನಕ್ಕಷ್ಟೇ ಸೀಮಿತವಾಗದೆ, ಹೊಸ ಪರಿಚಯಗಳು, ಹರಟೆ, ಆಟಗಳು, ಸಿನಿಮಾ, ಸೃಜನಾತ್ಮಕ ಚಟುವಟಿಕೆಗಳು ಸೇರಿದಂತೆ ನೆರೆದವರ ಮನಸ್ಸನ್ನು ತಣಿಸುವ ಭರವಸೆಯನ್ನು ಸಂಘಟಕರು ನೀಡಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನಷ್ಟು ವಿಶೇಷ ಸಂಚಿಕೆಗಳನ್ನು ಆಯೋಜಿಸುವ ಯೋಜನೆಯೂ ಇದೆ ಎಂದು ಆಯೋಜಕಿ ಸುಮಾ ಕಂಚೀಪಾಲ್ ಹೇಳುತ್ತಾರೆ.