ಖಾಲಿ ಸೈಟ್ ಸ್ವಚ್ಛ ಮಾಡದಿದ್ದರೆ ಭಾರೀ ದಂಡ: ಆಗಸ್ಟ್ 15ಕ್ಕೆ ಡೆಡ್‌ಲೈನ್

GBA: ರಾಜಧಾನಿಯನ್ನು ಸ್ವಚ್ಛ ನಗರ ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಿಟ್ಟ ಹೆಜ್ಜೆ ಇಟ್ಟಿದೆ. ಆ.15 ರೊಳಗೆ ಖಾಲಿ ನಿವೇಶನಗಳಲ್ಲಿರುವ ತ್ಯಾಜ್ಯವನ್ನು ತೆಗೆಯುವಂತೆ ಮಾಲೀಕರಿಗೆ ಸೂಚಿಸಿದೆ. ಆ ಬಳಿಕ ದಂಡ ವಿಧಿಸುವುದಾಗಿ ತಿಳಿಸಿದೆ.

Aug 11, 2026 - 17:27
ಖಾಲಿ ಸೈಟ್ ಸ್ವಚ್ಛ ಮಾಡದಿದ್ದರೆ ಭಾರೀ ದಂಡ: ಆಗಸ್ಟ್ 15ಕ್ಕೆ ಡೆಡ್‌ಲೈನ್

ಬೆಂಗಳೂರು: ರಾಜಧಾನಿಯನ್ನು ಸ್ವಚ್ಛ ನಗರ ಮಾಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ದಿಟ್ಟ ಹೆಜ್ಜೆ ಇಟ್ಟಿದೆ. 'ತ್ಯಾಜ್ಯದಿಂದ ಸ್ವಾತಂತ್ರ್ಯ' ಅಭಿಯಾನ ಕೈಗೊಂಡಿದ್ದು, ಆ.15 ರೊಳಗೆ ಖಾಲಿ ನಿವೇಶನಗಳಲ್ಲಿರುವ ತ್ಯಾಜ್ಯವನ್ನು ತೆಗೆಯುವಂತೆ ಮಾಲೀಕರಿಗೆ ಸೂಚಿಸಿದೆ. ಆ ಬಳಿಕ ದಂಡ ವಿಧಿಸುವುದಾಗಿ ತಿಳಿಸಿದೆ. 

ಸೋಮವಾರದಂದು 'ದಂಡ ಮೊತ್ತ'ದ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಜಿಬಿಎ ಬಿಡುಗಡೆಗೊಳಿಸಿದೆ. ಅದು ನಿವೇಶನಗಳ ಅಳತೆಗೆ ತಕ್ಕಂತೆ ರೂ.19,200 ರಿಂದ ರೂ.1.28 ಲಕ್ಷ ವರೆಗೆ ಇರಲಿದೆ ಎಂದು ಹೇಳಿದೆ.  

ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಆ.15 ರೊಳಗೆ ನಗರದಲ್ಲಿರುವ ಎಲ್ಲಾ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸಬೇಕು. ನಗರ ಪಾಲಿಕೆಯು ನಿಯೋಜಿಸಿರುವ ನಿಗದಿತ ಸ್ಥಳಗಳಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು. ಈಗಾಗಲೇ, ಸ್ವಚ್ಛತಾ ಕಾರ್ಯಕ್ಕಾಗಿ ಸಂಬಂಧಪಟ್ಟ ನಗರ ಪಾಲಿಕೆಗಳು ತಿಳಿಸಿರುವ ಸೇವಾ ಪೂರೈಕೆದಾರರ ಸೇವೆಯನ್ನು ಪಡೆಯಬಹುದಾಗಿದೆ' ಎಂದು ಹೇಳಿದ್ದಾರೆ. 

ಸೈಟ್ ಚದರ ಅಡಿ ಕಾಂಪೌಂಡ್ ಇಲ್ಲದ ಸೈಟ್‌ಗೆ ಕಾಂಪೌಂಡ್ ಇರುವ ಸೈಟ್‌ಗೆ ತ್ಯಾಜ್ಯ ಸಾಗಣೆ ಮೊತ್ತ ಸೇರಿ (ಒಟ್ಟು)
600 ರೂ.6,700 ರೂ.7,700 ರೂ.19,200
1200 ರೂ.13,400 ರೂ.14,400 ರೂ.38,400
1500 ರೂ.16,750 ರೂ.17,750 ರೂ.48,000
2500 ರೂ.26,800 ರೂ.27,800 ರೂ.76,800
4000 ರೂ.46,700 ರೂ.47,700 ರೂ.1,28,000

ಈ ಅಭಿಯಾನಕ್ಕೆ ಸಾರ್ವಜನಿಕರ ಬೆಂಬಲವನ್ನು ಜಿಬಿಎ ಕೋರಿದೆ. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಕಂಡುಬಂದರೆ, ಅದರ ಫೋಟೋ ಹಾಗೂ ಸ್ಥಳದ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು 9448197197 ವಾಟ್ಸಾಪ್ ಸಂಖ್ಯೆ ಕಳುಹಿಸಬಹುದು. ದೂರುದಾರರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.