ಪುತ್ತೂರು: ಅರುಣ ಸಾರಥಿ ಆಟೋ ಚಾಲಕ ಮಾಲೀಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ
Puttur: ಅರುಣ ಸಾರಥಿ ಆಟೋ ಚಾಲಕ ಮಾಲೀಕರ ಸಂಘಕ್ಕೆ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಪುತ್ತೂರು: ಇಲ್ಲಿನ ಮುಕ್ರಂಪಾಡಿ ಸುಭದ್ರಾ ಸಭಾಭವನದಲ್ಲಿ ಅರುಣ ಸಾರಥಿ ಆಟೋ ಚಾಲಕ-ಮಾಲೀಕರ ಸಂಘದ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷರಾಗಿ ಸಂದೇಶ್ ನಾೖಕ್ ಕೆಯ್ಯೂರು, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ವಳತ್ತಡ್ಕ, ಕೋಶಾಧಿಕಾರಿಯಾಗಿ ಶಿವಪ್ರಸಾದ್ ಮುಕ್ರಂಪಾಡಿ, ಉಪಾಧ್ಯಕ್ಷರಾಗಿ ತೀರ್ಥರಾಮ ಜಿಡೆಕಲ್ಲು, ಪ್ರವೀಣ್ ಕೆಮ್ಮಾಯಿ, ಚಂದ್ರಶೇಖರ ಕಬಕ, ಸತೀಶ್ ಕುಂಬ್ರ, ಗುರುಪ್ರಸಾದ್ ದೊಡ್ಡಡ್ಕ, ಕಾರ್ಯದರ್ಶಿಗಳಾಗಿ ಸುರೇಶ್ ಬಂಗಾರಡ್ಕ, ಸ್ವಸ್ತಿಕ್ ತಾರಿಗುಡ್ಡೆ, ಯತೀಶ್ ಮಚ್ಚಿಮಲೆ, ಹರೀಶ್ ಕೌಡಿಚ್ಚಾರು ಹಾಗೂ ಚಂದ್ರಶೇಖರ ರಾಗಿದಕುಮೇರು ಅವರುಗಳು ನೇಮಕಗೊಂಡಿದ್ದಾರೆ.

ಈ ವೇಳೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಮರುವಾಳ, ಪ್ರಜ್ವಲ್ ಘಾಟೆ, ಸಂಘಟನಾ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಸಹ ಸಂಘಟನಾ ಕಾರ್ಯದರ್ಶಿಗಳಾದ ಪ್ರಶಾಂತ್ ನೆಕ್ಕಿಲಾಡಿ, ಅನಿಲ್ ಗೌಡ ತೆಂಕಿಲ ಮತ್ತು ಮನೀಶ್ ಕುಲಾಲ್ ಸೇರಿದಂತೆ ಇತರರು ಇದ್ದರು.