ಇಂದ್ರಪ್ರಸ್ಥ ವಿದ್ಯಾಲಯ: ಸ್ಪೆಕ್ಟ್ರಂ-2026 ಗಣಿತ & ವಿಜ್ಞಾನ ಮಾದರಿ ಪ್ರದರ್ಶನ

Indraprastha Vidyalaya: ಉಪ್ಪಿನಂಗಡಿಯ 'ಇಂದ್ರಪ್ರಸ್ಥ ವಿದ್ಯಾಲಯ'ದ ಇಂದ್ರಪ್ರಭಾ ಸಭಾಭವನದಲ್ಲಿ ಈಚೆಗೆ 'ಸ್ಪೆಕ್ಟ್ರಂ-2026' ಗಣಿತ - ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Aug 13, 2026 - 17:32
ಇಂದ್ರಪ್ರಸ್ಥ ವಿದ್ಯಾಲಯ: ಸ್ಪೆಕ್ಟ್ರಂ-2026 ಗಣಿತ & ವಿಜ್ಞಾನ ಮಾದರಿ ಪ್ರದರ್ಶನ

ಉಪ್ಪಿನಂಗಡಿ: ಇಲ್ಲಿನ 'ಇಂದ್ರಪ್ರಸ್ಥ ವಿದ್ಯಾಲಯ'ದ ಇಂದ್ರಪ್ರಭಾ ಸಭಾಭವನದಲ್ಲಿ ಈಚೆಗೆ 'ಸ್ಪೆಕ್ಟ್ರಂ-2026' ಗಣಿತ - ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮುಖ್ಯ ತೀರ್ಪುಗಾರರಾಗಿ ಆಗಮಿಸಿದ ಕಲ್ಲಡ್ಕ ಶ್ರೀರಾಮ ಕನ್ನಡ ಮಾಧ್ಯಮ ಪ್ರೌಢಶಾಲೆಯ ಗಣಿತ ಶಿಕ್ಷಕಿ ವಿನುತಾ ಎಸ್.ಎನ್, ವಿಜ್ಞಾನ ಶಿಕ್ಷಕ ಜಯಪ್ರಸಾದ್ ಎನ್.ಪಿ ಮತ್ತು ಇಂದ್ರಪ್ರಸ್ಥ ಪಿಯು ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ಡಾ.ರಜತಾ ಅವರು, ಈ ವಿಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿದರು.
 
ಸುಮಾರು 96 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಮ್ಮಲ್ಲಿರುವ ರಚನಾ ಕೌಶಲ್ಯವನ್ನು ಪ್ರದರ್ಶಿಸಿದರು. 

ಮಕ್ಕಳಿಂದ ತಯಾರಿಸಿದ ಸಂಶೋಧನಾತ್ಮಕ ಮಾದರಿಗಳಾದ ಪರಿಷ್ಕೃತ ಇಂಟರ್‌ಲಾಕ್ ಲೇಯಿಂಗ್ ಮೆಷಿನ್, ಗಣಿತದ ಎಲ್ಲಾ ಪ್ರಮೇಯಗಳನ್ನು ವಿನೂತನ ರೀತಿಯಲ್ಲಿ ವಿವರಿಸಿದ ಮಾದರಿಗಳು ತೀರ್ಪುಗಾರರ ಮೆಚ್ಚುಗೆ ಪಡೆದವು. ಕೃತಕ ಉಪಗ್ರಹಗಳಲ್ಲಿ ಜೋಡಿಸಬಹುದಾದ ನವೀಕೃತ ಸೆನ್ಸರ್‌ಗಳನ್ನು ಬಳಸಿದ ಮಾದರಿಗಳು ಎಲ್ಲರ ಗಮನ ಸೆಳೆದವು. 

ಪ್ರತಿ ತರಗತಿಯ ಮಕ್ಕಳು ಮಾದರಿಗಳ ಪ್ರದರ್ಶನವನ್ನು ವೀಕ್ಷಿಸಿ, ಸ್ಪರ್ಧಾರ್ಥಿಗಳಿಂದ ಅವುಗಳ ಕಾರ್ಯ ವಿಧಾನಗಳನ್ನು ಅರಿತುಕೊಂಡರು. 

ಈ ವೇಳೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಸುವರ್ಣ ಅವರು ಪ್ರದರ್ಶನ ನೋಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ಮತ್ತು ಶಾಲಾ ಶಿಕ್ಷಕವೃಂದದವರು ಉಪಸ್ಥಿತರಿದ್ದರು. 

ಸಂಸ್ಥೆಯ ಸಹಶಿಕ್ಷಕಿ ನಿಶಿತಾ ಕೆ.ಕೆ, ಜ್ಯೋತಿಕಿರಣ್ ಈ ಕಾರ್ಯಕ್ರಮದ ಆಯೋಜಕರಾಗಿದ್ದು, ಸಹ ಶಿಕ್ಷಕಿ ದೀಕ್ಷಿತಾ ಮತ್ತು ಹರಿಣಾಕ್ಷಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Day2day News ನವ ಮಾಧ್ಯಮದ ವೃತ್ತಿಪರ ಡಿಜಿಟಲ್‌ ಮಾಧ್ಯಮ ಸಂಸ್ಥೆ. ವೆಬ್‌ ನ್ಯೂಸ್‌ ಪೋರ್ಟಲ್‌ನಿಂದ ಹಿಡಿದು ಇನ್‌ಸ್ಟಾ, ಎಕ್ಸ್, ಫೇಸ್‌ಬುಕ್‌, ಯೂಟ್ಯೂಬ್‌, ನ್ಯೂಸ್‌ ಆಪ್‌ವರೆಗೆ ಎಲ್ಲ ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ - ಮಾಹಿತಿಯನ್ನು ಸರಳ, ಸಂಕ್ಷಿಪ್ತವಾಗಿ ನೀಡುತ್ತದೆ. ಜತೆಗೆ Day2day Short News ಕರ್ನಾಟಕದ ಮೊದಲ ಶಾರ್ಟ್‌ ಆಪ್‌. Swipe ಮಾಡಿ ಸುದ್ದಿ ಓದಿ. ನಮ್ಮ ಎಲ್ಲ ಪ್ಲಾಟ್‌ಫಾರ್ಮ್‌ಗಳಲ್ಲಿ ಸುದ್ದಿ & ಜಾಹೀರಾತು ನೀಡಲು 7070708646ಗೆ ಸಂಪರ್ಕಿಸಿ.

Sanjay Ambekar ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, 9 ವರ್ಷ ಅನುಭವವನ್ನು ಹೊಂದಿದ್ದೇನೆ. ಸದ್ಯ 'ಡೇ2ಡೇ ನ್ಯೂಸ್'ನಲ್ಲಿ ಕೆಲಸ ಮಾಡುತ್ತಿದ್ದೇನೆ.