Today Gold Price: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಚಿನಿವಾರ ಪೇಟೆಯಲ್ಲಿ ಇಂದು (ಸೋಮವಾರ) ಚಿನ್ನದ ದರ ಅತ್ಯಲ್ಪ ಇಳಿಕೆಯಾಗಿದೆ. ಆದಾಗ್ಯೂ ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ.
ರಾಜ್ಯದಲ್ಲಿ (ಬೆಂಗಳೂರು) 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.440 ಕಡಿಮೆಯಾಗಿ ರೂ.1,50,980 ಇದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ರೂ.400 ಇಳಿಕೆಯಾಗಿ ರೂ.1,38,400ಕ್ಕೆ ಬಂದಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ ರೂ.330 ಕಡಿಮೆಯಾಗಿ ರೂ.1,13,240 ಆಗಿದೆ.
ಅದೇ ರೀತಿಯಲ್ಲಿ 1 ಕೆಜಿ ಬೆಳ್ಳಿ ರೂ.2,40,000 ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.
ಷೇರುಪೇಟೆ: ಸಕಾರತ್ಮಕ ವಹಿವಾಟು
ಬಿಎಸ್‌ಇ ಸೆನ್ಸೆಕ್ಸ್ 298.99 ಅಂಕಗಳು ಏರಿಕೆಯಾಗಿ 72,771.32 ಅಂಕಗಳಿಗೆ ತಲುಪಿದೆ. ನಿಫ್ಟಿ 72.75 ಅಂಕಗಳು ಹೆಚ್ಚಳವಾಗಿ 22,593.20 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಟಾಟಾ ಸ್ಟೀಲ್, ಎಲ್&ಟಿ, ಎಂ&ಎಂ, ಟಿಸಿಎಸ್ ಹಾಗೂ ರಿಲಯನ್ಸ್ ಷೇರುಗಳು ಲಾಭದಲ್ಲಿವೆ. ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟದಲ್ಲಿವೆ.